
ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಸರಳ ಹಾಗೂ ಸುಂದರ ಸಮಾರಂಭದಲ್ಲಿ ವಿವಾಹವಾದರು.
ವಿರೋಶ್' ಮದುವೆಯ ಮೋಜಿನ ಕ್ಷಣ: ಅಣ್ಣ-ಅತ್ತಿಗೆಯ ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ ಆನಂದ್ ದೇವರಕೊಂಡ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಸಂಭ್ರಮ ಇನ್ನೂ ಮುಗಿದಿಲ್ಲ. ಆನಂದ್ ದೇವರಕೊಂಡ ಅವರ 'ಎಪಿಕ್' ಸಿನಿಮಾ ಹಾಡಿಗೆ ಈ ಕ್ಯೂಟ್ ಜೋಡಿ ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರದ ಸಂಭ್ರಮ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಇತ್ತೀಚೆಗೆ ಹಂಚಿಕೊಂಡಿರುವ ಒಂದು ಮೋಜಿನ ಡ್ಯಾನ್ಸ್ ವಿಡಿಯೋ ಅಭಿಮಾನಿಗಳ ಮನಗೆದ್ದಿದೆ.
ಈ ವಿಡಿಯೋದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಆನಂದ್ ತಮ್ಮ ಸ್ನೇಹಿತರೊಂದಿಗೆ ಹಸಿರು ಲಾನ್ ಮೇಲೆ ಸಖತ್ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಆನಂದ್ ದೇವರಕೊಂಡ ನಟನೆಯ 'ಎಪಿಕ್' ಚಿತ್ರದ 'ಸಂಚಾರಮೆ' ಹಾಡಿಗೆ ಈ ಮೂವರು ಹಾಗೂ ಅವರ ಸ್ನೇಹಿತರ ಬಳಗವು ಎಂಜಾಯ್ ಮಾಡುತ್ತಿರುವುದು ವಿಡಿಯೋದಲ್ಲಿದೆ. ವಿಜಯ್ ದೇವರಕೊಂಡ ಅವರು ಕಲರ್ ಫುಲ್ ಶರ್ಟ್ ಹಾಗೂ ಬಿಳಿ ಟ್ರೌಸರ್ ಧರಿಸಿ ಮಿಂಚುತ್ತಿದ್ದರೆ, ರಶ್ಮಿಕಾ ಮಂದಣ್ಣ ಅವರು ಸಿಂಪಲ್ ಆಗಿ ಶಾರ್ಟ್ಸ್ ಹಾಗೂ ಲೂಸ್ ಶರ್ಟ್ ಧರಿಸಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಆನಂದ್, "ನೋಡಲು ಈ ದೃಶ್ಯ ಕೊಂಚ ಗೊಂದಲಮಯವಾಗಿ ಕಂಡರೂ, ಅಲ್ಲಿ ನೆರೆದಿದ್ದ ನಾವೆಲ್ಲರೂ ಆ ಕ್ಷಣವನ್ನು ಬಹಳ ಖುಷಿಯಿಂದ ಕಳೆದಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಪ್ರೀತಿಪಾತ್ರರೊಂದಿಗೆ ಪ್ರವಾಸ ಮಾಡುವುದು ಮತ್ತು ಕುಣಿಯುವುದು ಜೀವನದ ಸುಂದರ ನೆನಪುಗಳನ್ನು ಸೃಷ್ಟಿಸುತ್ತದೆ ಎಂದು ಅವರು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. 'ವಿರೋಶ್' ಜೋಡಿಯನ್ನು ಈ ರೀತಿ ಒಟ್ಟಾಗಿ ಕಂಡ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಪ್ರೀತಿಯನ್ನು ಹರಿಸುತ್ತಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಜಯ್ ಮತ್ತು ರಶ್ಮಿಕಾ, ಈ ವರ್ಷದ ಫೆಬ್ರವರಿಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆಯ ನಂತರ ತೆಲಂಗಾಣದ ತಮ್ಮ ಹೊಸ ಮನೆಯಲ್ಲಿ ಸತ್ಯನಾರಾಯಣ ವ್ರತ ಪೂಜೆಯನ್ನು ನೆರವೇರಿಸಿದ್ದ ಈ ದಂಪತಿಗಳು, ಆಂಧ್ರ ಮತ್ತು ತೆಲಂಗಾಣದಾದ್ಯಂತ ಅಭಿಮಾನಿಗಳಿಗಾಗಿ ಅನ್ನದಾನವನ್ನು ಕೂಡ ಏರ್ಪಡಿಸಿದ್ದರು. ವೃತ್ತಿಜೀವನದ ವಿಚಾರಕ್ಕೆ ಬಂದರೆ, 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ನಂತರ ಈ ಹಿಟ್ ಜೋಡಿ ಈಗ 'ರಣಬಾಲಿ' ಚಿತ್ರದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಒಂದಾಗಲು ಸಿದ್ಧವಾಗಿದೆ.

