ತೆಲುಗಿನಲ್ಲೂ ಬರಲಿದೆಯೇ ʻಡೆವಿಲ್‌ʼ ಸಿನಿಮಾ ; ಮಹೇಶ್‌ ಬಾಬು ಹೀರೋ?
x

ಡೆವಿಲ್‌ ಸಿನಿಮಾದಲ್ಲಿ ಮಹೇಶ್‌ ಬಾಬು ನಟಿಸಲಿದ್ದಾರೆ ಎಂಬ ವದಂತಿ ಹಬ್ಬಿತ್ತು. 

ತೆಲುಗಿನಲ್ಲೂ ಬರಲಿದೆಯೇ ʻಡೆವಿಲ್‌ʼ ಸಿನಿಮಾ ; ಮಹೇಶ್‌ ಬಾಬು ಹೀರೋ?

ಸುಮಾರು 2020ರಲ್ಲಿ ಸಂದೀಪ್ ರೆಡ್ಡಿ ವಂಗ ಅವರು ಮಹೇಶ್ ಬಾಬು ಅವರಿಗೆ 'ಡೆವಿಲ್' ಎಂಬ ಕಥೆಯನ್ನು ವಿವರಿಸಿದ್ದರು ಎನ್ನಲಾಗಿತ್ತು.


Click the Play button to hear this message in audio format

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಂಚಲನ ಮೂಡಿಸಿತ್ತು. ಕಳೆದ ಕೆಲವು ದಿನಗಳಿಂದ 'ಡೆವಿಲ್' ಎಂಬ ಚಿತ್ರದ ಸ್ಕ್ರಿಪ್ಟ್ ಚಾಲ್ತಿಗೆ ಬಂದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಆದರೆ, ಈ ಎಲ್ಲಾ ವರದಿಗಳು ಕೇವಲ ವದಂತಿ ಎಂದು ಈಗ ಸ್ಪಷ್ಟವಾಗಿದೆ.

ಹಿನ್ನೆಲೆ ಏನು?

ಸುಮಾರು 2020ರಲ್ಲಿ ಸಂದೀಪ್ ರೆಡ್ಡಿ ವಂಗ ಅವರು ಮಹೇಶ್ ಬಾಬು ಅವರಿಗೆ 'ಡೆವಿಲ್' ಎಂಬ ಕಥೆಯನ್ನು ವಿವರಿಸಿದ್ದರು ಎನ್ನಲಾಗಿತ್ತು. ಆದರೆ ಆ ಸಮಯದಲ್ಲಿ ಚಿತ್ರದ ಕಥೆ ಅತಿಯಾದ ಹಿಂಸೆಯಿಂದ ಕೂಡಿದ್ದರಿಂದ ಮಹೇಶ್ ಬಾಬು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು ಎಂಬ ಸುದ್ದಿಯಿತ್ತು. 'ಅನಿಮಲ್' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಮಹೇಶ್ ಬಾಬು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಇಂತಹದೊಂದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿ ಎಂದು ಆಶಿಸಿದ್ದರು. ಇದೇ ಕಾರಣಕ್ಕೆ ಸುನೀಲ್ ನಾರಂಗ್ ನಿರ್ಮಾಣದಲ್ಲಿ ಈ ಸಿನಿಮಾ ಮತ್ತೆ ಶುರುವಾಗಲಿದೆ ಎಂಬ ಗಾಳಿ ಸುದ್ದಿ ಹಬ್ಬಿತ್ತು.

ಚಿತ್ರರಂಗದ ಆಪ್ತ ಮೂಲಗಳ ಪ್ರಕಾರ, ಪ್ರಸ್ತುತ ಸಂದೀಪ್ ರೆಡ್ಡಿ ವಂಗ ಅವರು ಪ್ರಭಾಸ್ ಅಭಿನಯದ 'ಸ್ಪಿರಿಟ್' ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಇದರ ನಂತರ ಅವರು ರಣಬೀರ್ ಕಪೂರ್ ಜೊತೆ 'ಅನಿಮಲ್ ಪಾರ್ಕ್' ಸಿನಿಮಾ ಮಾಡುವುದು ಈಗಾಗಲೇ ಖಚಿತವಾಗಿದೆ. ಅತ್ತ ಮಹೇಶ್ ಬಾಬು ಕೂಡ ರಾಜಮೌಳಿ ಅವರ ಬಿಗ್ ಬಜೆಟ್ ಚಿತ್ರದ ತಯಾರಿಯಲ್ಲಿದ್ದಾರೆ. ಎಸ್ ಎಸ್ ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ವರಣಾಸಿ ಚಿತ್ರ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದು,ಈ ಸಿನಿಮಾ 2027 ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಸಂದೀಪ್‌ ವಂಗಾ ಸದ್ಯ ಸ್ಪಿರಿಟ್ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಈ ಸಿನಿಮಾದ ಪೋಸ್ಟರ್‌ ಬಿಡುಗಡೆಗೊಂಡಿದೆ. ವಂಗಾ ಅವರ ಹಿಂದಿನ ಹಿಟ್ 'ಅನಿಮಲ್' ಚಿತ್ರ ಘೋಷಣೆಯೂ ಹೊಸ ವರ್ಷದ ಮಧ್ಯರಾತ್ರಿ ಬಂದಿತ್ತು, ಸ್ಪಿರಿಟ್ ಕೂಡ ಅದೇ ರೀತಿಯಲ್ಲಿ ಬೋಲ್ಡ್‌ ರೀತಿಯಲ್ಲಿ ಬಂದಿದೆ.

ಹೀಗಾಗಿ, ಸದ್ಯಕ್ಕೆ ಮಹೇಶ್ ಬಾಬು ಮತ್ತು ಸಂದೀಪ್ ವಂಗ ಜೋಡಿಯ ಯಾವುದೇ ಸಿನಿಮಾ ಅಧಿಕೃತವಾಗಿ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಡೆವಿಲ್' ಚಿತ್ರದ ಸುದ್ದಿಯಲ್ಲಿ ಯಾವುದೇ ನಿಜವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Read More
Next Story