Virosh Wedding| ಕೈಲಾಸದ ಶಿವ-ಪಾರ್ವತಿಯರಂತೆ ಕಂಗೊಳಿಸಿದ ವಿಜಯ್-ರಶ್ಮಿಕಾ
x

ಸದಾ ಟ್ರೆಂಡ್‌ ಸೆಟ್ ಮಾಡುವ ಈ ಜೋಡಿ, ತಮ್ಮ ಮದುವೆಯಲ್ಲಿ ಆಧುನಿಕ ವೈಭವಕ್ಕಿಂತ ಹೆಚ್ಚಾಗಿ ಭಾರತೀಯ ಸಂಪ್ರದಾಯ ಮತ್ತು ಪರಂಪರೆಗೆ ಒತ್ತು ನೀಡಿದ್ದರು. 

Virosh Wedding| ಕೈಲಾಸದ ಶಿವ-ಪಾರ್ವತಿಯರಂತೆ ಕಂಗೊಳಿಸಿದ ವಿಜಯ್-ರಶ್ಮಿಕಾ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಸಾಂಪ್ರದಾಯಿಕ ಅಂಧ್ರ ಮತ್ತು ಕೊಡವ ಶೈಲಿಯಲ್ಲಿ ನಡೆದ ಈ ಅದ್ದೂರಿ ವಿವಾಹದಲ್ಲಿ, ಜೋಡಿ ಧರಿಸಿದ್ದ ಪುರಾತನ ಶೈಲಿಯ ಆಭರಣಗಳು ಎಲ್ಲರ ಗಮನ ಸೆಳೆಯುತ್ತಿವೆ.


Click the Play button to hear this message in audio format

ನಟ ವಿಜಯ್ ದೇವರಕೊಂಡ ಮತ್ತು 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರು ಗುರುವಾರ ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ವಿವಾಹದಲ್ಲಿ ಎಲ್ಲರ ಗಮನ ಸೆಳೆದದ್ದು ದಂಪತಿಗಳ ಆಯ್ಕೆಯ ಪುರಾತನ ಶೈಲಿಯ ಚಿನ್ನಾಭರಣಗಳು ಮತ್ತು ದೇವಾಲಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮನಮೋಹಕ ಅಲಂಕಾರಗಳು.

ದಂಪತಿಗಳ ಆಯ್ಕೆಯ ಪುರಾತನ ಶೈಲಿಯ ಚಿನ್ನಾಭರಣಗಳು ಮತ್ತು ದೇವಾಲಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮನಮೋಹಕ ಅಲಂಕಾರಗಳು ಗಮನ ಸೆಳೆದಿವೆ.

ಸದಾ ಟ್ರೆಂಡ್‌ ಸೆಟ್ ಮಾಡುವ ಈ ಜೋಡಿ, ತಮ್ಮ ಮದುವೆಯಲ್ಲಿ ಆಧುನಿಕ ವೈಭವಕ್ಕಿಂತ ಹೆಚ್ಚಾಗಿ ಭಾರತೀಯ ಸಂಪ್ರದಾಯ ಮತ್ತು ಪರಂಪರೆಗೆ ಒತ್ತು ನೀಡಿದ್ದರು. ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದರೆ, ವಿಜಯ್ ದೇವರಕೊಂಡ ಶ್ವೇತ ವರ್ಣದ ಪಂಚೆ ಮತ್ತು ಶಾಲಿನಲ್ಲಿ ರಾಜ ಗಾಂಭೀರ್ಯದಿಂದ ಕಾಣಿಸಿಕೊಂಡರು.

ವಿಜಯ್ ದೇವರಕೊಂಡ ಶ್ವೇತ ವರ್ಣದ ಪಂಚೆ ಮತ್ತು ಶಾಲಿನಲ್ಲಿ ರಾಜ ಗಾಂಭೀರ್ಯದಿಂದ ಕಾಣಿಸಿಕೊಂಡರು.

ರಶ್ಮಿಕಾ ಧರಿಸಿದ್ದ ಪುರಾತನ ಶೈಲಿಯ ಚಿನ್ನದ ಹಾರಗಳು, ಕಿವಿಯೋಲೆಗಳು ಮತ್ತು ಸೊಂಟದ ಪಟ್ಟಿ ದಕ್ಷಿಣ ಭಾರತದ ಪುರಾತನ ದೇವಸ್ಥಾನದ ವಾಸ್ತುಶಿಲ್ಪದ ವಿನ್ಯಾಸಗಳನ್ನು ಒಳಗೊಂಡಿದ್ದವು. ಈ ಆಭರಣಗಳು ಅವರಿಗೆ ಒಂದು ದೈವೀ ಕಳೆಯನ್ನು ನೀಡಿದ್ದವು.

ಈ ಆಭರಣಗಳು ರಶ್ಮಿಕಾ ಅವರಿಗೆ ಒಂದು ದೈವೀ ಕಳೆಯನ್ನು ನೀಡಿದ್ದವು.

ಮದುವೆಯ ಮಂಟಪವು ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ಕೆತ್ತನೆ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿತ್ತು. ನೈಸರ್ಗಿಕ ಹೂವುಗಳು ಮತ್ತು ಮಣ್ಣಿನ ಹಣತೆಗಳ ಬೆಳಕಿನಲ್ಲಿ ಮಂಟಪವು ಒಂದು ಪವಿತ್ರ ದೇವಾಲಯದಂತೆ ಕಂಗೊಳಿಸುತ್ತಿತ್ತು.

ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ನಡೆದ ಈ ವಿವಾಹ ನಡೆಯಿತು.

ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ನಡೆದ ಈ ವಿವಾಹದಲ್ಲಿ, ದೇವಾಲಯದ ಶೈಲಿಯ ಅಲಂಕಾರಗಳು ಆಚರಣೆಯ ಪಾವಿತ್ರ್ಯತೆಯನ್ನು ಮತ್ತಷ್ಟು ಹೆಚ್ಚಿಸಿದವು. ಸಾಂಪ್ರದಾಯಿಕ ಆಭರಣಗಳು ಮತ್ತು ದೈವೀ ಸ್ವರೂಪದ ಅಲಂಕಾರಗಳು ಈ 'ವಿರೋಶ್' ವಿವಾಹವನ್ನು ಕೇವಲ ಒಂದು ಸ್ಟಾರ್ ಮದುವೆಯನ್ನಾಗಿ ಉಳಿಸದೆ, ಒಂದು ಸಾಂಸ್ಕೃತಿಕ ಹಬ್ಬದಂತೆ ಮರೆಯಲಾಗದ ಕ್ಷಣವನ್ನಾಗಿಸಿತು.

ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ವೇದಘೋಷಗಳ ನಡುವೆ ತೆಲುಗು ಸಂಪ್ರದಾಯದಂತೆ ವಿವಾಹ ಕಾರ್ಯಗಳು ನೆರವೇರಿದವು.

ಧಾರ್ಮಿಕ ವಿಧಿವಿಧಾನಗಳು

ಬೆಳಿಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ವೇದಘೋಷಗಳ ನಡುವೆ ತೆಲುಗು ಸಂಪ್ರದಾಯದಂತೆ ವಿವಾಹ ಕಾರ್ಯಗಳು ನೆರವೇರಿದವು. ಬೆಳಿಗ್ಗೆ 11 ರಿಂದ 11.30 ರ ಅವಧಿಯಲ್ಲಿ ಪೂಜಾ ಕಾರ್ಯಗಳು ಹಾಗೂ ಹಿರಿಯರ ಆಶೀರ್ವಾದದೊಂದಿಗೆ ಈ ಜೋಡಿ ಒಂದಾಯಿತು. ಸಂಜೆ ರಶ್ಮಿಕಾ ಅವರ ಕೊಡವ ಮೂಲದ ಸಂಪ್ರದಾಯದಂತೆ ಎರಡನೇ ಬಾರಿ ವಿವಾಹದ ವಿಧಿವಿಧಾನಗಳನ್ನು ಪೂರೈಸುವ ಮೂಲಕ ತಮ್ಮ ಸಂಸ್ಕೃತಿಗೆ ಗೌರವ ಸಲ್ಲಿಸಿದರು.

ಸಂಜೆ ರಶ್ಮಿಕಾ ಅವರ ಕೊಡವ ಮೂಲದ ಸಂಪ್ರದಾಯದಂತೆ ಎರಡನೇ ಬಾರಿ ವಿವಾಹದ ವಿಧಿವಿಧಾನಗಳನ್ನು ಪೂರೈಸುವ ಮೂಲಕ ತಮ್ಮ ಸಂಸ್ಕೃತಿಗೆ ಗೌರವ ಸಲ್ಲಿಸಿದರು.

ಸಂಭ್ರಮದ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳು

ಮದುವೆಗೂ ಮುನ್ನ ನಡೆದ ಹಳದಿ ಮತ್ತು ಸಂಗೀತ ಕಾರ್ಯಕ್ರಮಗಳು ಸಾಕಷ್ಟು ಗಮನ ಸೆಳೆದಿದ್ದವು. ಹಳದಿ ಸಮಾರಂಭದಲ್ಲಿ ಚೆಂಡು ಹೂವು ಹಾಗೂ ಗುಲಾಬಿ ದಳಗಳ ಅಲಂಕಾರದ ನಡುವೆ ಸಂಭ್ರಮ ಮನೆಮಾಡಿತ್ತು. ಸಂಗೀತ ಕಾರ್ಯಕ್ರಮದಲ್ಲಿ ವಿಜಯ್ ಅವರ ತಾಯಿ ಮಾಧವಿ ಅವರು ಭಾವುಕವಾಗಿ ನೃತ್ಯ ಮಾಡಿ ಎಲ್ಲರ ಮನಗೆದ್ದರು. ವಿಶೇಷವಾಗಿ 'ವೈರೋಷ್ ಪ್ರೀಮಿಯರ್ ಲೀಗ್' ಹೆಸರಿನಲ್ಲಿ ವಧು ಮತ್ತು ವರನ ತಂಡಗಳ ನಡುವೆ ನಡೆದ ಕ್ರೀಡಾಕೂಟ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಮದುವೆಗೂ ಮುನ್ನ ನಡೆದ ಹಳದಿ ಮತ್ತು ಸಂಗೀತ ಕಾರ್ಯಕ್ರಮಗಳು ಸಾಕಷ್ಟು ಗಮನ ಸೆಳೆದಿದ್ದವು.

ಮದುವೆಯ ನಂತರ ದಂಪತಿಯ ಪರವಾಗಿ ಮಾಧ್ಯಮದವರಿಗೆ ಸಿಹಿ ಹಂಚಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿವಾಹದ ಫೋಟೋಗಳು ಈಗ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ನವಜೋಡಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

Read More
Next Story