Sara Arjun|ಧುರಂಧರ್ ಬೆಡಗಿ ಸಾರಾ ಅರ್ಜುನ್ ಜೊತೆ ಇಶಾನ್ ಕಟ್ಟರ್ ರೊಮಾನ್ಸ್‌!
x

ನಟಿ ಸಾರಾ ಅರ್ಜುನ್ ಈಗ ಬಾಲಿವುಡ್‌ನ ಚಾಕೊಲೇಟ್ ಬಾಯ್ ಇಶಾನ್ ಕಟ್ಟರ್ ಜೊತೆ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ.

Sara Arjun|ಧುರಂಧರ್ ಬೆಡಗಿ ಸಾರಾ ಅರ್ಜುನ್ ಜೊತೆ ಇಶಾನ್ ಕಟ್ಟರ್ ರೊಮಾನ್ಸ್‌!

ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದ 'ಧುರಂಧರ್' ಚಿತ್ರದ ಭರ್ಜರಿ ಯಶಸ್ಸಿನ ನಂತರ, ನಟಿ ಸಾರಾ ಅರ್ಜುನ್ ಈಗ ಬಾಲಿವುಡ್‌ನ ಚಾಕೊಲೇಟ್ ಬಾಯ್ ಇಶಾನ್ ಕಟ್ಟರ್ ಜೊತೆ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಚಾಕೊಲೇಟ್ ಬಾಯ್ ಇಶಾನ್ ಕಟ್ಟರ್ ಮತ್ತು 'ಧುರಂಧರ್' ಖ್ಯಾತಿಯ ಸಾರಾ ಅರ್ಜುನ್ ಈಗ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳ ದಾಖಲೆ ಬರೆದ 'ಧುರಂಧರ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ಸಾರಾ ಅರ್ಜುನ್ ಪಾಲಿಗೆ ಇದು ಮತ್ತೊಂದು ದೊಡ್ಡ ಮೈಲಿಗಲ್ಲಾಗಿದೆ. ಈ ಮೂಲಕ ಚಿತ್ರರಂಗದ ಇಬ್ಬರು ಪ್ರತಿಭಾವಂತ ಯುವ ನಟರು ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.

ಈ ಹೊಸ ಸಿನಿಮಾವನ್ನು ನಿರ್ದೇಶಕ ಅರ್ಜುನ್ ವರೈನ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಅವರ ಪ್ರತಿಷ್ಠಿತ 'ಟೈಗರ್ ಬೇಬಿ' ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣದ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿತ್ತು.

ಸಾರಾ ಅರ್ಜುನ್ ಅವರು 'ಧುರಂಧರ್' ಚಿತ್ರದಲ್ಲಿ ರಣವೀರ್ ಸಿಂಗ್ ಎದುರು ಮೊದಲು ಪ್ರೇಯಸಿಯಾಗಿ, ಬಳಿಕ ಬಲಿಷ್ಠ ಪತ್ನಿಯಾಗಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಮತ್ತೊಂದೆಡೆ, ಇಶಾನ್ ಕಟ್ಟರ್ ತಮ್ಮ ವಿಶಿಷ್ಟ ನಟನೆ ಮತ್ತು ಚಾರ್ಮ್ ಮೂಲಕ ಈಗಾಗಲೇ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹೊಸ ರೀತಿಯ ಎನರ್ಜಿಯನ್ನು ತೆರೆಗೆ ತರಲಿದೆ ಎಂದು ನಿರೀಕ್ಷಿಸಲಾಗಿದೆ.

ನಿರ್ಮಾಪಕಿ ಜೋಯಾ ಅಖ್ತರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ 'ಎ ಪರ್ಫೆಕ್ಟ್ ಮ್ಯಾಚ್' ಎಂಬ ಸ್ಕ್ರಿಪ್ಟ್‌ನ ಫೋಟೋ ಈ ಸಿನಿಮಾಗೇ ಸಂಬಂಧಿಸಿದ್ದಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಇದು ಕೇವಲ ಸಿನಿಮಾವೋ ಅಥವಾ ವೆಬ್ ಸರಣಿಯೋ ಎಂಬ ಬಗ್ಗೆ ಇನ್ನು ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

ಸಾರಾ ಅರ್ಜುನ್ ಮೂಲತಃ ಪ್ರತಿಭಾವಂತ ಕಲಾವಿದರ ಕುಟುಂಬದಿಂದ ಬಂದವರು. ಇವರ ತಂದೆ ರಾಜ್ ಅರ್ಜುನ್ ಅವರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಖ್ಯಾತ ನಟರಾಗಿದ್ದರೆ, ತಾಯಿ ಸನ್ಯಾ ಅರ್ಜುನ್ ಅವರು ಕಥಕ್ ನೃತ್ಯಗಾರ್ತಿ. ಸಾರಾ ಕೇವಲ ಒಂದೂವರೆ ವರ್ಷದವರಿದ್ದಾಗಲೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದರು. ತಮ್ಮ ಐದನೇ ವಯಸ್ಸಿನ ವೇಳೆಗೆ ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

ಬಾಲನಟಿಯಾಗಿ ಯಶಸ್ಸು

ಸಾರಾ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿದ್ದು 2011ರಲ್ಲಿ ಬಿಡುಗಡೆಯಾದ ತಮಿಳಿನ 'ದೈವ ತಿರುಮಗಲ್' ಚಿತ್ರದ ಮೂಲಕ. ಇದರಲ್ಲಿ ಚಿಯಾನ್ ವಿಕ್ರಮ್ ಅವರ ಮಗಳಾಗಿ ನಟಿಸಿದ ಇವರ ಮುಗ್ಧ ಅಭಿನಯಕ್ಕೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು. ನಂತರ 'ಸೈವಂ' ಚಿತ್ರದ ಅಭಿನಯಕ್ಕಾಗಿ ಇವರು ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಪಡೆದರು. ಹಿಂದಿಯಲ್ಲಿ ಐಶ್ವರ್ಯಾ ರೈ ಅವರ ಮಗಳಾಗಿ 'ಜಜ್ಬಾ' ಮತ್ತು ಮಣಿರತ್ನಂ ಅವರ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಭಾಗ 1 ಮತ್ತು 2ರಲ್ಲಿ ಐಶ್ವರ್ಯಾ ರೈ ಅವರ ಬಾಲ್ಯದ ಪಾತ್ರ ನಂದಿನಿಯಾಗಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾರಾ ಕೇವಲ ನಟನೆಯಲ್ಲಿ ಮಾತ್ರವಲ್ಲದೆ, ಕಥಕ್ ಮತ್ತು ಹಿಪ್-ಹಾಪ್ ನೃತ್ಯದಲ್ಲೂ ಪ್ರವೀಣೆ. ಅಷ್ಟೇ ಅಲ್ಲದೆ, ಇವರು ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ , ಕರಾಟೆ ಮತ್ತು ಜಿಮ್ನಾಸ್ಟಿಕ್ಸ್‌ನಲ್ಲೂ ತರಬೇತಿ ಪಡೆದಿದ್ದಾರೆ.

Read More
Next Story