ಧುರಂಧರ್ -2 ಚಿತ್ರಕ್ಕೆ ರಜನಿಕಾಂತ್ ಫಿದಾ; ಅಣ್ಣನ ತ್ಯಾಗ ನೆನೆದ ಹಳೆಯ ವಿಡಿಯೋ ವೈರಲ್
x

ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಚಿತ್ರವನ್ನು ಸೂಪರ್‌ಸ್ಟಾರ್ ರಜನಿಕಾಂತ್ 'ಬಾಕ್ಸ್ ಆಫೀಸ್ ಬಾಪ್' ಎಂದು ಹೊಗಳಿದ್ದಾರೆ.

ಧುರಂಧರ್ -2 ಚಿತ್ರಕ್ಕೆ ರಜನಿಕಾಂತ್ ಫಿದಾ; ಅಣ್ಣನ ತ್ಯಾಗ ನೆನೆದ ಹಳೆಯ ವಿಡಿಯೋ ವೈರಲ್

ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಚಿತ್ರವನ್ನು ಸೂಪರ್‌ಸ್ಟಾರ್ ರಜನಿಕಾಂತ್ 'ಬಾಕ್ಸ್ ಆಫೀಸ್ ಬಾಪ್' ಎಂದು ಹೊಗಳಿದ್ದಾರೆ.


Click the Play button to hear this message in audio format

ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಬಾಕ್ಸ್ ಆಫೀಸ್‌ನ ಬಾಪ್' ಎಂದು ಕರೆದಿದ್ದಾರೆ.

ರಜನಿಕಾಂತ್ ಅವರ ಈ ಹೊಗಳಿಕೆಯ ಬೆನ್ನಲ್ಲೇ 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅವರು ನೀಡಿದ್ದ ಭಾವನಾತ್ಮಕ ಭಾಷಣದ ಹಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

1999ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಕಾರ್ಗಿಲ್ ಯುದ್ಧ ಪೀಡಿತ ಸೈನಿಕರಿಗಾಗಿ ಆಯೋಜಿಸಿದ್ದ ನಿಧಿ ಸಂಗ್ರಹ ಸಮಾರಂಭದಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಅಂದು ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನಿಕಾಂತ್, ಯುದ್ಧದ ನೋವು ತಮಗೆ ವೈಯಕ್ತಿಕವಾಗಿ ತಿಳಿದಿದೆ ಎಂದು ಹೇಳುತ್ತಾ ಭಾವುಕರಾಗಿದ್ದರು. ತಮ್ಮ ಹಿರಿಯ ಸಹೋದರ ನಾಗೇಶ್ವರ ರಾವ್ ಅವರು ಭಾರತೀಯ ಸೇನೆಯಲ್ಲಿದ್ದರು ಮತ್ತು 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು ಎಂದು ಅವರು ಬಹಿರಂಗಪಡಿಸಿದ್ದರು.

ಸೈನಿಕರ ತ್ಯಾಗಕ್ಕೆ ಪ್ರತಿಯಾಗಿ ನಾವು ಏನನ್ನೂ ನೀಡಲು ಸಾಧ್ಯವಿಲ್ಲ, ಅವರ ಕುಟುಂಬಗಳು ಅನುಭವಿಸುವ ನೋವು ವರ್ಣನಾತೀತ ಎಂದು ರಜನಿಕಾಂತ್ ಹೇಳಿದ್ದ ಮಾತುಗಳು ಈಗ ಮತ್ತೆ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿವೆ.

ಇತ್ತೀಚೆಗೆ 'ಧುರಂಧರ್ 2' ಚಿತ್ರವನ್ನು ವೀಕ್ಷಿಸಿದ ರಜನಿಕಾಂತ್ ಅವರು ಎಕ್ಸ್ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

"ಅದ್ಭುತ ಸಿನಿಮಾ.. ಆದಿತ್ಯ ಧರ್ ಬಾಕ್ಸ್ ಆಫೀಸ್‌ನ ಬಾಪ್! ರಣವೀರ್ ಸಿಂಗ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ಈ ಚಿತ್ರವನ್ನು ನೋಡಲೇಬೇಕು. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.

ರಜನಿಕಾಂತ್ ಅವರ ಈ ಮೆಚ್ಚುಗೆಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆದಿತ್ಯ ಧರ್, "ಸರ್, ನಮ್ಮೆಲ್ಲರಿಗೂ ಮನರಂಜನೆಯ ಮಾನದಂಡವೇ ನೀವು. ನಿಮ್ಮಿಂದಲೇ ನಾವು ದೊಡ್ಡ ಕನಸುಗಳನ್ನು ಕಾಣಲು ಕಲಿತೆವು. ನಿಮ್ಮ ಈ ಹಾರೈಕೆ ನನಗೆ ಸಿಕ್ಕ ಅತಿದೊಡ್ಡ ಪ್ರಶಸ್ತಿ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ರಣವೀರ್ ಸಿಂಗ್ ನಟನೆಯ ಈ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ರಜನಿಕಾಂತ್ ಅವರ ಈ ಹಳೆಯ ವಿಡಿಯೋ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿನಿಮಾಗಳ ವಿಷಯಕ್ಕೆ ಬಂದರೆ, ರಜನಿಕಾಂತ್ ಅವರು ಮುಂದಿನ ದಿನಗಳಲ್ಲಿ 'ಜೈಲರ್ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸಿಬಿ ಚಕ್ರವರ್ತಿ ನಿರ್ದೇಶನದ 'ತಲೈವರ್ 173' ಮತ್ತು ನೆಲ್ಸನ್ ದಿಲೀಪ್‌ಕುಮಾರ್ ಅವರೊಂದಿಗಿನ 'KHxRK' ಚಿತ್ರಗಳನ್ನು ಕೂಡ ಅವರು ಘೋಷಿಸಿದ್ದಾರೆ.

Read More
Next Story