ಧುರಂಧರ್ 2| 9 ದಿನಗಳಲ್ಲಿ 1000 ಕೋಟಿ ಗಳಿಸಿ ಹೊಸ ದಾಖಲೆ
x

ದುರಂಧರ್‌ ಸಿನಿಮಾ 1,000 ಕೋಟಿ ರೂಪಾಯಿಗಳ ಭರ್ಜರಿ ಗಳಿಕೆ ಮಾಡುವ ಮೂಲಕ ಇತಿಹಾಸ ಬರೆದಿದೆ.

ಧುರಂಧರ್ 2| 9 ದಿನಗಳಲ್ಲಿ 1000 ಕೋಟಿ ಗಳಿಸಿ ಹೊಸ ದಾಖಲೆ

'ಧುರಂಧರ್ 2: ದಿ ರಿವೆಂಜ್' ಸಿನಿಮಾ ಬಿಡುಗಡೆಯಾದ ಕೇವಲ 9 ದಿನಗಳಲ್ಲಿ ಈ ಚಿತ್ರವು ಜಾಗತಿಕವಾಗಿ 1,000 ಕೋಟಿ ರೂಪಾಯಿಗಳ ಭರ್ಜರಿ ಗಳಿಕೆ ಮಾಡುವ ಮೂಲಕ ಇತಿಹಾಸ ಬರೆದಿದೆ.


Click the Play button to hear this message in audio format

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2: ದಿ ರಿವೆಂಜ್' ಸಿನಿಮಾ ಬಿಡುಗಡೆಯಾದ ಕೇವಲ ಒಂಬತ್ತು ದಿನಗಳಲ್ಲಿ ಜಾಗತಿಕವಾಗಿ 1,000 ಕೋಟಿ ರೂಪಾಯಿಗಳ ಗಡಿ ದಾಟಿದೆ. ಈ ಮೂಲಕ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಚಿತ್ರದ ದಾಖಲೆಯನ್ನು ಸಮೀಪಿಸಿರುವ ರಣವೀರ್ ಚಿತ್ರ, ಅತಿ ವೇಗವಾಗಿ ಸಾವಿರ ಕೋಟಿ ಕ್ಲಬ್ ಸೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಚಿತ್ರದ ನಿವ್ವಳ ಸಂಗ್ರಹವು 675 ಕೋಟಿ ರೂಪಾಯಿಗಳಿಗೆ ತಲುಪಿದ್ದು, ತನ್ನ ಮೊದಲ ಭಾಗವಾದ 'ಧುರಂಧರ್' ಚಿತ್ರದ ಜೀವಮಾನದ ದಾಖಲೆಯಾದ 894.49 ಕೋಟಿ ರೂಪಾಯಿಗಳನ್ನು ಮೀರಿಸುವತ್ತ ದಾಪುಗಾಲು ಹಾಕುತ್ತಿದೆ. ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, ಒಂಬತ್ತನೇ ದಿನದ ಅಂತ್ಯಕ್ಕೆ ಈ ಮಟ್ಟದ ಬೃಹತ್ ಮೊತ್ತವನ್ನು ಗಳಿಸಿದ ಬೆರಳೆಣಿಕೆಯ ಭಾರತೀಯ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಈ ಹಿಂದೆ ಬಾಕ್ಸ್ ಆಫೀಸ್ ಸದ್ದು ಮಾಡಿದ್ದ 'ಪಠಾಣ್', 'ಜವಾನ್' ಮತ್ತು 'ಕಲ್ಕಿ 2898 ಎಡಿ' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳಿಗಿಂತಲೂ ಈ ಸಿನಿಮಾ ಮುನ್ನಡೆ ಸಾಧಿಸಿರುವುದು ವಿಶೇಷವಾಗಿದೆ.

ಚಿತ್ರವು ತನ್ನ ಏಳನೇ ದಿನದಂದು 47 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಸಂಗ್ರಹಿಸಿ ಸ್ಥಿರತೆ ಕಾಯ್ದುಕೊಂಡಿತ್ತು. ಒಂಬತ್ತನೇ ದಿನ ಅಂದರೆ ಶುಕ್ರವಾರದಂದು ಕೂಡ ಗಳಿಕೆಯಲ್ಲಿ ಚೇತರಿಕೆ ಕಂಡಿತ್ತು. ಎರಡನೇ ವಾರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಮುಂದಿನ ದಿನಗಳಲ್ಲಿ ಈ ಸಿನಿಮಾ ಭಾರತೀಯ ಚಿತ್ರರಂಗದ ಹಲವು ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುವುದು ಬಹುತೇಕ ಖಚಿತವಾಗಿದೆ.

ಪಾಕಿಸ್ತಾನದ ISI ಮತ್ತು ಲಷ್ಕರ್-ಎ-ತೈಬಾ ಸಂಪರ್ಕ

ಸಿನಿಮಾದ ಎರಡನೇ ಪ್ರಮುಖ ದೃಶ್ಯದಲ್ಲಿ ಉತ್ತರ ಪ್ರದೇಶದ ಪೊಲೀಸರಿಗೆ ಆತೀಫ್ ಅಹ್ಮದ್‌ನ ಅಂತರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ ಜೊತೆಗೆ ಆತೀಫ್ ಸಂಪರ್ಕ ಹೊಂದಿದ್ದು, ಭಾರತಕ್ಕೆ ನಕಲಿ ನೋಟು ಮತ್ತು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾನೆ ಎಂದು ಚಿತ್ರಿಸಲಾಗಿದೆ.

ಸಿನಿಮಾದ ಕ್ಲೈಮ್: 2016ರ ನೋಟು ಅಮಾನ್ಯೀಕರಣವು (Demonetization) ಕೇವಲ ಆರ್ಥಿಕ ಸುಧಾರಣೆ ಮಾತ್ರವಲ್ಲದೆ, ಆತೀಫ್ ಅಹ್ಮದ್ ಮತ್ತು ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ನಡೆಸುತ್ತಿದ್ದ ನಕಲಿ ನೋಟು ದಂಧೆಯನ್ನು ಬಯಲಿಗೆಳೆಯಲು ಮಾಡಿದ ತಂತ್ರ ಎಂದು ಸಿನಿಮಾ ಹೇಳುತ್ತದೆ.

ವಾಸ್ತವ: ಉಮೇಶ್ ಪಾಲ್ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ ಉತ್ತರ ಪ್ರದೇಶದ ಎಸ್‌ಟಿಎಫ್ (STF) ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಅತೀಕ್ ಅಹ್ಮದ್‌ಗೆ ಪಾಕಿಸ್ತಾನದ ISI ಮತ್ತು ಲಷ್ಕರ್ ಜೊತೆ ನೇರ ಸಂಪರ್ಕವಿತ್ತು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಅತೀಕ್ ಸ್ವತಃ ಪೊಲೀಸರ ಮುಂದೆ ನೀಡಿದ ಹೇಳಿಕೆಯಂತೆ, ಪಾಕಿಸ್ತಾನದ ಡ್ರೋನ್‌ಗಳು ಪಂಜಾಬ್ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಬೀಳಿಸುತ್ತಿದ್ದವು ಮತ್ತು ISI ಕಾರ್ಯಕರ್ತರು ಅವುಗಳನ್ನು ಸಂಗ್ರಹಿಸಿ ಅತೀಕ್ ಗ್ಯಾಂಗ್‌ಗೆ ತಲುಪಿಸುತ್ತಿದ್ದರು. ಆದರೆ, ಅತೀಕ್ ನಕಲಿ ನೋಟು ದಂಧೆಯಲ್ಲಿ ತೊಡಗಿದ್ದ ಎಂಬ ಬಗ್ಗೆ ಯುಪಿ ಪೊಲೀಸರ ಯಾವುದೇ ದಾಖಲೆಗಳಲ್ಲಿ ಉಲ್ಲೇಖವಿಲ್ಲ. ಆದ್ದರಿಂದ ಸಿನಿಮಾದ ಈ ನಕಲಿ ನೋಟಿನ ಕಥೆ ಸಂಪೂರ್ಣವಾಗಿ ಕಾಲ್ಪನಿಕ ಎನ್ನಲಾಗುತ್ತಿದೆ.

Read More
Next Story