Did the hotel add a service charge to the bill? File a complaint; the hotel will be fined 50,000!
x

ಸಾಂದರ್ಭಿಕ ಚಿತ್ರ

ಹೋಟೆಲ್ ಬಿಲ್‌ನಲ್ಲಿ ‘ಸರ್ವಿಸ್ ಚಾರ್ಜ್’ ಹಾಕಿದ್ದಾರಾ? ದೂರು ಕೊಟ್ಟು, 50,000 ದಂಡ ಹಾಕಿಸಿ!

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಹೊಸ ಆದೇಶ ಹೊರಡಿಸಿದ್ದು, ಸರ್ವಿಸ್ ಚಾರ್ಜ್​ ಹೆಸರಲ್ಲಿ ಹೆಚ್ಚುವರಿ ಹಣ ಗ್ರಾಹಕರಿಂದ ಪಡೆಯುವುದು ವಂಚನೆ ಎಂದು ಹೇಳಿದೆ.


Click the Play button to hear this message in audio format

ನಿಮಗೆ ಖುಷಿ ಎನಿಸಿದಾಗ ಅಥವಾ ಅಪರೂಪದ ಅತಿಥಿಗಳು ಬಂದಾಗ ಊಟ ಮಾಡಲು ಹೋಟೆಲ್‌ಗೋ ಅಥವಾ ರೆಸ್ಟೋರೆಂಟ್‌ಗೋ ಹೋಗಿರುತ್ತೀರಿ ಎಂದುಕೊಳ್ಳೋಣ. ರುಚಿಕರವಾದ ಊಟ ಮುಗಿಸಿ ಬಿಲ್ ನೋಡಿದಾಗ, ನೀವು ತಿಂದ ತಿಂಡಿಯ ದರದ ಜೊತೆಗೆ ‘ಸರ್ವಿಸ್ ಚಾರ್ಜ್’ ಎಂದು ಹೆಚ್ಚುವರಿ ಹಣ ಸೇರಿಸಿದ್ದು ಕಂಡು ಬಂದರೆ, ಸುಮ್ಮನೆ ಇರಬೇಡಿ. ದೂರು ಕೊಡಿ. ಯಾಕೆಂದರೆ ಅವರು ಆ ರೀತಿ ಮಾಡುವುದು ಅಕ್ರಮ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಹೊಸ ಆದೇಶ ಹೊರಡಿಸಿದ್ದು, ಸರ್ವಿಸ್ ಚಾರ್ಜ್​ ಹೆಸರಲ್ಲಿ ಹೆಚ್ಚುವರಿ ಹಣ ಗ್ರಾಹಕರಿಂದ ಪಡೆಯುವುದು ವಂಚನೆ ಎಂದು ಹೇಳಿದೆ. ಈ ಬಗ್ಗೆ ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಗ್ರಾಹಕರ ಅನುಮತಿ ಇಲ್ಲದೆ ಬಿಲ್‌ನಲ್ಲಿ ತಾವಾಗಿಯೇ ಸರ್ವಿಸ್ ಚಾರ್ಜ್ ಸೇರಿಸುವಂತಿಲ್ಲ ಹೇಳಿದೆ. .

ಸರ್ವಿಸ್ ಚಾರ್ಜ್ ಹಾಕಿದರೆ ನೀವೇನು ಮಾಡಬೇಕು?

ಒಂದು ವೇಳೆ ನೀವು ಹೋಟೆಲ್​ಗೆ ಹೋಗಿದ್ದಾಗ ಬಿಲ್​ನಲ್ಲಿ ಸರ್ವಿಸ್ ಚಾರ್ಜ್ ಎಂದೇನಾದರೂ ಕಂಡು ಬಂದರೆ ತಕ್ಷಣವೇ ಅದನ್ನು ತೆಗೆದುಹಾಕುವಂತೆ ಹಾಗೂ ಹೊಸ ಬಿಲ್ ಕೊಡುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿ. ಸರ್ವಿಸ್​ ಚಾರ್ಜ್​ ಎಂಬುದು ಟಿಪ್ಸ್​ಗೆ ಸಮಾನ. ಹೀಗಾಗಿ ಕೊಡುವುದು ಅಥವಾ ಬಿಡುವುದು ನಮ್ಮಿಷ್ಟ ಎಂದು ಮನವರಿಕೆ ಮಾಡಿ. ಅದನ್ನು ಬಿಲ್​ನಲ್ಲಿ ಸೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರಿಗೆ ತಿಳಿಸಿ.

ಹೋಟೆಲ್‌ನವರು ನಿಮ್ಮ ಮಾತಿಗೆ ಬೆಲೆ ಕೊಡದೆ ತಿರುಗಿ ಬಿದ್ದರೆ ಅಥವಾ ಉಳಿದ ಗ್ರಾಹಕರ ಮುಂದೆ ನಿಮ್ಮ ಮರ್ಯಾದೆ ಕಳೆದರೆ ನೀವು ತಕ್ಷಣ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline - 1915) ಗೆ ಕರೆ ಮಾಡಿ ದೂರು ನೀಡಬಹುದು.

50,000 ರೂ. ದಂಡ ಖಚಿತ

ಒಂದು ವೇಳೆ ಗ್ರಾಹಕರ ನೀಡಿದ ದೂರು ಪ್ರಾಧಿಕಾರದಲ್ಲಿ ಸಾಬೀತಾದರೆ, ನಿಯಮ ಉಲ್ಲಂಘಿಸಿದ ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ಬರೋಬ್ಬರಿ 50,000 ರೂಪಾಯಿವರೆಗೂ ದಂಡ ವಿಧಿಸಲಾಗುತ್ತದೆ. ಈಗಾಗಲೇ ದೆಹಲಿ ಹೈಕೋರ್ಟ್ ಮತ್ತು ಸಿಸಿಪಿಎ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇತ್ತೀಚೆಗೆ ನಿಯಮ ಮೀರಿದ 27 ಹೋಟೆಲ್‌ಗಳಿಗೆ ಬಿಸಿ ಮುಟ್ಟಿಸಲಾಗಿದೆ. ಹಾಗಾಗಿ, ಮುಂದಿನ ಬಾರಿ ಹೋಟೆಲ್‌ಗೆ ಹೋದಾಗ ಬಿಲ್ ಚೆಕ್ ಮಾಡಲು ಮರೆಯಬೇಡಿ. ನಿಮ್ಮ ಹಕ್ಕನ್ನು ಬಿಟ್ಟುಕೊಡಬೇಡಿ.

ನಿಯಮ ಹೇಳುವುದೇನು?

ಯಾವುದೇ ರೆಸ್ಟೋರೆಂಟ್‌ಗಳು ಅಥವಾ ಹೋಟೆಲ್​ಗಳು ಸರ್ವಿಸ್ ಚಾರ್ಜ್ ಅನ್ನು ಕಡ್ಡಾಯವಾಗಿ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದು ಸಂಪೂರ್ಣವಾಗಿ ಗ್ರಾಹಕರ ಆಯ್ಕೆ. ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ 2019 ರ ಅಡಿಯಲ್ಲಿ ಕಡ್ಡಾಯ ಸರ್ವಿಸ್ ಚಾರ್ಜ್ ವಿಧಿಸುವುದು "ಅನ್‌ಫೇರ್ ಟ್ರೇಡ್ ಪ್ರಾಕ್ಟೀಸ್" ಎಂದು ಉಲ್ಲೇಖಿಸಲಾಗಿದೆ. . ಸಿಸಿಪಿಎ ಗ್ರಾಹಕರ ಹಕ್ಕುಗಳ ರಕ್ಷಣೆ, ಅನ್ಯಾಯದ ವ್ಯಾಪಾರ ಪದ್ಧತಿಗಳ ನಿಯಂತ್ರಣ ಮತ್ತು ತಪ್ಪು ಅಥವಾ ಮೋಸಗೊಳಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ಹೀಗಾಗಿ ನಿಯಮದಡಿ ದಂಡ ವಿಧಿಸಲು ಅವರಿಗೆ ಅವಕಾಶ ಇದೆ. ಸಿಸಿಪಿಎ 2020ರ 24 ಜುಲೈನಿಂದ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಗ್ರಾಹಕರ ಹಕ್ಕುಗಳ ಉಲ್ಲಂಘನೆ, ಗ್ರಾಹಕರನ್ನು ಹಾದಿ ತಪ್ಪಿಸುವ ಜಾಹೀರಾತುಗಳ ಪ್ರಸಾರ, ಅನ್ಯಾಯದ ವ್ಯಾಪಾರ ಪದ್ಧತಿಗಳಿಗಾಗಿ 325 ಪ್ರಕರಣ ದಾಖಲಿಸಿ, ನೋಟೀಸ್‌ಗಳನ್ನು ನೀಡಿದೆ. ಅಲ್ಲದೆ, ಒಟ್ಟು 1.19 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ. .

Read More
Next Story