
ವಿಜಯ್ ದೇವರಕೊಂಡ ಜೊತೆ ನಟಿಸಲು ರಶ್ಮಿಕಾ ಮಂದಣ್ಣ ತಮ್ಮ ಪೋಷಕರ ಜೊತೆ ದೊಡ್ಡ ಜಗಳವನ್ನೇ ಮಾಡಿದ್ದರಂತೆ.
Rashmika Mandanna|ವಿಜಯ್ ದೇವರಕೊಂಡ ಜೊತೆ ನಟಿಸಲು ಮನೆಯವರ ವಿರೋಧವನ್ನೇ ಕಟ್ಟಿಕೊಂಡಿದ್ದ ರಶ್ಮಿಕಾ
ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸ್ಟಾರ್ ನಟ ವಿಜಯ್ ದೇವರಕೊಂಡ ಜೊತೆ ನಟಿಸಲು ಅವರು ಮನೆಯವರನ್ನೇ ಎದುರು ಹಾಕಿಕೊಳ್ಳಬೇಕಾಯಿತು.
ದಕ್ಷಿಣ ಭಾರತದ ಖ್ಯಾತ ನಟರಾದ ‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ ಮತ್ತು ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಇವರ ಪ್ರೀತಿಯ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಕುತೂಹಲಗಳಿಗೆ ತೆರೆಬಿದ್ದಿದ್ದು, ಫೆಬ್ರವರಿ 26,ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಜೋಡಿ ಮೊದಲ ಬಾರಿಗೆ 2018ರಲ್ಲಿ ತೆರೆಕಂಡ 'ಗೀತಾ ಗೋವಿಂದಂ' ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಚಿತ್ರದ ಯಶಸ್ಸಿನ ನಂತರ 2019ರಲ್ಲಿ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ನಟಿಸಲು ಆಫರ್ ಬಂದಾಗ, ರಶ್ಮಿಕಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಜಯ್ ದೇವರಕೊಂಡ ಜೊತೆ ಎರಡನೇ ಸಿನಿಮಾ ಮಾಡಲು ಪೋಷಕರು ಮತ್ತು ಸ್ನೇಹಿತರು ಒಪ್ಪಿರಲಿಲ್ಲ. ಆದರೆ ಸ್ಕ್ರಿಪ್ಟ್ ಮತ್ತು ಪಾತ್ರದ ಮೇಲೆ ನನಗಿದ್ದ ನಂಬಿಕೆಯಿಂದ ಮನೆಯಲ್ಲಿ ದೊಡ್ಡ ಜಗಳ ನಡೆಸಿ ಎಲ್ಲರನ್ನೂ ಒಪ್ಪಿಸಿ ನಟಿಸಿದ್ದಾಗಿ ರಶ್ಮಿಕಾ ಈ ಹಿಂದೆ ಹೇಳಿಕೊಂಡಿದ್ದರು. ಇಂದು ಅದೇ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹಸೆಮಣೆ ಏರಿರುವುದು ವಿಶೇಷ.
ಸಂಪ್ರದಾಯಬದ್ಧ ವಿವಾಹ
ಉದಯಪುರದ ಐಷಾರಾಮಿ ಹೋಟೆಲ್ನಲ್ಲಿ ನಡೆದ ಈ ವಿವಾಹ ಸಮಾರಂಭವು ತೆಲುಗು ಮತ್ತು ಕೊಡವ ಸಂಪ್ರದಾಯಗಳ ಸಮ್ಮಿಲನವಾಗಿತ್ತು. ಬೆಳಗ್ಗೆ ವಿಜಯ್ ದೇವರಕೊಂಡ ಅವರ ಕುಟುಂಬದ ಪದ್ಧತಿಯಂತೆ ತೆಲುಗು ಸಂಪ್ರದಾಯದಲ್ಲಿ ಮದುವೆ ನಡೆದರೆ, ಸಂಜೆ ರಶ್ಮಿಕಾ ಅವರ ಹುಟ್ಟೂರಾದ ಕೊಡಗಿನ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ಜರುಗಿದವು. ಈ ಸುಂದರ ಕ್ಷಣಕ್ಕೆ ಕೇವಲ ಆಪ್ತರು ಮತ್ತು ಕುಟುಂಬದವರು ಮಾತ್ರ ಸಾಕ್ಷಿಯಾದರು.
ತಮ್ಮ ಮದುವೆಗೆ ಈ ಜೋಡಿ 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಹೆಸರಿಟ್ಟಿದ್ದರು. ವಿಜಯ್ ಮತ್ತು ರಶ್ಮಿಕಾ ಹೆಸರನ್ನು ಸೇರಿಸಿ ಅಭಿಮಾನಿಗಳು ಪ್ರೀತಿಯಿಂದ 'ವಿರೋಶ್' ಎಂದು ಕರೆಯುತ್ತಿದ್ದರು. ಅದೇ ಹೆಸರನ್ನು ಅಧಿಕೃತವಾಗಿ ಬಳಸುವ ಮೂಲಕ ದಂಪತಿಗಳು ಅಭಿಮಾನಿಗಳ ಪ್ರೀತಿಗೆ ಗೌರವ ಸಲ್ಲಿಸಿದ್ದಾರೆ. ಮದುವೆಯ ನಂತರ ಹೈದರಾಬಾದ್ನಲ್ಲಿ ಭವ್ಯ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದ್ದು, ಚಿತ್ರರಂಗದ ಗಣ್ಯರು ನವಜೋಡಿಗೆ ಹಾರೈಸಿದ್ದರು.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ನಂತರ ಈಗ ಬೆಳ್ಳಿ ಪರದೆಯ ಮೇಲೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಇವರು ನಟಿಸುತ್ತಿರುವ ಹೊಸ ಚಿತ್ರ 'ರಣಬಾಲಿ' ಈಗ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾವು ಕೇವಲ ಒಂದು ಪ್ರೇಮಕಥೆಯಲ್ಲದೆ, ಬ್ರಿಟಿಷರ ಕಾಲದ ಕರಾಳ ಇತಿಹಾಸವನ್ನು ತೆರೆಯ ಮೇಲೆ ತರಲಿದೆ.
ನಿರ್ದೇಶಕ ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ 1878ರ ಕಾಲಘಟ್ಟದ ಕಥೆಯನ್ನು ಹೊಂದಿದೆ. ವಿಶೇಷವಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ಭೀಕರ ಬರಗಾಲ ಮತ್ತು ಭಾರತೀಯರ ಮೇಲೆ ನಡೆದ ದೌರ್ಜನ್ಯದ ಸುತ್ತ ಕಥೆ ಸಾಗುತ್ತದೆ. ವಿಜಯ್ ದೇವರಕೊಂಡ ಅವರು ಬ್ರಿಟಿಷರ ವಿರುದ್ಧ ಹೋರಾಡುವ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ 'ರಣಬಾಲಿ' ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ರಶ್ಮಿಕಾ ಮಂದಣ್ಣ ಅವರು 'ಜಯಮ್ಮ' ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

