Rakkasapuradol teaser| ರಾಜ್ ಬಿ. ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಬಿಡುಗಡೆ: ಶೆಟ್ರ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ
x

ಮಾಟ-ಮಂತ್ರ, ರಹಸ್ಯಮಯ ಕಾಡು: ಕುತೂಹಲ ಕೆರಳಿಸಿದ ‘ರಕ್ಕಸಪುರದೋಳ್’ ಟೀಸರ್.

Rakkasapuradol teaser| ರಾಜ್ ಬಿ. ಶೆಟ್ಟಿ ‘ರಕ್ಕಸಪುರದೋಳ್’ ಟೀಸರ್ ಬಿಡುಗಡೆ: ಶೆಟ್ರ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ಈ ಸಿನಿಮಾವು ಕೊಳ್ಳೇಗಾಲದ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಆಗಿದೆ. ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ರಕ್ಕಸಪುರದೋಳ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಸು ಫ್ರಮ್ ಸೋ’ ಮತ್ತು ‘45’ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ರಾಜ್ ಬಿ. ಶೆಟ್ಟಿ ಮತ್ತೊಮ್ಮೆ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ರಕ್ಕಸಪುರದೋಳ್ ಟೀಸರ್ ಹೈಲೈಟ್ಸ್

ಬಿಡುಗಡೆಯಾಗಿರುವ ಟೀಸರ್ ದಟ್ಟ ಕಾನನ, ಮಾಟ-ಮಂತ್ರ ಮತ್ತು ರಹಸ್ಯಮಯ ಸರಣಿ ಸಾವುಗಳ ಸುತ್ತ ಕಥೆ ಸಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಬ್ಬ ವ್ಯಕ್ತಿಯೊಳಗೂ ಇರುವ ‘ಒಳ್ಳೆಯದು ಮತ್ತು ಕೆಟ್ಟದ್ದು’ ಎಂಬ ಎರಡು ಮುಖಗಳ ಹೋರಾಟವನ್ನು ಈ ಸಿನಿಮಾ ಬಿಂಬಿಸಲಿದೆ. ಚಿತ್ರದ ಕಥೆಯು ಕೊಳ್ಳೇಗಾಲದ ಹಿನ್ನೆಲೆಯನ್ನು ಹೊಂದಿದ್ದು, ಕ್ರೈಂ ಥ್ರಿಲ್ಲರ್ ಮಾದರಿಯಲ್ಲಿದೆ.

ಖ್ಯಾತ ನಿರ್ದೇಶಕ ‘ಜೋಗಿ’ ಪ್ರೇಮ್ ಅವರ ಶಿಷ್ಯ ರವಿ ಸಾರಂಗ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಪ್ರಖ್ಯಾತ ಸಾಹಸ ನಿರ್ದೇಶಕ ಡಾ. ಕೆ. ರವಿವರ್ಮ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿ ಸ್ವಾದಿಷ್ಟ ಕೃಷ್ಣ ನಟಿಸಿದ್ದು, ಅರ್ಚನಾ ಕೊಟ್ಟಿಗೆ, ಬಿ. ಸುರೇಶ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಟೀಸರ್ ಮೂಲಕ ಕುತೂಹಲ ಮೂಡಿಸಿರುವ ‘ರಕ್ಕಸಪುರದೋಳ್’ ಸಿನಿಮಾ 2026ರ ಫೆಬ್ರವರಿ 6ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ರಾಜ್ ಬಿ. ಶೆಟ್ಟಿ ಅವರ ಅಭಿನಯದ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗುತ್ತಿದ್ದು, ಅದರ ಬೆನ್ನಲ್ಲೇ ಫೆಬ್ರವರಿಯಲ್ಲಿ ‘ರಕ್ಕಸಪುರದೋಳ್’ ಸಿನಿಮಾ ಕೂಡ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದಂತಾಗಿದೆ.

Read More
Next Story