
ಮಂಡ್ಯ ಮೂಲದ ಗಿಲ್ಲಿ ಅಭಿಮಾನಿಯೊಬ್ಬರು ಭುಜದ ಮೇಲೆ ಗಿಲ್ಲಿ ನಟನ ಮುಖದ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಭುಜದ ಮೇಲೆ ಗಿಲ್ಲಿ ನಟನ ಟ್ಯಾಟೂ ಹಾಕಿದ ಮಂಡ್ಯ ಅಭಿಮಾನಿ
ಬಿಗ್ ಬಾಸ್ ಮನೆಯ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಾಗ, ಮಂಡ್ಯದ ಈ ಅಭಿಮಾನಿ ತನ್ನ ಟ್ಯಾಟೂವನ್ನು ತೋರಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ ಅವರ ಮೇಲಿರುವ ಅಭಿಮಾನದ ಕ್ರೇಜ್ ಈಗ ಹೊಸ ಮಟ್ಟಕ್ಕೆ ತಲುಪಿದೆ. ಫಿನಾಲೆ ಹಂತದ ಸಂಚಿಕೆಗಳಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ ವಿಶೇಷ ಸಂದರ್ಭದಲ್ಲಿ, ಮಂಡ್ಯ ಮೂಲದ ಅಪ್ಪಟ ಅಭಿಮಾನಿಯೊಬ್ಬರು ತಮ್ಮ ಭುಜದ ಮೇಲೆ ಗಿಲ್ಲಿ ನಟನ ಮುಖದ ಟ್ಯಾಟೂ ಹಾಕಿಸಿಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ.
ಈ ಅನಿರೀಕ್ಷಿತ ಪ್ರೀತಿಯನ್ನು ಕಂಡು ಗಿಲ್ಲಿ ನಟ ಅವರು ಅತ್ಯಂತ ಭಾವುಕರಾಗಿದ್ದಾರೆ. ಅಭಿಮಾನಿಯ ಭುಜದ ಮೇಲಿರುವ ಹಚ್ಚೆಯನ್ನು ನೋಡಿದ ಗಿಲ್ಲಿ, `ಒಂದು ಕ್ಷಣ ನಾನು ಸೈಕ್ ಆಗ್ಬಿಟ್ಟೆ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಹಣ ಮತ್ತು ಅಭಿಮಾನದ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ ಅವರು, "ಮನಿ ಇವತ್ತು ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಅಭಿಮಾನಿ ಎಂಬ ಆಸ್ತಿ ಒಮ್ಮೆ ಬಂದರೆ ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ" ಎಂದು ಹೃದಯಸ್ಪರ್ಶಿಯಾಗಿ ಹೇಳಿದ್ದಾರೆ.
ಮಂಡ್ಯ ಮೂಲದ ಈ ಅಭಿಮಾನಿಯ ಟ್ಯಾಟೂ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗಿಲ್ಲಿ ಅವರ ಕೆದರಿದ ಕೂದಲಿನ ಶೈಲಿಯನ್ನೇ ಟ್ಯಾಟೂವಿನಲ್ಲಿ ಬಿಡಿಸಲಾಗಿದ್ದು, ಇದನ್ನು ಕಂಡು ಅವರ ಪೋಷಕರು ಕೂಡ ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯ ಪ್ರಜ್ಞೆ ಮತ್ತು ಮುಗ್ಧತೆಯಿಂದ ಮನೆಮಾತಾಗಿರುವ ಗಿಲ್ಲಿ ಅವರಿಗೆ ಈ ಬಾರಿ ಕಪ್ ಗೆಲ್ಲುವ ಎಲ್ಲಾ ಲಕ್ಷಣಗಳಿವೆ ಎಂದು ಅವರ ಅಭಿಮಾನಿ ಬಳಗ ವಿಶ್ವಾಸ ವ್ಯಕ್ತಪಡಿಸಿದೆ.
ಗಿಲ್ಲಿ ನಟನಿಗೆ ಕನ್ನಡ ಪರ ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ತಮ್ಮ ನೆಚ್ಚಿನ ಸ್ಪರ್ಧಿಯ ಮೇಲೆ ಕನ್ನಡ ಪರ ಸಂಘಟನೆಗಳು ಮತ್ತು ಹೋರಾಟಗಾರರು ಇಟ್ಟಿರುವ ನಂಬಿಕೆಗೆ ಗಿಲ್ಲಿಯ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ಪರವಾದ ಅಲೆ ಜೋರಾಗಿದ್ದು, 1.1 ಮಿಲಿಯನ್ ಫಾಲೋವರ್ಸ್ ದಾಟುವ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಮಂಡ್ಯ ಮೂಲದ ಗಿಲ್ಲಿ ನಟ ಆರಂಭದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದಿದ್ದರು. ಅವರ ಶಾರ್ಟ್ ಫಿಲ್ಮ್ ಕೋಟಿ ಕೋಟಿ ವೀಕ್ಷಣೆ ಪಡೆದುಕೊಳ್ಳುತ್ತಿತ್ತು. ಗಿಲ್ಲಿ ಹಲವು ರಿಯಾಲಿಟಿ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಿತ್ತು. ಇದೀಗ ಬಿಗ್‌ಬಾಸ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ತನ್ನತ್ತ ಸೆಳೆದಿರುವ ಗಿಲ್ಲಿ ನಟ ಈ ಬಾರಿಯ ಬಿಗ್‌ಬಾಸ್ ಕಪ್ ಗೆಲ್ಲೋದು ಗ್ಯಾರಂಟಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ಗಿಲ್ಲಿ ಪರವಾಗಿ ವೋಟಿಂಗ್ ಅಭಿಯಾನ ಜೋರಾಗಿದೆ.

