ಪತಿ ಧರ್ಮೇಂದ್ರ ಅಭಿನಯದ ಕೊನೆಯ ಚಿತ್ರ ಇಕ್ಕಿಸ್ ನೋಡಲು ಧೈರ್ಯ ಸಾಲುತ್ತಿಲ್ಲ; ಹೇಮಾ ಮಾಲಿನಿ
x

ಪತಿ ಧರ್ಮೇಂದ್ರ ನೆನೆದು ಕಣ್ಣೀರಿಟ್ಟ ಹೇಮಾ ಮಾಲಿನಿ

ಪತಿ ಧರ್ಮೇಂದ್ರ ಅಭಿನಯದ ಕೊನೆಯ ಚಿತ್ರ 'ಇಕ್ಕಿಸ್' ನೋಡಲು ಧೈರ್ಯ ಸಾಲುತ್ತಿಲ್ಲ; ಹೇಮಾ ಮಾಲಿನಿ

ನಮ್ಮ ಕುಟುಂಬದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವೆಲ್ಲರೂ ಪರಸ್ಪರ ಆತ್ಮೀಯವಾಗಿದ್ದೇವೆ. ಜನರು ಕೇವಲ ಗಾಸಿಪ್‌ಗಾಗಿ ಇಂತಹ ಕತೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಮಾ ಮಾಲಿನಿ ಬೇಸರ ವ್ಯಕ್ತಪಸಿಡಿದ್ದಾರೆ.


Click the Play button to hear this message in audio format

ಬಾಲಿವುಡ್‌ನ 'ಹಿ-ಮ್ಯಾನ್' ಎಂದೇ ಖ್ಯಾತರಾಗಿದ್ದ ದಿ. ಧರ್ಮೇಂದ್ರ ಅವರ ಪತ್ನಿ, ಸಂಸದೆ ಹೇಮಾ ಮಾಲಿನಿ, ತಮ್ಮ ಪತಿಯ ಕೊನೆಯ ಸಿನಿಮಾವನ್ನು ನೋಡಲು ತಮಗೆ ಇನ್ನೂ ಧೈರ್ಯ ಸಾಲುತ್ತಿಲ್ಲ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ 'ಇಕ್ಕಿಸ್' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಇದು ಧರ್ಮೇಂದ್ರ ಅವರು ಬಣ್ಣ ಹಚ್ಚಿದ ಕೊನೆಯ ಸಿನಿಮಾ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಹೇಮಾ ಮಾಲಿನಿ, "ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನಾನು ಮಥುರಾದಲ್ಲಿದ್ದೆ. ಅಲ್ಲಿನ ಕೆಲಸಗಳಲ್ಲಿ ನಿರತಳಾಗಿದ್ದರಿಂದ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಅದರ ಜೊತೆಗೆ, ಈಗ ಆ ಚಿತ್ರವನ್ನು ನೋಡುವುದು ನನಗೆ ತುಂಬಾ ಕಷ್ಟಕರವಾಗಬಹುದು ಮತ್ತು ಮನಸ್ಸಿಗೆ ಅತೀವ ನೋವುಂಟು ಮಾಡಬಹುದು. ನನ್ನ ಹೆಣ್ಣುಮಕ್ಕಳು ಸಹ ಇದನ್ನೇ ಹೇಳುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ಗಾಯ ಇನ್ನೂ ಹಸಿಯಾಗಿರುವುದರಿಂದ, ಆ ನೋವು ಸ್ವಲ್ಪ ಕಡಿಮೆಯಾದ ನಂತರ ನಾನು ಈ ಚಿತ್ರವನ್ನು ನೋಡುತ್ತೇನೆ" ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಧರ್ಮೇಂದ್ರ ಅವರ ನಿಧನದ ನಂತರ ಕುಟುಂಬದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಹೇಮಾ ಮಾಲಿನಿ ಸ್ಪಷ್ಟನೆ ನೀಡಿದರು. "ನಮ್ಮ ಕುಟುಂಬದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಪರಸ್ಪರ ಪ್ರೀತಿ ಮತ್ತು ಗೌರವದಿಂದ ಇದ್ದೇವೆ. ಜನರು ಕೇವಲ ಗಾಸಿಪ್‌ಗಾಗಿ ಇಂತಹ ಕತೆಗಳನ್ನು ಕಟ್ಟುತ್ತಿದ್ದಾರೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ವಿವರಣೆ ನೀಡುವ ಅಗತ್ಯ ನನಗಿಲ್ಲ. ನಾವು ಸುಖವಾಗಿದ್ದೇವೆ" ಎಂದು ಅವರು ವದಂತಿಗಳಿಗೆ ತೆರೆ ಎಳೆದರು.

'ಇಕ್ಕಿಸ್' ಸಿನಿಮಾವು ಪರಮವೀರ ಚಕ್ರ ಪುರಸ್ಕೃತ ಎರಡನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಅವರ ಜೀವನ ಆಧಾರಿತ ಚಿತ್ರವಾಗಿದೆ. ಇದರಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಧರ್ಮೇಂದ್ರ ಅವರು ಅರುಣ್ ಖೇತ್ರಪಾಲ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Read More
Next Story