ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ವಿಜಯ್-ರಶ್ಮಿಕಾ ದಂಪತಿ: ನಿವಾಸದಲ್ಲಿ ‘ಔತಣ ಸತ್ಕಾರ
x

ಮನೆಯಲ್ಲಿ ನಡೆದ ಈ ಆಪ್ತ ಭೇಟಿಯ ವೇಳೆ ರಶ್ಮಿಕಾ ಮಂದಣ್ಣ ಬಾಲಕಿಗೆ ಪ್ರೀತಿಯಿಂದ ಲಡ್ಡು ನೀಡಿ, ಆಕೆಯ ಹಣೆಗೆ ಮುತ್ತಿಕ್ಕಿದ್ದಾರೆ.

ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ವಿಜಯ್-ರಶ್ಮಿಕಾ ದಂಪತಿ: ನಿವಾಸದಲ್ಲಿ ‘ಔತಣ ಸತ್ಕಾರ

ಖ್ಯಾತ ಚಿತ್ರನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ, ತಮ್ಮ ಮದುವೆಗೆ ಆಹ್ವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.


Click the Play button to hear this message in audio format

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ, ತಮ್ಮ ಮದುವೆಗೆ ಆಹ್ವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಈ ಬಾಲಕಿಯನ್ನು ಆಹ್ವಾನಿಸಿ ಆಕೆಗೆ ವಿಶೇಷ ಔತಣ ಬಡಿಸುವ ಮೂಲಕ ದಂಪತಿ ತಮ್ಮ ಔದಾರ್ಯ ಮೆರೆದಿದ್ದಾರೆ.

ತೆಲುಗು ಚಿತ್ರರಂಗದ ಸ್ಟಾರ್ ದಂಪತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಇವರ ಮದುವೆಯ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು, "ನನ್ನನ್ನು ಯಾಕೆ ಮದುವೆಗೆ ಕರೆದಿಲ್ಲ? ನನಗೂ ಲಡ್ಡು ಬೇಕು" ಎಂದು ಮುದ್ದಾಗಿ ಪ್ರಶ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದ ವಿಜಯ್ ದೇವರಕೊಂಡ, ಶೀಘ್ರದಲ್ಲೇ ಮನೆಗೆ ಬರುವಂತೆ ಬಾಲಕಿಗೆ ಆಹ್ವಾನ ನೀಡಿದ್ದರು.

ಮನೆಗೆ ಅತಿಥಿಯಾಗಿ ಬಂದ 'ಲಕ್ಕಿ ತಲ್ಲಿ'

ತಮ್ಮ ಮಾತಿನಂತೆ ವಿಜಯ್ ಮತ್ತು ರಶ್ಮಿಕಾ ಆ ಬಾಲಕಿ ಹಾಗೂ ಆಕೆಯ ಕುಟುಂಬವನ್ನು ಹೈದರಾಬಾದ್‌ನ ತಮ್ಮ ನಿವಾಸಕ್ಕೆ ಬರಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 'urs lucky thalli' ಎಂಬ ಖಾತೆಯ ಮೂಲಕ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಿಜಯ್ ದೇವರಕೊಂಡ ಆ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಾ ಮನೆಗೆ ಸ್ವಾಗತಿಸುವುದು ಕಂಡುಬಂದಿದೆ.

ರಶ್ಮಿಕಾ ನೀಡಿದ ಲಡ್ಡು, ವಿಜಯ್ ಬಡಿಸಿದ ಅನ್ನ

ಮನೆಯಲ್ಲಿ ನಡೆದ ಈ ಆಪ್ತ ಭೇಟಿಯ ವೇಳೆ ರಶ್ಮಿಕಾ ಮಂದಣ್ಣ ಬಾಲಕಿಗೆ ಪ್ರೀತಿಯಿಂದ ಲಡ್ಡು ನೀಡಿ, ಆಕೆಯ ಹಣೆಗೆ ಮುತ್ತಿಕ್ಕಿದ್ದಾರೆ. ಅತ್ತ ವಿಜಯ್ ದೇವರಕೊಂಡ ತಾವೇ ಸ್ವತಃ ಆಕೆಗೆ ಅನ್ನ ಬಡಿಸಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಕೂಡ ಉಪಸ್ಥಿತರಿದ್ದು, ಮಗುವಿನೊಂದಿಗೆ ಸಮಯ ಕಳೆದಿದ್ದಾರೆ.

ನಾವು ಫ್ರೆಂಡ್ಸ್ ಅಲ್ವಾ?

ಮಾತುಕತೆಯ ಕೊನೆಯಲ್ಲಿ ಆ ಪುಟ್ಟ ಬಾಲಕಿ, "ಮನಂ ಕೂಡ ಫ್ರೆಂಡ್ಸ್ ಏ ಕದಾ?" (ನಾವು ಕೂಡ ಸ್ನೇಹಿತರೇ ಅಲ್ವಾ?) ಎಂದು ಕೇಳಿದಾಗ ದಂಪತಿ ನಗೆಗಡಲಲ್ಲಿ ತೇಲಿದ್ದಾರೆ. ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ಬಾಲಕಿಯ ಕುಟುಂಬ, "ವಿಜಯ್ ಮತ್ತು ರಶ್ಮಿಕಾ ಅವರ ಸರಳತೆ ಹಾಗೂ ಆತಿಥ್ಯ ನಮಗೆ ಮರೆಯಲಾಗದ ನೆನಪು. ಅವರು ನಟರಾಗಿ ಮಾತ್ರವಲ್ಲದೆ, ಮನುಷ್ಯತ್ವದಲ್ಲೂ ದೊಡ್ಡವರು" ಎಂದು ಗುಣಗಾಣ ಮಾಡಿದ್ದಾರೆ.

ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈ ಜೋಡಿ, ಪ್ರಸ್ತುತ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

Read More
Next Story