ರಶ್ಮಿಕಾ-ವಿಜಯ್‌ ಮೆಹೆಂದಿ ಶಾಸ್ತ್ರ ಹೇಗಿತ್ತು ಗೊತ್ತಾ? ಫೋಟೋಸ್‌ ಫುಲ್‌ ವೈರಲ್‌
x

ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವದ ಸುಂದರ ಕ್ಷಣಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ರಶ್ಮಿಕಾ-ವಿಜಯ್‌ ಮೆಹೆಂದಿ ಶಾಸ್ತ್ರ ಹೇಗಿತ್ತು ಗೊತ್ತಾ? ಫೋಟೋಸ್‌ ಫುಲ್‌ ವೈರಲ್‌

Rashmika-Vijay|ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (ViRosh), ಇದೀಗ ತಮ್ಮ ಮದುವೆಯ ಮುನ್ನಾ ದಿನ ನಡೆದ ಮೆಹೆಂದಿ ಮತ್ತು 'ಪ್ರಧಾನಂ' ಶಾಸ್ತ್ರದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


Click the Play button to hear this message in audio format

ಇತ್ತೀಚೆಗಷ್ಟೇ ಹಸೆಮಣೆ ಏರಿದ ಜೋಡಿ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಮೆಹೆಂದಿ ಮತ್ತು ಪ್ರಧಾನಂ ಶಾಸ್ತ್ರದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಫೆಬ್ರವರಿ 25 ರಂದು ಉದಯಪುರದಲ್ಲಿ ನಡೆದ ಈ ಸಂಭ್ರಮದ ಸಂಜೆ, ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿತ್ತು. ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ರಶ್ಮಿಕಾ ಮತ್ತು ವಿಜಯ್, ಸಂಭ್ರಮದ ಅಮೂಲ್ಯ ಕ್ಷಣಗಳಲ್ಲಿ ಮುಳುಗಿದ್ದರು.

ರಶ್ಮಿಕಾ ಮಂದಣ್ಣ ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, "ಅದು ಪ್ರಧಾನಂ ಮತ್ತು ಮೆಹೆಂದಿಯ ಸಂಜೆ. ಎಲ್ಲವೂ ಅದ್ಭುತವಾಗಿತ್ತು ಆದರೆ ಅಷ್ಟೇ ವೇಗವಾಗಿ ಮುಗಿದುಹೋಯಿತು" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ರಶ್ಮಿಕಾ ತಮ್ಮ ತಂಗಿಯ ಜೊತೆಗಿನ ಭಾವುಕ ಕ್ಷಣಗಳನ್ನು ಹಾಗೂ ಗೆಳೆಯರ ಬಳಗದೊಂದಿಗೆ ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ವಿಜಯ್ ದೇವರಕೊಂಡ ಕೂಡ ಈ ಸಂಭ್ರಮದ ಕ್ಷಣಗಳನ್ನು ಹಂಚಿಕೊಳ್ಳುತ್ತಾ, "ಅತ್ಯಂತ ಸಂತೋಷದ ಸಂಜೆ, ಮನಸಾರೆ ಬದುಕಿದ ಕ್ಷಣಗಳವು. ಆ ಸಂಜೆ ಇನ್ನೂ ನೂರು ಗಂಟೆಗಳ ಕಾಲ ಇರಬಾರದಿತ್ತೇ ಎಂದು ನನಗೆ ಅನ್ನಿಸುತ್ತಿದೆ" ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂಜೆಗಾಗಿ ಜೋಡಿ ಬಣ್ಣಬಣ್ಣದ ವಿನ್ಯಾಸದ ಉಡುಪುಗಳನ್ನು ಧರಿಸಿದ್ದರು. ವಿಜಯ್ ದೇವರಕೊಂಡ ಅವರು ಗಾಢ ನೀಲಿ ಬಣ್ಣದ ಧೋತಿ ಮತ್ತು ಹಸಿರು ಕುರ್ತಾ ಧರಿಸಿ ಮಿಂಚಿದರೆ, ರಶ್ಮಿಕಾ ಅವರು ಕನ್ನಡಿ ಕೆಲಸದ ವಿನ್ಯಾಸವಿರುವ ಆಕರ್ಷಕ ಉಡುಪಿನಲ್ಲಿ ಮಿನುಗುತ್ತಿದ್ದರು.

ಈ ತಾರಾ ಜೋಡಿ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರಿದ್ದರು. ಮದುವೆಯ ನಂತರ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಔತಣಕೂಟದಲ್ಲಿ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು.

Read More
Next Story