
ಈ ಹಿಂದೆ ತ್ರಿಷಾ ಅವರು ವಿಜಯ್ ಬಗ್ಗೆ ನೀಡಿದ್ದ ಒಂದು ವಿಶೇಷ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ವಿಜಯ್ ಬಗ್ಗೆ ಹಳೆಯ ರಹಸ್ಯ ಬಿಚ್ಚಿಟ್ಟ ತ್ರಿಶಾ: ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿದೆ ಆ ಸಂದರ್ಶನ
ವಿಜಯ್- ತ್ರಿಷಾ ಕೃಷ್ಣನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಸುದ್ದಿಗಳು ಹರಡುತ್ತಿರುವ ಬನ್ನಲ್ಲೇ ಈ ಹಿಂದೆ ತ್ರಿಷಾ ಅವರು ವಿಜಯ್ ಬಗ್ಗೆ ನೀಡಿದ್ದ ಒಂದು ವಿಶೇಷ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ನಟಿ ತ್ರಿಶಾ ಕೃಷ್ಣನ್ ಮತ್ತು ದಳಪತಿ ವಿಜಯ್ ನಡುವಿನ ಡೇಟಿಂಗ್ ವದಂತಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತವೆ. ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಸುದ್ದಿ ಹಬ್ಬಿದ್ದು, ವಿಜಯ್ ಅವರು ಮತ್ತೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ನಡುವೆ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ತ್ರಿಶಾ ಈ ಹಿಂದೆ ವಿಜಯ್ ಕುರಿತು ನೀಡಿದ್ದ ಹಳೆಯ ಹೇಳಿಕೆಗಳು ಈಗ ಮತ್ತೆ ವೈರಲ್ ಆಗುತ್ತಿವೆ. 'ದಿ ಹಿಂದೂ' ಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ತ್ರಿಶಾ ಅವರು ವಿಜಯ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ಸ್ಮರಿಸಿದ್ದಾರೆ. "ನನಗೆ 19 ಅಥವಾ 20 ವರ್ಷವಿದ್ದಾಗ ನಾನು ಮೊದಲು ವಿಜಯ್ ಅವರನ್ನು ಭೇಟಿಯಾಗಿದ್ದೆ. ಸುಮಾರು 20 ವರ್ಷಗಳಿಂದ ಸ್ನೇಹಿತರಾಗಿರುವ ವ್ಯಕ್ತಿಯೊಂದಿಗೆ ಮತ್ತೆ ಕೆಲಸ ಮಾಡುವುದು ಮನೆಗೆ ಮರಳಿದಂತೆಯೇ ಭಾಸವಾಗುತ್ತದೆ. ನಮ್ಮ ನಡುವಿನ ಆ ಸುಲಭವಾದ ಸಮೀಕರಣವನ್ನು 'ಲಿಯೋ' ಸಿನಿಮಾದಲ್ಲಿ ಲೋಕೇಶ್ ಕನಕರಾಜ್ ಅವರು ಬಳಸಿಕೊಂಡಿದ್ದಾರೆ" ಎಂದು ಹೇಳಿದ್ದರು.
'ಲಿಯೋ' ಚಿತ್ರದ ಯಶಸ್ಸಿನ ಸಭೆಯಲ್ಲೂ ತ್ರಿಶಾ ಇದೇ ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದರು. ವಿಜಯ್ ಅವರೊಂದಿಗೆ ಕೆಲಸ ಮಾಡುವುದು ಬಹಳ ಕಾಲದ ನಂತರ ಶಾಲೆಯ ಸ್ನೇಹಿತನನ್ನು ಭೇಟಿಯಾದಂತಿದೆ ಎಂದು ಬಣ್ಣಿಸಿದ ಅವರು, ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅತ್ಯಂತ ಆತ್ಮೀಯ ಒಡನಾಟ ಇರುವುದು ವಿಜಯ್ ಅವರೊಂದಿಗೆ ಮಾತ್ರ ಎಂದಿದ್ದರು. "ಮನೆ ಎಂದರೆ ಕೇವಲ ಒಂದು ಸ್ಥಳವಲ್ಲ, ಅದು ಒಬ್ಬ ವ್ಯಕ್ತಿ ಕೂಡ ಆಗಿರಬಹುದು. ಲಿಯೋ ಚಿತ್ರೀಕರಣದ ಸೆಟ್ ನನಗೆ ಹಾಗೆಯೇ ಅನ್ನಿಸುತ್ತಿತ್ತು" ಎಂದು ಅವರು ಹೇಳಿಕೊಂಡಿದ್ದರು.
ಇನ್ನು ಇದೇ ಕಾರ್ಯಕ್ರಮದಲ್ಲಿ ವಿಜಯ್ ಕೂಡ ತ್ರಿಶಾ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. "20 ವರ್ಷದ ಹುಡುಗಿ ನಾಯಕಿಯಾಗುವುದು ದೊಡ್ಡ ವಿಷಯವಲ್ಲ, ಆದರೆ 20 ವರ್ಷಗಳ ಕಾಲ ಅದೇ ಎನರ್ಜಿ ಮತ್ತು ಸೌಂದರ್ಯದೊಂದಿಗೆ ಅಗ್ರ ನಾಯಕಿಯಾಗಿ ಸ್ಥಾನ ಉಳಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ. ಪ್ರತಿಯೊಬ್ಬರೂ ಸಾಮಾನ್ಯವಾಗಿಯೇ ಕೈ ಬೀಸುತ್ತಾರೆ, ಆದರೆ ಅವಳು ಮಾತ್ರ 'ಪ್ರಿನ್ಸೆಸ್' ಶೈಲಿಯಲ್ಲಿ ಕೈ ಬೀಸುತ್ತಾಳೆ. ನಮ್ಮ ಕುಂದವೈಗೆ ಶುಭಾಶಯಗಳು" ಎಂದು ಹೊಗಳಿದ್ದರು. ಸದ್ಯ ತ್ರಿಶಾ ಅವರು ಇತ್ತೀಚೆಗೆ 'ಠಗ್ ಲೈಫ್' ಚಿತ್ರದಲ್ಲಿ ಇಂದಿರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

