Varanasi Movie|ಮಹೇಶ್ ಬಾಬು -ಪ್ರಿಯಾಂಕಾ ಚೋಪ್ರಾ ಚಿತ್ರದ ಸೆಟ್ ನೋಡಿ ವಿದೇಶಿ ಮಾಧ್ಯಮಗಳೇ ಫಿದಾ!
x

ಹೈದರಾಬಾದ್‌ನ ಸ್ಟುಡಿಯೋದಲ್ಲಿ ನಿರ್ಮಿಸಲಾದ ವಾರಣಾಸಿ ಚಿತ್ರದ ಬೃಹತ್ ಸೆಟ್‌ಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.

Varanasi Movie|ಮಹೇಶ್ ಬಾಬು -ಪ್ರಿಯಾಂಕಾ ಚೋಪ್ರಾ ಚಿತ್ರದ ಸೆಟ್ ನೋಡಿ ವಿದೇಶಿ ಮಾಧ್ಯಮಗಳೇ ಫಿದಾ!

ಹೈದರಾಬಾದ್‌ನಲ್ಲಿ ವಾರಣಾಸಿಯ ಪುರಾತನ ಗಲ್ಲಿಗಳು, ಪ್ರಸಿದ್ಧ ಘಾಟ್‌ಗಳು ಮತ್ತು ಐತಿಹಾಸಿಕ ದೇವಸ್ಥಾನಗಳನ್ನು ಒಳಗೊಂಡ ಬೃಹತ್ ಸೆಟ್ ಅನ್ನು ನಿರ್ಮಿಸಲಾಗಿದೆ.


Click the Play button to hear this message in audio format

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಬೃಹತ್ ಸೆಟ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಟೀಸರ್ ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಚಿತ್ರತಂಡ ಹೈದರಾಬಾದ್‌ನ ಸ್ಟುಡಿಯೋಗೆ ಆಹ್ವಾನ ನೀಡಿತ್ತು.

ವಾರಣಾಸಿಯ ಪುರಾತನ ಗಲ್ಲಿಗಳು, ಪ್ರಸಿದ್ಧ ಘಾಟ್‌ಗಳು ಮತ್ತು ದೇವಸ್ಥಾನಗಳನ್ನು ಒಳಗೊಂಡ ಈ ಬೃಹತ್ ಸೆಟ್ ಅನ್ನು ನೋಡಿ ವಿದೇಶಿ ಮಾಧ್ಯಮಗಳೇ ದಂಗಾಗಿವೆ. ನೈಜ ಕಾಶಿ ಪಟ್ಟಣಕ್ಕೂ ಮತ್ತು ಸ್ಟುಡಿಯೋದಲ್ಲಿ ನಿರ್ಮಿಸಲಾದ ಈ ಸೆಟ್‌ಗೂ ವ್ಯತ್ಯಾಸವೇ ತಿಳಿಯದಷ್ಟು ಸೂಕ್ಷ್ಮವಾಗಿ ಈ ತಾಣವನ್ನು ಮರುಸೃಷ್ಟಿಸಲಾಗಿದೆ.

ಚಿತ್ರದ ವಿಶೇಷತೆಗಳು

ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು 'ರುದ್ರ' ಮತ್ತು 'ಶ್ರೀರಾಮ' ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ' ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ 'ಕುಂಭ' ಎಂಬ ಶಕ್ತಿಶಾಲಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಅಂಟಾರ್ಕ್ಟಿಕಾದಲ್ಲಿ ಚಿತ್ರೀಕರಣ

ಇತ್ತೀಚೆಗಷ್ಟೇ ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ಮುಗಿಸಿರುವ ತಂಡ, ಮುಂದಿನ ಹಂತಕ್ಕಾಗಿ ಅಂಟಾರ್ಕ್ಟಿಕಾಕ್ಕೆ ಪ್ರಯಾಣ ಬೆಳೆಸಲಿದೆ. ಅಲ್ಲಿನ 'ರಾಸ್ ಐಸ್ ಶೆಲ್ಫ್' ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಪಡೆದ ಬೆರಳೆಣಿಕೆಯ ಚಿತ್ರಗಳಲ್ಲಿ 'ವಾರಣಾಸಿ' ಕೂಡ ಒಂದಾಗಲಿದೆ.

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಪ್ರಾಜೆಕ್ಟ್ ಎನ್ನಲಾದ ಈ ಸಿನಿಮಾ 2027ರಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಈ ಮೊದಲ ಕಾಂಬಿನೇಷನ್ ಈಗಾಗಲೇ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.

Read More
Next Story