
ಈ ಜೋಡಿಯು ತಮ್ಮ ಮದುವೆಯ ಸ್ವಾಗತ ಕೋರುವ ಸಲುವಾಗಿ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರ ನೀಡಿದ್ದಾರೆ.
Virosh Wedding| ಕೇಂದ್ರ ಸಚಿವ ಅಮಿತ್ ಶಾಗೆ ರಶ್ಮಿಕಾ-ವಿಜಯ್ ಮದುವೆಯ ವಿಶೇಷ ಆಮಂತ್ರಣ; ಪೋಟೋ ವೈರಲ್
ಉದಯಪುರದಲ್ಲಿ ಮದುವೆಯಾಗುವ ಕೆಲವೇ ದಿನಗಳ ಮೊದಲು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ರಶ್ಮಿಕಾ ಮತ್ತು ವಿಜಯ್, ಅವರಿಗೆ ಆಮಂತ್ರಣ ಪತ್ರದೊಂದಿಗೆ ಬೆಳ್ಳಿಯ ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಖ್ಯಾತ ಚಿತ್ರನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆಯ ಸಂಭ್ರಮದ ಸುದ್ದಿಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿವೆ. ಈ ಜೋಡಿಯು ತಮ್ಮ ಮದುವೆಯ ಸ್ವಾಗತ ಕೋರುವ ಸಲುವಾಗಿ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರ ನೀಡಿದ್ದಾರೆ.
ಉದಯಪುರದಲ್ಲಿ ಮದುವೆಯಾಗುವ ಕೆಲವೇ ದಿನಗಳ ಮೊದಲು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ರಶ್ಮಿಕಾ ಮತ್ತು ವಿಜಯ್, ಅವರಿಗೆ ಆಮಂತ್ರಣ ಪತ್ರದೊಂದಿಗೆ ಬೆಳ್ಳಿಯ ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದಿನ ಭೇಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರು ಹಳದಿ ಬಣ್ಣದ ಸೂಟ್ ಧರಿಸಿದ್ದರೆ, ವಿಜಯ್ ದೇವರಕೊಂಡ ಅವರು ಬಿಳಿ ಬಣ್ಣದ ಇಂಡೋ-ವೆಸ್ಟರ್ನ್ ಉಡುಪಿನಲ್ಲಿ ಮಿಂಚಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಶುಭಾಶಯದ ಪತ್ರ
ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ವಿಶೇಷವಾಗಿ ಶುಭ ಹಾರೈಸಿದ್ದಾರೆ. ವಿಜಯ್ ದೇವರಕೊಂಡ ಅವರ ಪೋಷಕರಿಗೆ ಪತ್ರ ಬರೆದಿರುವ ಪ್ರಧಾನಿಯವರು, "ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಆಮಂತ್ರಣ ನೀಡಿದ್ದಕ್ಕೆ ಧನ್ಯವಾದಗಳು. ದೇವರಿಂದ ನಿರ್ದೇಶಿಸಲ್ಪಟ್ಟ ಈ ಸುಂದರ ಜೀವನದ ಹೊಸ ಅಧ್ಯಾಯವು ತೆರೆಯ ಮೇಲಿನ ಸಿನಿಮೀಯ ಮ್ಯಾಜಿಕ್‌ಗಿಂತಲೂ ಅದ್ಬುತವಾಗಿರಲಿ" ಎಂದು ಹಾರೈಸಿದ್ದಾರೆ. ಅಲ್ಲದೆ, ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತಾ, ಸತಿ-ಪತಿಗಳಾಗಿ ಸುಖವಾಗಿ ಬಾಳಲಿ ಎಂದು ಶುಭ ಕೋರಿದ್ದಾರೆ.
ಉದಯಪುರದಲ್ಲಿ ನಡೆದ ಖಾಸಗಿ ವಿವಾಹ ಸಂಭ್ರಮ
ಫೆಬ್ರವರಿ 26 ರಂದು ಉದಯಪುರದ ಐಟಿಸಿ ಮೊಮೆಂಟೋಸ್ ಹೋಟೆಲ್‌ನಲ್ಲಿ ಈ ಅದ್ದೂರಿ ಮದುವೆ ಸಮಾರಂಭ ನಡೆದಿದೆ. ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಮದುವೆಗೆ ಚಿತ್ರರಂಗದ ಕೆಲವೇ ಕೆಲವು ಗಣ್ಯರು ಸಾಕ್ಷಿಯಾದರು. ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ, ರಾಹುಲ್ ರವೀಂದ್ರನ್, ತರುಣ್ ಭಾಸ್ಕರ್ ಹಾಗೂ ನಟಿಯರಾದ ಕಲ್ಯಾಣಿ ಪ್ರಿಯದರ್ಶನ್, ಈಶಾ ರೆಬ್ಬಾ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

