Arjun Sarjas much-anticipated film Sita Payana to release on Feb. 14
x

ಚಿತ್ರದ ನಾಯಕ ನಿರಂಜನ್ ಹಾಗೂ ನಾಯಕಿ ಐಶ್ವರ್ಯ ಅರ್ಜುನ್ 

ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಚಿತ್ರ ಫೆ. 14ರಂದು ಬಿಡುಗಡೆ

ಐಶ್ವರ್ಯ ಅರ್ಜುನ್ ಹಾಗೂ ನಿರಂಜನ್ ನಾಯಕ ಮತ್ತು ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ "ಸೀತಾ ಪಯಣ" ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.


Click the Play button to hear this message in audio format

ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದ, ಶ್ರೀ ರಾಮ್ ಫಿಲಂಸ್ ಇಂಟರ್‌ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾಗೂ ಐಶ್ವರ್ಯ ಅರ್ಜುನ್ ಹಾಗೂ ನಿರಂಜನ್ ನಾಯಕ ಮತ್ತು ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ "ಸೀತಾ ಪಯಣ" ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಸಿನಿಮಾದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿರುವ ನಾಯಕ ಹಾಗೂ ನಾಯಕಿ

ಈಗಾಗಲೇ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನಮನ ಸೆಳೆದಿರುವ ಈ ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣ ಮತ್ತು ನಿರ್ದೇಶನವನ್ನು ಅರ್ಜುನ್ ಸರ್ಜಾ ಮಾಡಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ ನಿರ್ದೇಶನ, ಜಿ.ಬಾಲಮುರುಗನ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ ನಿರ್ದೇಶನ ಹಾಗೂ ಶ್ರಸ್ತಿ ನೃತ್ಯ ನಿರ್ದೇಶನ ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಐಶ್ವರ್ಯ ಅರ್ಜುನ್, ನಿರಂಜನ್, ಅರ್ಜುನ್ ಸರ್ಜಾ, ಸತ್ಯರಾಜ್, ಪ್ರಕಾಶ್ ರೈ ಮತ್ತು ಕೋವೈ ಸರಳಾ ಮುಂತಾದವರಿದ್ದಾರೆ. ಅರ್ಜುನ್ ಅವರ ಸೋದರಳಿಯ ನಟ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಹೆಸರೇ ಸೂಚಿಸುವಂತೆ ಇದೊಂದು ಸುಂದರ ಪಯಣದ ಕಥೆಯಾಗಿದ್ದು, ಅಭಿ ಮತ್ತು ಸೀತಾ ಎಂಬ ಇಬ್ಬರು ಹದಿಹರೆಯದವರ ಜೀವನದ ಭಾವನಾತ್ಮಕ ಏರಿಳಿತಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿರಂಜನ್ ಮತ್ತು ಐಶ್ವರ್ಯ ಅರ್ಜುನ್ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯಲು ಸಿದ್ಧರಾಗಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರ ಸಂಗಮವಾಗಿದೆ. ಬಹುಮುಖ ಪ್ರತಿಭೆ ಪ್ರಕಾಶ್ ರೈ ಹಾಗೂ ಹಿರಿಯ ನಟ ಸತ್ಯರಾಜ್ ಅವರು ಚಿತ್ರದ ತೂಕವನ್ನು ಹೆಚ್ಚಿಸಿದ್ದರೆ, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಕೇವಲ ನಿರ್ದೇಶನವಷ್ಟೇ ಅಲ್ಲದೆ ಒಂದು ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಕನ್ನಡದ ಖ್ಯಾತ ನಟರೊಬ್ಬರು ಈ ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಹಿಸಿರುವುದು ಚಿತ್ರದ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಸದ್ಯ ಚಿತ್ರದ ಡಬ್ಬಿಂಗ್ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ತಾಂತ್ರಿಕವಾಗಿ ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸುತ್ತಿರುವ ಚಿತ್ರತಂಡ, ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜಿಸಿದೆ.

Read More
Next Story