ರಶ್ಮಿಕಾ-ರಕ್ಷಿತ್ ಬ್ರೇಕಪ್| ರಶ್ಮಿಕಾ ಮಂದಣ್ಣ ತಾಯಿಯ ʼಆಡಿಯೋ ಕ್ಲಿಪ್ʼ ವೈರಲ್?
x

ರಶ್ಮಿಕಾ-ರಕ್ಷಿತ್ ಬ್ರೇಕಪ್| ರಶ್ಮಿಕಾ ಮಂದಣ್ಣ ತಾಯಿಯ ʼಆಡಿಯೋ ಕ್ಲಿಪ್ʼ ವೈರಲ್?

ಈ ವೈರಲ್ ಆಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಅವರು ನಟ ರಕ್ಷಿತ್ ಶೆಟ್ಟಿ ಮತ್ತು ಅವರ ಕುಟುಂಬದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.


Click the Play button to hear this message in audio format

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದಂತೆಯೇ, ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋ ಕ್ಲಿಪ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೈರಲ್ ಆಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಅವರು ನಟ ರಕ್ಷಿತ್ ಶೆಟ್ಟಿ ಮತ್ತು ಅವರ ಕುಟುಂಬದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಅವರ ಹಳೆಯ ಸಂಬಂಧ ಹಾಗೂ ನಿಶ್ಚಿತಾರ್ಥ ಮುರಿದುಬಿದ್ದ ಹಿಂದಿನ ಕಾರಣಗಳ ಬಗ್ಗೆ ಇದರಲ್ಲಿ ಪ್ರಸ್ತಾಪಿಸಲಾಗಿದೆ.

ಸುಮನ್ ಮಂದಣ್ಣ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋ ಕ್ಲಿಪ್

ಆಡಿಯೋ ಕ್ಲಿಪ್‌ನಲ್ಲಿ ಏನಿದೆ?

ತಮ್ಮ ಮಗಳನ್ನು 21ನೇ ವಯಸ್ಸಿನಲ್ಲೇ 35 ವರ್ಷದ ರಕ್ಷಿತ್ ಶೆಟ್ಟಿಗೆ ಮದುವೆ ಮಾಡಿಕೊಡಲು ಒಪ್ಪಿದ್ದೇ ದೊಡ್ಡತನ ಎಂದು ಹೇಳಿರುವ ಸುಮನ್ ಮಂದಣ್ಣ, ಆ ಸಮಯದಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. "ರಶ್ಮಿಕಾ ಸಿನಿಮಾದ ಇಂಟರ್ವ್ಯೂಗಳಲ್ಲಿ ಬ್ಯುಸಿಯಾಗಿದ್ದಾಗಲೂ ರಕ್ಷಿತ್ ಅವರನ್ನು ನೋಡಲು ಬರಲೇಬೇಕು ಎಂದು ಒತ್ತಡ ಹೇರಲಾಗುತ್ತಿತ್ತು. ಒಳಗಡೆ ತುಂಬಾ ನಡೆದಿದೆ. ನಾನು ಸ್ಟ್ರಾಂಗ್‌ ಆಗಿರೋದಕ್ಕೆ ಬಚಾವ್.‌ ನಮ್ಮ ಹುಡುಗಿ ಹೇಗೆ ಬೆಳಿತಿದ್ದಾಳೆ ಅಂತ ಖುಷಿ ಪಡಬೇಕು. ಏನು ವಿಷಯ ಇದ್ದರೂ, ಇವನು ತಲೆ ಹಾಕೋದು ಯಾಕೆ. ನಾನು ಯಾವ ಗ್ಯಾರಂಟಿಯಲ್ಲಿ ಮದುವೆ ಮಾಡಿಕೊಡಲಿ ಇವರಿಗೆ? 21 ವರ್ಷದ ಹುಡುಗಿಯನ್ನು 35 ವರ್ಷ ಹುಡುಗನಿಗೆ ಮದುವೆ ಮಾಡಿ ಕೊಡಲು ಒಪ್ಪಿದ್ದೆ ನನ್ನ ದೊಡ್ಡತನ. ಆವತ್ತು ಒಂದು ದಿನ 2 ಗಂಟೆಗೆ ರಶ್ಮಿಕಾ ಸಿನಿಮಾ ಕುರಿತ ಇಂಟರ್ವ್ಯೂ ಮುಗಿದಿದೆ. ನೀನು ಕಾರು ತಗೊಂಡು ಬಾ ರಕ್ಷಿತ್‌ನ ನೋಡೋಕೆ ಅಂತ ಹೇಳುತ್ತಿದ್ದಾರೆ. ಇವರು ಮನುಷ್ಯರಾ ಇವರು? ನನ್ನ ಮಗಳಿಗೆ ಏನಾದರೂ ತೊಂದರೆಯಾಗಿದ್ದರೆ ಯಾರು ಹೊಣೆ? ಆಗ ರಶ್ಮಿಕಾ ಹೇಳಿದ್ದು- ನಾನು ಬರಲು ಸಾಧ್ಯವಿಲ್ಲ. ನನಗೆ ಇವತ್ತಿನ ದಿನ ಇಂಟರ್ವ್ಯೂ ತುಂಬಾ ಇಂಪಾರ್ಟೆಂಟ್‌," ಎಂದು ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ, ರಶ್ಮಿಕಾ ಸಿನಿಮಾ ರಂಗವನ್ನೇ ಬಿಡಬೇಕು ಮತ್ತು ಈ ಬಗ್ಗೆ ಟ್ವೀಟ್ ಮಾಡಬೇಕು ಎಂದು ರಕ್ಷಿತ್ ಕಡೆಯವರು ಒತ್ತಾಯಿಸುತ್ತಿದ್ದರು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ರಕ್ಷಿತ್ ಅವರ ತಾಯಿ ಕೂಡ ಸುಮನ್ ಅವರಿಂದ ಕ್ಷಮೆಯಾಚನೆಗೆ ಒತ್ತಾಯಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದು, ಈ ಸಂಬಂಧ ಮುರಿದುಬಿದ್ದದ್ದೇ ನನ್ನ ಪುಣ್ಯ ಎಂಬ ಅಸಮಾಧಾನದ ಮಾತುಗಳು ಆಡಿಯೋದಲ್ಲಿವೆ.

ವಾಸ್ತವವೇನು?

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಆಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ, ಈ ಆಡಿಯೋ ಕ್ಲಿಪ್ ನಿಜವಾಗಿಯೂ ಸುಮನ್ ಮಂದಣ್ಣ ಅವರದ್ದೇ ಅಥವಾ ಎಡಿಟ್ ಮಾಡಲಾದ ಫೇಕ್ ಆಡಿಯೋನಾ ಎಂಬ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

Read More
Next Story