ನಿವೃತ್ತ ನೌಕಾಪಡೆ ಕ್ಯಾಪ್ಟನ್ ಹಾಗೂ ದಂತವೈದ್ಯೆ ದಂಪತಿಯನ್ನು ಕೊಂದ ಟೆಕ್ಕಿ ಮಗ!
x
ಆರೋಪಿ ರೋಹನ್ ಚಂದ್ರ ಭಟ್

ನಿವೃತ್ತ ನೌಕಾಪಡೆ ಕ್ಯಾಪ್ಟನ್ ಹಾಗೂ ದಂತವೈದ್ಯೆ ದಂಪತಿಯನ್ನು ಕೊಂದ ಟೆಕ್ಕಿ ಮಗ!

ಬೆಂಗಳೂರಿನ ವಿಜ್ಞಾನ ನಗರದಲ್ಲಿ 33 ವರ್ಷದ ರೋಹನ್ ಚಂದ್ರ ಭಟ್ ತನ್ನ ಹೆತ್ತವರಾದ ನಿವೃತ್ತ ನೌಕಾಪಡೆ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಮತ್ತು ದಂತವೈದ್ಯೆ ಡಾ. ಶ್ಯಾಮಲಾ ಭಟ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.


Click the Play button to hear this message in audio format

ಕೆಲಸವಿಲ್ಲದ ವಿಷಯಕ್ಕೆ ತಂದೆ ನಿಂದಿಸಿದರು ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಗನೇ ತನ್ನ ಹೆತ್ತವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಡೆದಿದೆ. ವಿಜ್ಞಾನ ನಗರದ ವಿಲ್ಲಾವೊಂದರಲ್ಲಿ ಘಟನೆ ನಡೆದಿದ್ದು, ನವೀನ್ ಚಂದ್ರ ಭಟ್ (60) ಮತ್ತು ಅವರ ಪತ್ನಿ ಡಾ. ಶ್ಯಾಮಲಾ ಭಟ್ (55) ಕೊಲೆಯಾದ ದುರ್ದೈವಿಗಳು

ಘಟನೆಯ ವಿವರ

ನಿವೃತ್ತ ನೌಕಾಪಡೆ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಮತ್ತು ಅವರ ಪತ್ನಿ, ದಂತವೈದ್ಯೆ ಡಾ. ಶ್ಯಾಮಲಾ ಭಟ್ (55) ಮೃತಪಟ್ಟ ದಂಪತಿ. ಬುಧವಾರ ಬೆಳಿಗ್ಗೆ ಸುಮಾರು 8.30ರ ಸುಮಾರಿಗೆ ಇವರ ಪುತ್ರ ರೋಹನ್ ಚಂದ್ರ ಭಟ್ (33) ರಕ್ತಸಿಕ್ತ ಬಟ್ಟೆಯಲ್ಲಿ ಮನೆಯಿಂದ ಹೊರಗೆ ಓಡುತ್ತಿರುವುದನ್ನು ವಾಕಿಂಗ್ ಮಾಡುತ್ತಿದ್ದವರು ಗಮನಿಸಿದ್ದಾರೆ. ಮನೆಯಿಂದ ಕೇಳಿಬಂದ ಚೀರಾಟ ಕೇಳಿ ನಿವಾಸಿಗಳು ಒಳಗೆ ಹೋದಾಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಕೊಲೆಗೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಗೆ ಪ್ರಮುಖವಾಗಿ ಮೂರು ಕಾರಣಗಳು ಕಂಡುಬರುತ್ತಿವೆ. ಸಾಫ್ಟ್‌ವೇರ್ ವೃತ್ತಿಪರನಾಗಿದ್ದ ರೋಹನ್, ಮೂರು ವರ್ಷಗಳ ಹಿಂದೆ ಅಮೆರಿಕದಿಂದ ಮರಳಿದ್ದ. ಆದರೆ ಬೆಂಗಳೂರಿನಲ್ಲಿ ಯಾವುದೇ ಕೆಲಸಕ್ಕೆ ಸೇರಿರಲಿಲ್ಲ. ಇದೇ ವಿಷಯಕ್ಕೆ ತಂದೆ ನವೀನ್ ಚಂದ್ರ ಅವರು ಆಗಾಗ ಮಗನನ್ನು ನಿಂದಿಸುತ್ತಿದ್ದರು ಎನ್ನಲಾಗಿದೆ.

ಸ್ವಂತ ಸ್ಟಾರ್ಟ್-ಅಪ್ ಆರಂಭಿಸುವ ಹಂಬಲ ಹೊಂದಿದ್ದ ರೋಹನ್, ಹಣಕ್ಕಾಗಿ ಹೆತ್ತವರನ್ನು ಸದಾ ಪೀಡಿಸುತ್ತಿದ್ದ. ಇದು ಮನೆಯಲ್ಲಿ ಪದೇ ಪದೇ ಜಗಳಕ್ಕೆ ಕಾರಣವಾಗುತ್ತಿತ್ತು. ರೋಹನ್ ವರ್ತೂರಿನಲ್ಲಿ ಪ್ರತ್ಯೇಕವಾಗಿ ವಾಸವಿದ್ದರೂ, ಆಸ್ತಿ ವಿಚಾರವಾಗಿಯೂ ಪೋಷಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಎನ್ನಲಾಗಿದ್ದು, ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ಕ್ರಮ

ಎಚ್‌ಎಎಲ್ ಪೊಲೀಸರು ಈಗಾಗಲೇ ಆರೋಪಿ ರೋಹನ್‌ನನ್ನು ಬಂಧಿಸಿದ್ದಾರೆ. ಮೃತ ದಂಪತಿಯ ಮಗಳು ಅಮೆರಿಕದಿಂದ ಬಂದ ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಯಲಿದೆ. ನಿವಾಸಿಗಳ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದೆ.

Read More
Next Story