ಮರ್ದಾನಿ 3 VS ಬಾರ್ಡರ್ 2- ರಾಣಿ ಮುಖರ್ಜಿ ಸಿನಿಮಾ ಗಳಿಸಿದೆಷ್ಟು?
x

ರಾಣಿ ಮುಖರ್ಜಿ ನಟನೆಯ ಬಹುನಿರೀಕ್ಷಿತ 'ಮರ್ದಾನಿ 3' ಮೊದಲ ದಿನ ಕೇವಲ 3.80 ಕೋಟಿ ರೂ. ಗಳಿಸುವ ಮೂಲಕ ನಿರೀಕ್ಷೆಗಿಂತ ಕಡಿಮೆ ಆರಂಭ ಕಂಡಿದೆ.

ಮರ್ದಾನಿ 3 VS ಬಾರ್ಡರ್ 2- ರಾಣಿ ಮುಖರ್ಜಿ ಸಿನಿಮಾ ಗಳಿಸಿದೆಷ್ಟು?

ರಾಣಿ ಮುಖರ್ಜಿ ನಟನೆಯ ಬಹುನಿರೀಕ್ಷಿತ 'ಮರ್ದಾನಿ 3' ಮೊದಲ ದಿನ ಕೇವಲ 3.80 ಕೋಟಿ ರೂ. ಗಳಿಸುವ ಮೂಲಕ ನಿರೀಕ್ಷೆಗಿಂತ ಕಡಿಮೆ ಆರಂಭ ಕಂಡಿದೆ.


Click the Play button to hear this message in audio format

ಜನವರಿ 30ರಂದು ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದರೆ, ಮತ್ತೆ ಕೆಲವು ಸಿನಿಮಾಗಳ ಆರಂಭ ಅಷ್ಟೊಂದು ಆಶಾದಾಯಕವಾಗಿಲ್ಲ. ಪ್ರಮುಖವಾಗಿ ರಾಣಿ ಮುಖರ್ಜಿ ಅಭಿನಯದ 'ಮರ್ದಾನಿ 3' ಚಿತ್ರದ ಗಳಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ನಡುವೆ ಬಾರ್ಡರ್ 2 ಸಿನಿಮಾ ತನ್ನ ಓಟವನ್ನು ಮುಂದುವರಿಸಿದ್ದು, ಹೊಸ ಚಿತ್ರಗಳ ಬಿಡುಗಡೆಯಿಂದ ಅದರ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಇದರೊಂದಿಗೆ 'ಮಯಾಸಭಾ' ಮತ್ತು 'ಗಾಂಧಿ ಟಾಕ್ಸ್' ಚಿತ್ರಗಳ ಮೊದಲ ದಿನದ ಕಲೆಕ್ಷನ್ ವಿವರಗಳು ಇಲ್ಲಿವೆ.

ಮರ್ದಾನಿ 3 ಸಿನಿಮಾದ ಓಪನಿಂಗ್ ಕಲೆಕ್ಷನ್ ಎಷ್ಟು?

ರಾಣಿ ಮುಖರ್ಜಿ ಅವರ ಖಡಕ್ ಪೊಲೀಸ್ ಪಾತ್ರದ 'ಮರ್ದಾನಿ 3' ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲವಿತ್ತು. ಜನವರಿ 30ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನ ಕೇವಲ 3.80 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಒಟ್ಟು ಬಜೆಟ್ ಸುಮಾರು 60 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಅದರ ಆಧಾರದ ಮೇಲೆ ಈ ಆರಂಭಿಕ ಗಳಿಕೆಯು ಸರಾಸರಿಗಿಂತ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಣಿ ಮುಖರ್ಜಿ ಈ ಹಿಂದಿನ ಮರ್ದಾನಿ ಸರಣಿಗಳಂತೆ ಮತ್ತೊಮ್ಮೆ ಧೈರ್ಯಶಾಲಿ ಪೊಲೀಸ್ ಅಧಿಕಾರಿ ಶಿವಾನಿ ಶಿವಾಜಿ ರಾಯ್ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಈ ಹಿಂದಿನ ಮರ್ದಾನಿ ಸರಣಿಗಳಂತೆ ಮತ್ತೊಮ್ಮೆ ಧೈರ್ಯಶಾಲಿ ಪೊಲೀಸ್ ಅಧಿಕಾರಿ ಶಿವಾನಿ ಶಿವಾಜಿ ರಾಯ್ ಪಾತ್ರದಲ್ಲಿ ನಟಿಸಿದ್ದಾರೆ. ರಾಣಿ ಮುಖರ್ಜಿ ಅವರ ನಿಷ್ಠೆ ಮತ್ತು ಗಂಭೀರ ಪೊಲೀಸ್ ಪಾತ್ರವು ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರದ ಆರಂಭದಿಂದಲೇ ರಾಣಿ ಅವರು ಸಾಹಸ ಸನ್ನಿವೇಶಗಳನ್ನು ಅತ್ಯಂತ ಉತ್ಸಾಹದಿಂದ ನಿರ್ವಹಿಸಿರುವುದು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ.

ವಾರ್ ಡ್ರಾಮಾ 'ಬಾರ್ಡರ್ 2' ಯಶಸ್ವಿಯಾಗಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರದಂದು 11 ಕೋಟಿ ರೂ. ಬಾಚಿಕೊಂಡಿದೆ. ಈ ಚಿತ್ರವು ಮೊದಲ ದಿನ 30 ಕೋಟಿ ರೂ.ಗಳಿಸಿ ಶುಭಾರಂಭ ಮಾಡಿತ್ತು. ನಾಲ್ಕನೇ ದಿನ ಗರಿಷ್ಠ 59 ಕೋಟಿ ರೂ. ಗಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಸದ್ಯ ಈ ಚಿತ್ರದ ಒಟ್ಟು ಕಲೆಕ್ಷನ್ 235.25 ಕೋಟಿ ರೂಪಾಯಿ ತಲುಪಿದೆ. 'ಮರ್ದಾನಿ 3' ಬಿಡುಗಡೆಯಾದರೂ ಬಾರ್ಡರ್ 2 ಚಿತ್ರದ ಗಳಿಕೆಯ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ.

ವಾರ್ ಡ್ರಾಮಾ 'ಬಾರ್ಡರ್ 2' ಯಶಸ್ವಿಯಾಗಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರದಂದು 11 ಕೋಟಿ ರೂ. ಬಾಚಿಕೊಂಡಿದೆ.

ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ 'ಗಾಂಧಿ ಟಾಕ್ಸ್' ಒಂದು ಮೂಕಿ ಚಿತ್ರವಾಗಿದ್ದು, ಮೊದಲ ದಿನ 1.75 ಕೋಟಿ ರೂ.ಗಳಿಸಿದೆ. ಕಿಶೋರ್ ಬೆಲೇಕರ್ ನಿರ್ದೇಶನದ ಈ ಚಿತ್ರ ವಿಭಿನ್ನ ಪ್ರಯೋಗದಿಂದ ಗಮನ ಸೆಳೆದಿದೆ. ಇನ್ನು ಸೈಕಲಾಜಿಕಲ್ ಥ್ರಿಲ್ಲರ್ 'ಮಯಾಸಭಾ - ದಿ ಹಾಲ್ ಆಫ್ ಇಲ್ಯೂಷನ್' ಸಿನಿಮಾ ಮೊದಲ ದಿನ ಕೇವಲ 12 ಲಕ್ಷ ರೂಪಾಯಿ ಗಳಿಸುವ ಮೂಲಕ ನೀರಸ ಆರಂಭ ಕಂಡಿದೆ. ತುಂಬಾಡ್ ಖ್ಯಾತಿಯ ಅನಿಲ್ ಬರ್ವೆ ನಿರ್ದೇಶನದ ಈ ಚಿತ್ರಕ್ಕೆ ಮೊದಲ ದಿನ ಪ್ರೇಕ್ಷಕರಿಂದ ಹೆಚ್ಚಿನ ಸ್ಪಂದನೆ ಸಿಕ್ಕಿಲ್ಲ.

Read More
Next Story