
'ತುಂಬದ್ 2' ಚಿತ್ರವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ.
'ತುಂಬದ್ 2'ಗೆ ಎಂಟ್ರಿ ಕೊಡ್ತಾರಾ ಅಕ್ಷಯ್ ಖನ್ನಾ, ನವಾಜುದ್ದೀನ್ ಸಿದ್ದಿಕಿ?
ಸಿನಿಮಾದ ಪ್ರಬಲ ವಿಲನ್ ಪಾತ್ರಕ್ಕಾಗಿ ಬಾಲಿವುಡ್‌ನ ಪ್ರತಿಭಾವಂತ ನಟರಾದ ಅಕ್ಷಯ್ ಖನ್ನಾ ಅಥವಾ ನವಾಜುದ್ದೀನ್ ಸಿದ್ದಿಕಿ ಅವರ ಹೆಸರುಗಳು ಕೇಳಿಬರುತ್ತಿವೆ.
ಬಾಲಿವುಡ್ ಕಲ್ಟ್ ಕ್ಲಾಸಿಕ್ ಚಿತ್ರ 'ತುಂಬದ್' ಸೃಷ್ಟಿಸಿದ್ದ ರೋಮಾಂಚನ ಮತ್ತು ಭಯದ ವಾತಾವರಣ ಈಗ ಎರಡನೇ ಭಾಗದ ಮೂಲಕ ಮತ್ತೆ ಮರಳಲು ಸಿದ್ಧವಾಗಿದೆ. ನಟ ಮತ್ತು ನಿರ್ಮಾಪಕ ಸೋಹಮ್ ಶಾ ತಮ್ಮ 'ಸೋಹಮ್ ಶಾ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಡಾ. ಜಯಂತಿಲಾಲ್ ಗಡಾ ಅವರ ಪೆನ್ ಸ್ಟುಡಿಯೋಸ್ ಜೊತೆ ಕೈಜೋಡಿಸಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 'ಆರ್‌ಆರ್‌ಆರ್' ಮತ್ತು 'ಗಂಗೂಬಾಯಿ ಕಥಿಯಾವಾಡಿ' ಅಂತಹ ಬೃಹತ್ ಸಿನಿಮಾಗಳನ್ನು ನಿರ್ಮಿಸಿರುವ ಪೆನ್ ಸ್ಟುಡಿಯೋಸ್ ಬೆಂಬಲವಿರುವುದರಿಂದ, 'ತುಂಬದ್ 2' ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.
ವಿಲನ್ ಪಾತ್ರಕ್ಕೆ ಇಬ್ಬರು ದಿಗ್ಗಜರ ಪೈಪೋಟಿ
ಸದ್ಯ ಚಿತ್ರರಂಗದಲ್ಲಿ ಹರಿದಾಡುತ್ತಿರುವ ಬಿಸಿಬಿಸಿ ಸುದ್ದಿಯೆಂದರೆ ಚಿತ್ರದ ಪ್ರಬಲ ಖಳನಾಯಕನ ಪಾತ್ರ. ಮೂಲಗಳ ಪ್ರಕಾರ, ಈ ಚಿತ್ರಕ್ಕೆ ಸವಾಲು ನೀಡಬಲ್ಲ ಒಬ್ಬ ಬಲಿಷ್ಠ ವಿರೋಧಿ ಪಾತ್ರದ ಅವಶ್ಯಕತೆಯಿದೆ. ಈ ಪಾತ್ರಕ್ಕಾಗಿ ಬಹುಮುಖ ಪ್ರತಿಭೆಯ ನಟರಾದ ಅಕ್ಷಯ್ ಖನ್ನಾ ಅಥವಾ ನವಾಜುದ್ದೀನ್ ಸಿದ್ದಿಕಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅಕ್ಷಯ್ ಖನ್ನಾ ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಗಂಭೀರ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಇವರು, ನಕಾರಾತ್ಮಕ ಪಾತ್ರಗಳಲ್ಲಿಯೂ ಮಿಂಚಬಲ್ಲರು ಎಂಬುದು ಈಗಾಗಲೇ ಸಾಬೀತಾಗಿದೆ. ನವಾಜುದ್ದೀನ್ ಸಿದ್ದಿಕಿ ಕಪ್ಪು ಛಾಯೆಯ ಪಾತ್ರಗಳಿಗೆ ಜೀವ ತುಂಬುವಲ್ಲಿ ನವಾಜುದ್ದೀನ್ ಸಿದ್ಧಹಸ್ತರು. ಇಬ್ಬರೂ ನಟರು ತಮ್ಮ ಪಾತ್ರಗಳಿಗೆ ಮಾನಸಿಕ ಆಳ ಮತ್ತು ತೀವ್ರತೆಯನ್ನು ತರುವ ಸಾಮರ್ಥ್ಯ ಹೊಂದಿದ್ದಾರೆ.
ಈ ಪಾತ್ರಕ್ಕಾಗಿ ಬಹುಮುಖ ಪ್ರತಿಭೆಯ ನಟರಾದ ಅಕ್ಷಯ್ ಖನ್ನಾ ಅಥವಾ ನವಾಜುದ್ದೀನ್ ಸಿದ್ದಿಕಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ಜಾಗತಿಕ ಯಶಸ್ಸಿನವರೆಗೆ
2018 ರಲ್ಲಿ ಬಿಡುಗಡೆಯಾದ 'ತುಂಬದ್', ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದರೂ, ನಂತರ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತು. 2024 ರಲ್ಲಿ ಈ ಚಿತ್ರವು ಮರು-ಬಿಡುಗಡೆಗೊಂಡಾಗ ಅಚ್ಚರಿಯ ಬಾಕ್ಸ್ ಆಫೀಸ್ ಗಳಿಕೆ ಮಾಡಿತು. ಮೊದಲ ಬಾರಿ ಸುಮಾರು 15 ಕೋಟಿ ರೂ. ಗಳಿಸಿದ್ದ ಈ ಸಿನಿಮಾ, ರೀ-ರಿಲೀಸ್ ಸಮಯದಲ್ಲಿ38 ಕೋಟಿ ರೂ.ಲೂಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು.
2018 ರಲ್ಲಿ ಬಿಡುಗಡೆಯಾದ 'ತುಂಬದ್', ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿದರೂ, ನಂತರ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿತು.
ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಚಿತ್ರತಂಡವು ಅಧಿಕೃತ ಪಾತ್ರವರ್ಗದ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆಯಿದೆ. ಅಕ್ಷಯ್ ಖನ್ನಾ ಅಥವಾ ನವಾಜುದ್ದೀನ್ ಸಿದ್ದಿಕಿ ಇಬ್ಬರಲ್ಲಿ ಒಬ್ಬರು ಖಳನಾಯಕರಾಗಿ ಎಂಟ್ರಿ ಕೊಡಲಿದ್ದಾರೆ.

