
ಆಸ್ಕರ್ 2026 ವಿಜೇತರ ಪಟ್ಟಿ: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ!
Oscars 2026| 98ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಮೈಕೆಲ್ ಬಿ ಜೋರ್ಡಾನ್ ಮತ್ತು ಜೆಸ್ಸಿ ಬಕ್ಲಿ ಮಿಂಚಿದ್ದಾರೆ. 'ಸಿನ್ನರ್ಸ್' ಹಾಗೂ 'ಒನ್ ಬ್ಯಾಟಲ್ ಆಫ್ಟರ್ ಅನದರ್' ಚಿತ್ರಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ವಿಜೇತರ ಸಂಪೂರ್ಣ ಪಟ್ಟಿ ಮತ್ತು ದಾಖಲೆಗಳ ವಿವರ ಇಲ್ಲಿದೆ.
ಸಿನಿ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾದ ಆಸ್ಕರ್ ಅವಾರ್ಡ್‌ಗಳ 2026 ಆವೃತ್ತಿಯಲ್ಲಿ ಹಲವು ಪ್ರಮುಖ ಸಿನಿಮಾಗಳು ಮತ್ತು ಕಲಾವಿದರು ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ವಿಶೇಷವಾಗಿ “ಸಿನ್ನರ್ಸ್” ಹಾಗೂ “ಒನ್ ಬ್ಯಾಟಲ್ ಆಫ್ಟರ್ ಅನದರ್” ಸಿನಿಮಾಗಳು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮಾಡಿವೆ. 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ 'ಸಿನರ್ಸ್' (Sinners) ಚಿತ್ರದ ಅದ್ಭುತ ನಟನೆಗಾಗಿ ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇದು ಅವರ ವೃತ್ತಿಜೀವನದ ಮೊದಲ ಆಸ್ಕರ್ ಗೌರವವಾಗಿದೆ. ಮತ್ತೊಂದೆಡೆ 'ಹ್ಯಾಮ್ನೆಟ್' (Hamnet) ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಜೆಸ್ಸಿ ಬಕ್ಲಿ ಅವರು 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಪ್ರಬಲ ಪೈಪೋಟಿಯ ನಡುವೆಯೂ ಜೆಸ್ಸಿ ಬಕ್ಲಿ ಅವರು ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರನೇ ಕಪ್ಪು ವರ್ಣೀಯ ನಟ:
ಈ ಪ್ರಶಸ್ತಿ ಪಡೆಯುವ ಮೂಲಕ ಮೈಕೆಲ್ ಬಿ ಜೋರ್ಡಾನ್ ಹೊಸ ದಾಖಲೆ ಬರೆದಿದ್ದಾರೆ. ಆಸ್ಕರ್ ಇತಿಹಾಸದಲ್ಲಿ 'ಅತ್ಯುತ್ತಮ ನಟ' ಗೌರವ ಪಡೆದ ಆರನೇ ಕಪ್ಪು ವರ್ಣೀಯ ನಟ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಅವರು ಸಿಡ್ನಿ ಪಾಯಿಟಿಯರ್, ಡೆನ್ಜೆಲ್ ವಾಷಿಂಗ್ಟನ್, ಜೇಮೀ ಫಾಕ್ಸ್, ಫಾರೆಸ್ಟ್ ವಿಟೇಕರ್ ಮತ್ತು ವಿಲ್ ಸ್ಮಿತ್ ಅವರಂತಹ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಗಮನಾರ್ಹವೆಂದರೆ, ಹಾಲೆ ಬೆರಿ ಅವರು ಈವರೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಏಕೈಕ ಕಪ್ಪು ವರ್ಣೀಯ ಮಹಿಳೆಯಾಗಿದ್ದಾರೆ.
ಖ್ಯಾತ ನಟ ಜೇವಿಯರ್ ಬಾರ್ಡೆಮ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಪ್ರಿಯಾಂಕಾ, ಈ ಸಾಲಿನ 'ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್' ವಿಭಾಗದ ಪ್ರಶಸ್ತಿಯನ್ನು ಘೋಷಿಸಿ, ವಿಜೇತರಿಗೆ ಹಸ್ತಾಂತರಿಸಿದರು.
ಪ್ರಮುಖ ಪ್ರಶಸ್ತಿಗಳು
• ಉತ್ತಮ ನಿರ್ದೇಶಕ: ಪಾಲ್ ಥಾಮಸ್ ಆಂಡರ್ಸನ್ – ಒನ್ ಬ್ಯಾಟಲ್ ಆಫ್ಟರ್ ಅನದರ್ (ವಿಜೇತ)
ಪೋಷಕ ನಟ/ನಟಿ
• ಉತ್ತಮ ಪೋಷಕ ನಟ: ಶಾನ್ ಪೆನ್ – ಒನ್ ಬ್ಯಾಟಲ್ ಆಫ್ಟರ್ ಅನದರ್
• ಉತ್ತಮ ಪೋಷಕ ನಟಿ: ಆಂಟಿ ಮಾಲಿಗನ್ – ವೆಪನ್ಸ್
ಕಥೆ ಮತ್ತು ಬರವಣಿಗೆ ವಿಭಾಗ
• ಉತ್ತಮ ಮೂಲ ಕಥೆ (ಒರಿಜಿನಲ್ ಸ್ಕ್ರೀನ್‌ಪ್ಲೇ): ರಾಯನ್ ಕೂಗ್ಲರ್ – ಸಿನ್ನರ್ಸ್
• ಉತ್ತಮ ಆಧಾರಿತ ಕಥೆ (ಅಡಾಪ್ಟೆಡ್ ಸ್ಕ್ರೀನ್‌ಪ್ಲೇ): ಪಾಲ್ ಥಾಮಸ್ ಆಂಡರ್ಸನ್ – ಒನ್ ಬ್ಯಾಟಲ್ ಆಫ್ಟರ್ ಅನದರ್
ತಾಂತ್ರಿಕ ವಿಭಾಗಗಳು
• ಉತ್ತಮ ಸಿನೆಮಾಟೋಗ್ರಫಿ: ಸಿನ್ನರ್ಸ್
• ಉತ್ತಮ ಚಿತ್ರ ಸಂಪಾದನೆ: ಒನ್ ಬ್ಯಾಟಲ್ ಆಫ್ಟರ್ ಅನದರ್
• ಉತ್ತಮ ನಿರ್ಮಾಣ ವಿನ್ಯಾಸ: ಫ್ರಾಂಕೆನ್‌ಸ್ಟೈನ್
• ಉತ್ತಮ ವಸ್ತ್ರ ವಿನ್ಯಾಸ: ಕೇಟ್ ಬ್ಯಾನ್‌ಲಿ – ಫ್ರಾಂಕೆನ್‌ಸ್ಟೈನ್
• ಉತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಫ್ರಾಂಕೆನ್‌ಸ್ಟೈನ್
• ಉತ್ತಮ ಧ್ವನಿ: ಎಫ್1
• ಉತ್ತಮ ವಿಶುವಲ್ ಇಫೆಕ್ಟ್: ಅವತಾರ್: ಫೈರ್ ಅಂಡ್ ಆಶ್
ಸಂಗೀತ ವಿಭಾಗ
• ಉತ್ತಮ ಮೂಲ ಸಂಗೀತ: ಲುಡ್‌ವಿಗ್ ಗೋರಾನ್ಸನ್ – ಸಿನ್ನರ್ಸ್
• ಉತ್ತಮ ಮೂಲ ಹಾಡು: “ಗೋಲ್ಡನ್” – ಕೆ-ಪಾಪ್ ಡೀಮನ್ ಹಂಟರ್ಸ್
ಅನಿಮೇಷನ್ ವಿಭಾಗ
• ಉತ್ತಮ ಅನಿಮೇಟೆಡ್ ಫೀಚರ್ ಚಿತ್ರ: ಲಿಟಲ್ ಆಲ್ ದ ಕ್ಲಾವ್ಸ್
• ಉತ್ತಮ ಅನಿಮೇಟೆಡ್ ಕಿರುಚಿತ್ರ: ದಿ ಗರ್ಲ್ ಹೂ ಕ್ರೈಡ್ ಪರ್ಳ್ಸ್
ಡಾಕ್ಯುಮೆಂಟರಿ ವಿಭಾಗ
• ಉತ್ತಮ ಡಾಕ್ಯುಮೆಂಟರಿ ಫೀಚರ್ ಫಿಲ್ಮ್: ಮೈ ಅಗೇನ್
• ಉತ್ತಮ ಡಾಕ್ಯುಮೆಂಟರಿ ಕಿರುಚಿತ್ರ: ಆಲ್ ದ ಬ್ಯೂಟಿ
ಇತರೆ ವಿಭಾಗಗಳು
• ಉತ್ತಮ ಅಂತರಾಷ್ಟ್ರೀಯ ಫೀಚರ್ ಫಿಲ್ಮ್: ಸೆಂಟಿಮೆಂಟಲ್ ವ್ಯಾಲ್ಯೂ
• ಉತ್ತಮ ಲೈವ್ ಆಕ್ಷನ್ ಕಿರುಚಿತ್ರ:
ದಿ ಸಿಂಗರ್ಸ್ – ಸಂಯುಕ್ತ ವಿಜೇತ
ಟು ಪೀಪಲ್ ಎಕ್ಸ್ಚೇಂಜಿಂಗ್ ಸಲೈವಾ – ಸಂಯುಕ್ತ
• ಉತ್ತಮ ಕಾಸ್ಟಿಂಗ್: ಕ್ಯಾಸಾಂಡ್ರಾ ಕುಲುಕುಂಡಿಸ್ – ಒನ್ ಬ್ಯಾಟಲ್ ಆಫ್ಟರ್ ಅನದರ್

