
'ಬಾರ್ಡರ್ 2', ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.
ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ 'ಬಾರ್ಡರ್ 2'
'ಬಾರ್ಡರ್ 2' ಮೊದಲ ದಿನ 30 ಕೋಟಿ ಗಳಿಸಿದ್ದ ಈ ಚಿತ್ರ, ಎರಡನೇ ದಿನ 36.5 ಕೋಟಿ ಹಾಗೂ ಮೂರನೇ ದಿನ 54.5 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರಕ್ಕಿಂತ ಹೆಚ್ಚಿನ ಗಳಿಕೆಯಾಗಿದೆ.
ಬಾಲಿವುಡ್ ಪಾಲಿಗೆ 2026ರ ವರ್ಷ ಭರ್ಜರಿ ಆರಂಭವನ್ನು ತಂದುಕೊಟ್ಟಿದೆ. ಅನುರಾಗ್ ಸಿಂಗ್ ನಿರ್ದೇಶನದ 'ಬಾರ್ಡರ್ 2', ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದು, ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.
ಜಾಗತಿಕವಾಗಿ ಈ ಚಿತ್ರ ಈಗಾಗಲೆ 150 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ವಿಶೇಷವೆಂದರೆ, ಈ ಚಿತ್ರವು ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರದ ದಾಖಲೆಗಳನ್ನು ಹಿಂದಿಕ್ಕುತ್ತಿದ್ದು, ಇಂದು ಗಣರಾಜ್ಯೋತ್ಸವದ ರಜೆ ಇರುವುದರಿಂದ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಭಾನುವಾರ ಈ ಚಿತ್ರವು ಭಾರತದಲ್ಲಿ ಬರೊಬ್ಬರಿ 54.5 ಕೋಟಿ ರೂಪಾಯಿಗಳ ನೆಟ್ ಕಲೆಕ್ಷನ್ ಮಾಡಿದೆ. ಶನಿವಾರದ ಗಳಿಕೆ (36.5 ಕೋಟಿ ರೂ.) ಗೆ ಹೋಲಿಸಿದರೆ ಇದು ಭಾರಿ ಏರಿಕೆಯಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ದೇಶೀಯ ಗಳಿಕೆ 121 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಚಿತ್ರವು ಒಟ್ಟು 158.5 ಕೋಟಿ ರೂಪಾಯಿಗಳ ಗ್ರಾಸ್ ಕಲೆಕ್ಷನ್ ಮಾಡಿದೆ. ಜೆ.ಪಿ. ದತ್ತಾ ಅವರ 1997ರ ಐತಿಹಾಸಿಕ ಬ್ಲಾಕ್‌ಬಸ್ಟರ್ 'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾದ ಈ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.
ಸತತ ಸೋಲುಗಳಿಂದ ಕಂಗಾಲಾಗಿದ್ದ ವರುಣ್ ಧವನ್ ಅವರಿಗೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದಂತಾಗಿದೆ.
ಮೊದಲ ದಿನ 30 ಕೋಟಿ ಗಳಿಸಿದ್ದ ಈ ಚಿತ್ರ, ಎರಡನೇ ದಿನ 36.5 ಕೋಟಿ ಹಾಗೂ ಮೂರನೇ ದಿನ 54.5 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರಕ್ಕಿಂತ ಹೆಚ್ಚಿನ ಗಳಿಕೆಯಾಗಿದೆ. ಭಾನುವಾರ ಹಿಂದಿ ಮಾರುಕಟ್ಟೆಯಲ್ಲಿ ಶೇ. 59.14 ರಷ್ಟು ಆಕ್ಯುಪೆನ್ಸಿ ಕಂಡುಬಂದಿದ್ದು, ಸಂಜೆ ಮತ್ತು ರಾತ್ರಿಯ ಪ್ರದರ್ಶನಗಳು ಬಹುತೇಕ ಹೌಸ್‌ಫುಲ್ ಆಗಿದ್ದವು. ಸನ್ನಿ ಡಿಯೋಲ್ ಅವರ ಕಳೆದ ಚಿತ್ರ 'ಜಾತ್' ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ, ಆದರೆ 'ಬಾರ್ಡರ್ 2' ಮೂಲಕ ಅವರು ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಈ ಯಶಸ್ಸು ಸತತ ಸೋಲುಗಳಿಂದ ಕಂಗಾಲಾಗಿದ್ದ ವರುಣ್ ಧವನ್ ಅವರಿಗೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದಂತಾಗಿದೆ.
'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾದ ಈ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.
ಸನ್ನಿ ಡಿಯೋಲ್ ಹೆಸರಿಗಿಂತ ಮೊದಲು ತಂದೆಯ ಹೆಸರು
ಸಿನಿಮಾ ಆರಂಭವಾಗುತ್ತಿದ್ದಂತೆ ಬರುವ ಆರಂಭಿಕ ಕ್ರೆಡಿಟ್ಸ್‌ನಲ್ಲಿ ಸನ್ನಿ ಡಿಯೋಲ್ ಅವರ ಹೆಸರನ್ನು ಅತ್ಯಂತ ಭಾವನಾತ್ಮಕವಾಗಿ ಪ್ರದರ್ಶಿಸಲಾಗಿದೆ. ಸ್ವತಃ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ, ಸನ್ನಿ ಡಿಯೋಲ್ ಈ ಚಿತ್ರದಲ್ಲಿ ತಮ್ಮ ಹೆಸರನ್ನು "ಧರ್ಮೇಂದ್ರ ಜೀ ಕಾ ಬೇಟಾ" (ಧರ್ಮೇಂದ್ರ ಅವರ ಪುತ್ರ) ಎಂದು ಪರಿಚಯಿಸಿಕೊಂಡಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅವರ ಹೆಸರಿನ ಕೆಳಗೆ "ಧರ್ಮೇಂದ್ರ ಅವರ ಮಗ" ಎಂದು ನಮೂದಿಸುವ ಮೂಲಕ ತಮ್ಮ ತಂದೆಗೆ ಗೌರವ ಸಲ್ಲಿಸಿದ್ದಾರೆ.

