Dhurandhar 2| 11 ದಿನಕ್ಕೆ 1,350 ಕೋಟಿ ರೂ. ಬಾಚಿದ ರಣವೀರ್ ಸಿಂಗ್ ಧುರಂಧರ್
x

ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವಾದ್ಯಂತ 1,350 ಕೋಟಿ ರೂ. ಅಧಿಕ ಮೊತ್ತವನ್ನು ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

Dhurandhar 2| 11 ದಿನಕ್ಕೆ 1,350 ಕೋಟಿ ರೂ. ಬಾಚಿದ ರಣವೀರ್ ಸಿಂಗ್ 'ಧುರಂಧರ್

ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಸ್ಪೈ-ಥ್ರಿಲ್ಲರ್ 'ಧುರಂಧರ್: ದಿ ರಿವೆಂಜ್', 2025ರ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರದ ಭರ್ಜರಿ ಮುಂದುವರಿದ ಭಾಗವಾಗಿದೆ.


Click the Play button to hear this message in audio format

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಿಡುಗಡೆಯಾದ ಈ ಚಿತ್ರವು ಕೇವಲ 11 ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 1,350 ಕೋಟಿ ರೂ. ಅಧಿಕ ಮೊತ್ತವನ್ನು ಲೂಟಿ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಹೊಸ ದಾಖಲೆಗಳನ್ನು ಬರೆಯುತ್ತಿದೆ.

2025ರ ಸೂಪರ್ ಹಿಟ್ 'ಧುರಂಧರ್' ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು 'ಹಮ್ಜಾ ಅಲಿ ಮಜಾರಿ' ಎಂಬ ಹೆಸರಿನ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ. ದೇಶಭಕ್ತಿ ಮತ್ತು ತೀವ್ರತರವಾದ ಗೂಢಚರ್ಯೆಯ ಕಥಾಹಂದರ ಹೊಂದಿರುವ ಈ ಚಿತ್ರವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದ ಮೇಕಿಂಗ್ ಮತ್ತು ನಿರೂಪಣಾ ಶೈಲಿಯನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿನಿಮಾವು ಸ್ಕಾರ್ಸೆಸೆ ಮತ್ತು ಟ್ಯಾರಂಟಿನೋ ಅವರ ಚಿತ್ರಗಳ ಶೈಲಿಯನ್ನು ನೆನಪಿಸುತ್ತದೆ ಎಂದು ಹೊಗಳಿರುವ ಅವರು, ಚಿತ್ರದ ಸುದೀರ್ಘ ಅವಧಿಯ ಹೊರತಾಗಿಯೂ ಕಥೆಯನ್ನು ಅಧ್ಯಾಯಗಳ ರೂಪದಲ್ಲಿ ಕಟ್ಟಿರುವುದು ಮತ್ತು ನೈಜ ಸಾಹಸ ದೃಶ್ಯಗಳ ಬಳಕೆಯನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ಅಮೆರಿಕದ ಮಾರುಕಟ್ಟೆಯಲ್ಲಿ ಈ ಚಿತ್ರವು 'ಬಾಹುಬಲಿ 2' ಚಿತ್ರದ ಸುದೀರ್ಘ ಕಾಲದ ದಾಖಲೆಯನ್ನು ಅಳಿಸಿಹಾಕಿದ್ದು, ಕರ್ನಾಟಕದಲ್ಲಿಯೂ ಪ್ರಾದೇಶಿಕವಲ್ಲದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

ಒಂದೆಡೆ ಚಿತ್ರದ ಅಬ್ಬರಕ್ಕೆ ಅಭಿಮಾನಿಗಳು ಫಿದಾ ಆಗಿದ್ದರೆ, ಮತ್ತೊಂದೆಡೆ ಟೀಕಾಕಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿನ ಅತಿಯಾದ ಹಿಂಸಾಚಾರ ಮತ್ತು ಕೆಲವು ದೃಶ್ಯಗಳನ್ನು 'ಪ್ರಚಾರದ ಹೂರಣ' ಹಾಗೂ 'ಅಶ್ಲೀಲತೆ' ಎಂದು ಕೆಲವರು ಟೀಕಿಸಿದ್ದಾರೆ. ಇಷ್ಟೆಲ್ಲಾ ಪರ-ವಿರೋಧ ಚರ್ಚೆಗಳ ನಡುವೆಯೂ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ರಣವೀರ್ ಸಿಂಗ್ ಅವರ ವೃತ್ತಿಜೀವನದ ಅತಿದೊಡ್ಡ ಯಶಸ್ಸಿನತ್ತ ಸಿನಿಮಾ ದಾಪುಗಾಲು ಹಾಕುತ್ತಿದೆ.

Read More
Next Story