ಹೃತಿಕ್–ಕಿಯಾರಾ–ಜೂನಿಯರ್ ಎನ್‌ಟಿಆರ್ ನಟನೆಯ ‘ವಾರ್ 2’ ಈಗ ನೆಟ್‌ಫ್ಲಿಕ್ಸ್‌ನಲ್ಲಿ
x

ಅಕ್ಟೋಬರ್‌ನಲ್ಲಿ OTT – ‘ವಾರ್ 2’

ಹೃತಿಕ್–ಕಿಯಾರಾ–ಜೂನಿಯರ್ ಎನ್‌ಟಿಆರ್ ನಟನೆಯ ‘ವಾರ್ 2’ ಈಗ ನೆಟ್‌ಫ್ಲಿಕ್ಸ್‌ನಲ್ಲಿ

‘ವಾರ್ 2’ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 364.25 ಕೋಟಿ ರೂ. ಗಳಿಸಿದ್ದು, ಮೊದಲ ಭಾಗವಾದ ‘ವಾರ್’ನ 471 ಕೋಟಿ ರೂ. ಗಳಿಕೆಯನ್ನು ಹಿಂದಿಕ್ಕಲು ವಿಫಲವಾಗಿತ್ತು.


Click the Play button to hear this message in audio format

ಹೃತಿಕ್ ರೋಷನ್ ಮತ್ತು ಕಿಯಾರಾ ಅಡ್ವಾಣಿ, ಜೂನಿಯರ್‌ ಎನ್‌ಟಿಆರ್ ಅಭಿನಯದ ‘ವಾರ್ 2’ ಸಿನಿಮಾ ಇದೀಗ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ.ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಹೃತಿಕ್ ರೋಷನ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾವು ಬಾಲಿವುಡ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರ ಮೊದಲ ಹಿಂದಿ ಚಿತ್ರವಾಗಿದ್ದು, ಬಿಡುಗಡೆ ಸಂದರ್ಭದಲ್ಲಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಲಿಲ್ಲ. ಇದೀಗ ನೆಟ್‌ಫ್ಲಿಕ್ಸ್ ಅಕ್ಟೋಬರ್ 9ರಿಂದ ‘ವಾರ್ 2’ ಚಿತ್ರವನ್ನು ಸ್ಟ್ರೀಮಿಂಗ್‌ಗೆ ಬಿಡುಗಡೆ ಮಾಡುತ್ತಿದೆ. ಚಿತ್ರವನ್ನು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ವೀಕ್ಷಿಸಬಹುದು ಎಂದು ನೆಟ್‌ಫ್ಲಿಕ್ಸ್ ಬುಧವಾರ ಅಧಿಕೃತವಾಗಿ ಘೋಷಿಸಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, “ಕೋಪವನ್ನು ದ್ವಿಗುಣಗೊಳಿಸಿ, ಆಕ್ರೋಶವನ್ನು ದ್ವಿಗುಣಗೊಳಿಸಿ! ಯುದ್ಧಕ್ಕೆ ಸಿದ್ಧರಿದ್ದೀರಾ? ಅಕ್ಟೋಬರ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ‘ವಾರ್ 2’ ವೀಕ್ಷಿಸಿ,” ಎಂದು ಪೋಸ್ಟ್‌ ಮಾಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ 2019ರ ‘ವಾರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರದಲ್ಲಿ, ಹೃತಿಕ್ ಕಬೀರ್ ಪಾತ್ರವನ್ನು ಪುನಃ ನಿರ್ವಹಿಸಿದ್ದು, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ವಿಕ್ರಮ್ ಮತ್ತು ಕಾವ್ಯಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ವಾರ್ 2’ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 364.25 ಕೋಟಿ ರೂ. ಗಳಿಸಿದ್ದು, ಮೊದಲ ಭಾಗವಾದ ‘ವಾರ್’ನ 471 ಕೋಟಿ ರೂ. ಗಳಿಕೆಯನ್ನು ಹಿಂದಿಕ್ಕಲು ವಿಫಲವಾಗಿತ್ತು.

ಇತ್ತೀಚೆಗೆ ಹೃತಿಕ್ ರೋಷನ್ ಚಿತ್ರ ಕುರಿತು ಪ್ರತಿಕ್ರಿಯೆ ನೀಡಿದ್ದು, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಬೀರ್ ಪಾತ್ರದ ಚಿತ್ರಗಳನ್ನು ಹಂಚಿಕೊಂಡು, “ಎಲ್ಲವೂ ತುಂಬಾ ಪರಿಪೂರ್ಣವಾಗಿ ಕಾಣುತ್ತಿತ್ತು. ಆದರೆ ಅದರ ಹಿಂದೆ ಒಂದು ಧ್ವನಿ ಹೇಳುತ್ತಿತ್ತು ‘ಇದು ತುಂಬಾ ಸುಲಭವಾಗಿದೆ’. ಪ್ರತಿಯೊಂದು ಚಿತ್ರವೂ ಹೋರಾಟವಾಗಿರಬೇಕೆಂದಿಲ್ಲ, ಕೆಲವೊಮ್ಮೆ ವಿಶ್ರಾಂತಿಯೂ ಅಗತ್ಯ,” ಎಂದು ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದರು.

Read More
Next Story