ವಿಜಯ್‌ ದಳಪತಿ ವಿಚ್ಛೇದನ ಸುದ್ದಿಯ ಬೆನ್ನಲ್ಲೇ ನಟಿ ತ್ರಿಶಾ ಹೆಸರು ಕೇಳಿಬರುತ್ತಿರುವುದೇಕೆ?
x

ವಿಜಯ್‌ ವಿಚ್ಛೇದನ ಸುದ್ದಿಯ ಬೆನ್ನಲ್ಲೇ ತ್ರಿಶಾ ಹೆಸರು ತಳುಕು ಹಾಕಿಕೊಂಡಿದೆ. 

ವಿಜಯ್‌ ದಳಪತಿ ವಿಚ್ಛೇದನ ಸುದ್ದಿಯ ಬೆನ್ನಲ್ಲೇ ನಟಿ ತ್ರಿಶಾ ಹೆಸರು ಕೇಳಿಬರುತ್ತಿರುವುದೇಕೆ?

Actor Vijay Divorce|ವಿಜಯ್ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಚೆಂಗಲ್ಪಟ್ಟು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.


Click the Play button to hear this message in audio format

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಶುಕ್ರವಾರ ವಿಜಯ್ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ, ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಸಂಗೀತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಇದು ಈಗ ಕಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಸಂಗೀತಾ ಅವರ ವಿಚ್ಛೇದನದ ಅರ್ಜಿಯಲ್ಲಿ ಯಾವುದೇ ನಟಿಯ ಹೆಸರನ್ನು ಉಲ್ಲೇಖಿಸದಿದ್ದರೂ, ನೆಟ್ಟಿಗರು ಮಾತ್ರ ಇದು ನಟಿ ತ್ರಿಶಾ ಕೃಷ್ಣನ್ ಹೆಸರು ಕೇಳಿಬರುತ್ತಲೇ ಇದೆ. ದಳಪತಿ ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧವೇ ಈ ವಿಚ್ಛೇದನಕ್ಕೆ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಕೆಲವರು ವಿಜಯ್ ಅವರ ನಡವಳಿಕೆಯನ್ನು ಟೀಕಿಸುತ್ತಿದ್ದರೆ, ಇನ್ನು ಕೆಲವರು ಈ ಬೆಳವಣಿಗೆಗೆ ತ್ರಿಶಾ ಅವರೇ ನೇರ ಕಾರಣ ಎಂದು ದೂರುತ್ತಿದ್ದಾರೆ.

ವಿಜಯ್ ಮತ್ತು ತ್ರಿಶಾ ಜೋಡಿಯು 'ಗಿಲ್ಲಿ', 'ತಿರುಪ್ಪಾಚಿ', ಮತ್ತು 'ಕುರುವಿ'ಯಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿ ಗುರುತಿಸಿಕೊಂಡಿದ್ದರು. ಆದರೆ 'ಕುರುವಿ' ಸಿನಿಮಾದ ನಂತರ ಈ ಜೋಡಿ ಸುಮಾರು 15 ವರ್ಷಗಳ ಕಾಲ ಒಟ್ಟಾಗಿ ನಟಿಸಿರಲಿಲ್ಲ. ಆಗಲೇ ಇವರಿಬ್ಬರ ನಡುವೆ ಅತಿಯಾದ ಆಪ್ತತೆ ಇದೆ ಎಂಬ ಗಾಸಿಪ್‌ಗಳು ಹರಿದಾಡಿದ್ದವು ಹಾಗೂ ವಿಜಯ್ ಕುಟುಂಬವು ತ್ರಿಶಾ ಅವರಿಂದ ದೂರವಿರುವಂತೆ ಸೂಚಿಸಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು. ಕಳೆದ ವರ್ಷ 'ಲಿಯೋ' ಚಿತ್ರದ ಮೂಲಕ ಈ ಜೋಡಿ ಮತ್ತೆ ತೆರೆ ಹಂಚಿಕೊಂಡಾಗ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಈಗ ಅದೇ ಆಪ್ತತೆ ಅವರ ಸಂಸಾರದಲ್ಲಿ ಬಿರುಕು ಮೂಡಿಸಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

1999ರಲ್ಲಿ ವಿವಾಹವಾಗಿದ್ದ ವಿಜಯ್ ಮತ್ತು ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು 25 ವರ್ಷಗಳ ಸುದೀರ್ಘ ವೈವಾಹಿಕ ಜೀವನ ಈಗ ಅಂತ್ಯವಾಗುವ ಲಕ್ಷಣ ದಟ್ಟವಾಗಿದೆ. ಆದರೆ ಈ ಕುರಿತು ವಿಜಯ್ ಅಥವಾ ಸಂಗೀತಾ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಯಿನಾರ್ ನಾಗೇಂದ್ರನ್ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜಕೀಯ ಪಕ್ಷವನ್ನು (ಟಿವಿಕೆ) ಘೋಷಿಸಿರುವ ನಟ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ನಯಿನಾರ್ ನಾಗೇಂದ್ರನ್ ಮಾತನಾಡಿದ್ದರು. ವಿಜಯ್ ಅವರ ರಾಜಕೀಯ ಅನುಭವವನ್ನು ವ್ಯಂಗ್ಯವಾಡಿದ್ದ ಅವರು, "ಪಾಪ ಅವರಿಗೆ ಅನುಭವವಿಲ್ಲ. ಮೊದಲು ಅವರು ತಮ್ಮ ಮನೆಯಿಂದ ಹೊರಬರಬೇಕು, ಅದರಲ್ಲೂ ಮುಖ್ಯವಾಗಿ ತ್ರಿಶಾ ಅವರ ಮನೆಯಿಂದ ಹೊರಬಂದರೆ ಏನಾದರೂ ಸಾಧಿಸಲು ಸಾಧ್ಯ," ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಜಯ್ ಮತ್ತು ತ್ರಿಶಾ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಪರೋಕ್ಷವಾಗಿ ಅವರು ಬಿಂಬಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಅವರು ನಟಿಯಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.

Read More
Next Story