George Kutty is back: Drishyam 3 release date announced, exciting poster here!
x

ನಟ ಮೋಹನ್‌ ಲಾಲ್‌

ಜಾರ್ಜ್​ಕುಟ್ಟಿ ಈಸ್ ಬ್ಯಾಕ್: 'ದೃಶ್ಯಂ 3' ರಿಲೀಸ್ ಡೇಟ್ ಘೋಷಣೆ, ರೋಚಕ ಪೋಸ್ಟರ್ ಇಲ್ಲಿದೆ!

ನಟ ಮೋಹನ್ ಲಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರವು 2026ರ ಏಪ್ರಿಲ್ 2 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.


Click the Play button to hear this message in audio format

ಸಿನಿರಸಿಕರ ಪಾಲಿಗೆ ಕುತೂಹಲದ ಕಣಜವಾಗಿದ್ದ, ಮಲಯಾಳಂನ ಸೂಪರ್ ಹಿಟ್ 'ದೃಶ್ಯಂ' ಸರಣಿಯ ಮೂರನೇ ಭಾಗದ ಬಿಡುಗಡೆ ದಿನಾಂಕ ಅಂತಿಮವಾಗಿದೆ. ಮೋಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು 'ದೃಶ್ಯಂ 3' (Drishyam 3) ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ನಟ ಮೋಹನ್ ಲಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರವು 2026ರ ಏಪ್ರಿಲ್ 2 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ನಿರ್ದೇಶಕ ಜೀತು ಜೋಸೆಫ್ ಮತ್ತು ಮೋಹನ್ ಲಾಲ್ ಅವರ ಕಾಂಬಿನೇಷನ್ ಮತ್ತೆ ಮೋಡಿ ಮಾಡಲು ಸಜ್ಜಾಗಿದೆ.

ಕುತೂಹಲ ಕೆರಳಿಸಿದ ಟ್ಯಾಗ್ ಲೈನ್

ಬಿಡುಗಡೆಯ ದಿನಾಂಕದ ಜೊತೆಗೆ ಚಿತ್ರದ ಆಸಕ್ತಿದಾಯಕ ಪೋಸ್ಟರ್ ಒಂದನ್ನು ಕೂಡ ಹಂಚಿಕೊಳ್ಳಲಾಗಿದೆ. ಕತ್ತಲ ಛಾಯೆಯ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಅವರು ಗಂಭೀರವಾಗಿ ನಿಂತಿರುವ ಪೋಸ್ಟರ್ ಇದಾಗಿದೆ. ಈ ಪೋಸ್ಟರ್‌ನಲ್ಲಿ "The past never stays buried" (ಗತಕಾಲದ ರಹಸ್ಯಗಳು ಎಂದಿಗೂ ಹೂತು ಹೋಗುವುದಿಲ್ಲ) ಎಂಬ ಅರ್ಥಪೂರ್ಣ ಟ್ಯಾಗ್‌ಲೈನ್ ನೀಡಲಾಗಿದೆ. ಇದು ಜಾರ್ಜ್​ಕುಟ್ಟಿಯ ಹಳೆಯ ಪ್ರಕರಣಗಳು ಮತ್ತೆ ಮರುಕಳಿಸಲಿವೆ ಅಥವಾ ಹೂತು ಹಾಕಿದ ರಹಸ್ಯಗಳು ಮತ್ತೆ ಸ್ಫೋಟಗೊಳ್ಳಲಿವೆ ಎಂಬ ಸುಳಿವನ್ನು ನೀಡಿದೆ.

ಮತ್ತೆ ಜಾರ್ಜ್​ಕುಟ್ಟಿ ದರ್ಬಾರ್

ಕುಟುಂಬದ ರಕ್ಷಣೆಗಾಗಿ ಎಂತಹ ಸಾಹಸಕ್ಕೂ ಇಳಿಯುವ ಬುದ್ಧಿವಂತ 'ಜಾರ್ಜ್​ಕುಟ್ಟಿ'ಯಾಗಿ ಮೋಹನ್ ಲಾಲ್ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಎರಡು ಭಾಗಗಳಲ್ಲಿ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಜಾರ್ಜ್​ಕುಟ್ಟಿ, ಈ ಬಾರಿ ಯಾವ ತಂತ್ರ ಹೂಡಲಿದ್ದಾನೆ ಎಂಬುದು ಪ್ರೇಕ್ಷಕರ ಪ್ರಮುಖ ಪ್ರಶ್ನೆಯಾಗಿದೆ.

ಬಾಕ್ಸ್ ಆಫೀಸ್ ಸುಲ್ತಾನ್

2013ರಲ್ಲಿ ಆರಂಭವಾದ 'ದೃಶ್ಯಂ' ಸರಣಿಯು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಮೊದಲ ಭಾಗವೇ ಬರೋಬ್ಬರಿ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು. ಇದರ ಜನಪ್ರಿಯತೆ ಎಷ್ಟಿತ್ತೆಂದರೆ, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿ ಅಲ್ಲಿಯೂ ಸೂಪರ್ ಹಿಟ್ ಎನಿಸಿಕೊಂಡಿತು. ಜಾಗತಿಕವಾಗಿ ಈ ಫ್ರಾಂಚೈಸಿ ಈಗಾಗಲೇ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು, ಮೂರನೇ ಭಾಗದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ.

Read More
Next Story