ಬೆಂಗಳೂರಿನಲ್ಲಿ 3ನೇ ಮಹಡಿಯಿಂದ ಬಿದ್ದ ಮಗು; ಘೋರ ದುರಂತ ಕಂಡು ಪ್ರಜ್ಞೆ ತಪ್ಪಿದ ತಾಯಿ
x

ಆಟವಾಡುತ್ತಾ ಮನೆಯಿಂದ ಹೊರಬಂದು ಆಯತಪ್ಪಿ ಬಿದ್ದ ಒಂದೂವರೆ ವರ್ಷದ ಕಂದಮ್ಮ

ಬೆಂಗಳೂರಿನಲ್ಲಿ 3ನೇ ಮಹಡಿಯಿಂದ ಬಿದ್ದ ಮಗು; ಘೋರ ದುರಂತ ಕಂಡು ಪ್ರಜ್ಞೆ ತಪ್ಪಿದ ತಾಯಿ

ಬೆಂಗಳೂರಿನ ನಾಯಂಡಳ್ಳಿಯಲ್ಲಿ ಎದೆ ಝಲ್ ಎನ್ನುವ ಘಟನೆಯೊಂದು ನಡೆದಿದ್ದು, ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ.


Click the Play button to hear this message in audio format

ಆಟವಾಡುತ್ತಿದ್ದ ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗು ಮೂರನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನಡೆದಿದೆ. ಏಪ್ರಿಲ್ 6ರಂದು ಈ ದುರ್ಘಟನೆ ಸಂಭವಿಸಿದ್ದು, ಮಗು ಮನೆಯ ಮುಖ್ಯ ಬಾಗಿಲು ದಾಟಿ ಹೊರಬಂದ ಸಮಯದಲ್ಲಿ ಈ ಅವಘಡ ನಡೆದಿದೆ. ಮಗು ಮಹಡಿಯಿಂದ ಕೆಳಕ್ಕೆ ಬೀಳುವ ಭೀಕರ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ತಡವಾಗಿ ವರದಿಯಾಗಿದೆ.

ಆಟದ ನಡುವೆ ಸಂಭವಿಸಿದ ಆಘಾತ

ಏಪ್ರಿಲ್ 6ರ ಸಂಜೆ ಸುಮಾರು 4:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮನೆಯ ಮೂರನೇ ಮಹಡಿಯ ಕೋಣೆಯಲ್ಲಿ ಆಟವಾಡುತ್ತಿದ್ದ ಮಗು, ಕಿಟಕಿಯ ಬಳಿ ಹೋದಾಗ ಆಯತಪ್ಪಿ ನೇರವಾಗಿ ಕೆಳಗೆ ಬಿದ್ದಿದೆ. ಮಗು ಕೆಳಗೆ ಬೀಳುವ ಎದೆ ಝಲ್ ಎನ್ನುವ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಲು ಭೀಕರವಾಗಿದೆ. ಕೆಳಗೆ ಬಿದ್ದ ತಕ್ಷಣ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ.

ಭೀಕರ ದೃ‍ಶ್ಯ ಇಲ್ಲಿದೆ

ರಸ್ತೆಯಲ್ಲೇ ಕುಸಿದು ಬಿದ್ದ ತಾಯಿ

ಮಗು ಬಿದ್ದ ತಕ್ಷಣ ಚೀರಾಡುತ್ತಾ ಓಡಿ ಬಂದ ತಾಯಿ, ಮಗುವಿನ ರಕ್ತಸಿಕ್ತ ಸ್ಥಿತಿಯನ್ನು ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗುವಿನ ಪರಿಸ್ಥಿತಿ ಕಂಡು ರಸ್ತೆ ಮಧ್ಯದಲ್ಲೇ ಅವರು ಪ್ರಜ್ಞೆ ತಪ್ಪಿ ಮೂರ್ಛೆ ಹೋಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ನೆರೆಹೊರೆಯವರು ತಾಯಿ ಮತ್ತು ಮಗು ಇಬ್ಬರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ

ತಾಯಿಗೆ ಪ್ರಥಮ ಚಿಕಿತ್ಸೆ ನೀಡಿ ಅವರು ಪ್ರಜ್ಞೆ ಬಂದಿದ್ದರೂ, ಮಗುವಿನ ಸ್ಥಿತಿ ಮಾತ್ರ ಗಂಭೀರವಾಗಿದೆ. ಮಗುವಿನ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಒಳ ರಕ್ತಸ್ರಾವದ ಸಾಧ್ಯತೆ ಇರುವುದರಿಂದ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರಿಸಲಾಗಿದೆ. ವೈದ್ಯರು ಮಗುವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ.

Read More
Next Story