Gold price | Big shock for gold lovers, gold price rises by Rs. 37,600 in a single day
x

ಸಾಂದರ್ಭಿಕ ಚಿತ್ರ

Gold price today| ಬಂಗಾರ ಪ್ರಿಯರಿಗೆ ಬಿಗ್ ಶಾಕ್, ಒಂದೇ ದಿನ ಚಿನ್ನದ ಬೆಲೆ ರೂ. 37,600 ರೂ. ಏರಿಕೆ

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲಿ ಕಂಡುಬಂದ ಅನಿರೀಕ್ಷಿತ ಏರಿಕೆಯು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಪ್ರತಿ ಕೆ.ಜಿ. ಬೆಳ್ಳಿಗೆ 2,50,000 ರೂ. ಆಗಿದೆ.


Click the Play button to hear this message in audio format

ಜಾಗತಿಕ ಮಾರುಕಟ್ಟೆಯಲ್ಲಿನ ಕ್ಷಿಪ್ರ ಬದಲಾವಣೆ ಹಾಗೂ ಭೌಗೋಳಿಕ ರಾಜಕೀಯ ವಿದ್ಯಮಾನಗಳ ಪರಿಣಾಮವಾಗಿ ಭಾರತದಲ್ಲಿ ಬುಧವಾರ ಚಿನ್ನದ ಬೆಲೆ ಗಗನಕ್ಕೇರಿದೆ. ಇಂದು ಒಂದೇ ದಿನ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂ ಗೆ ಬರೋಬ್ಬರಿ 37,600 ರೂ. ರಷ್ಟು ಏರಿಕೆಯಾಗುವ ಮೂಲಕ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ.

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3,760 ರೂ. ಏರಿಕೆಯಾಗಿ 1,46,670 ಕ್ಕೆ ತಲುಪಿದೆ. 100 ಗ್ರಾಂ 14,66,700 ರೂ. ಆಗಿದೆ. 22 ಕ್ಯಾರೆಟ್ 10 ಗ್ರಾಂ ಗೆ 3,450 ರೂ. ಏರಿಕೆಯಾಗಿ 1,34,450 ರೂ. ತಲುಪಿದೆ.18 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 2,820 ರೂ. ಏರಿಕೆಯಾಗಿ 1,10,010 ರೂ. ಗೆ ಮುಟ್ಟಿದೆ.

ಚಿನ್ನದ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಬೆಳ್ಳಿಯ ದರವೂ ಗಗನಕ್ಕೇರಿದ್ದು, ಗ್ರಾಹಕರಿಗೆ ಭಾರೀ ಆಘಾತ ನೀಡಿದೆ. ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯಲ್ಲಿ ಕಂಡುಬಂದ ಅನಿರೀಕ್ಷಿತ ಏರಿಕೆಯು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಪ್ರತಿ ಕೆ.ಜಿ. ಬೆಳ್ಳಿಗೆ 2,50,000 ರೂ. ಆಗಿದೆ. ಕೇವಲ ಒಂದು ದಿನದ ಅವಧಿಯಲ್ಲಿ 100 ಗ್ರಾಂ ಬೆಳ್ಳಿ 1,500 ರೂ. ರಷ್ಟು ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆ 250 ರೂ. ಆಗಿದ್ದು ಮಾ.24 ಕ್ಕೆ ಹೋಲಿಸಿದರೆ 15 ರೂ. ಹೆಚ್ಚಳವಾಗಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ದರ

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ 1,46,670 ರೂ. ಚೆನ್ನೈ ನಲ್ಲಿ 10 ಗ್ರಾಂ ಗೆ 1,48,370 ರೂ. ಹೈದರಾಬಾದ್‌ನಲ್ಲಿ 1,46,670 ರೂ. ಮುಂಬೈನಲ್ಲಿ 1,46,670 ರೂ. ದೆಹಲಿಯಲ್ಲಿ 1,46,870 ರೂ. ತಲುಪಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಜಾಗತಿಕ ಉದ್ವಿಗ್ನತೆ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳ ನಿರೀಕ್ಷೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುವಂತೆ ಮಾಡಿರುವುದು ಬೆಲೆ ಹೆಚ್ಚಾಗುವಂತೆ ಮಾಡಿದೆ.

ಡಾಲರ್ ಸ್ಥಿರತೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಇಂಡೆಕ್ಸ್ 99.3 ಮಟ್ಟದಲ್ಲಿ ಸ್ಥಿರವಾಗಿರುವುದು ಸಹ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಗೆ ಪೂರಕವಾಗಿದೆ.

ಖರೀದಿ ಆಸಕ್ತಿ: ಇತ್ತೀಚಿನ ಭಾರಿ ಕುಸಿತದ ನಂತರ ಹೂಡಿಕೆದಾರರಲ್ಲಿ ಕಂಡುಬಂದ ಅಲ್ಪಾವಧಿಯ ಖರೀದಿ ಆಸಕ್ತಿಯು ಬೆಲೆಯನ್ನು ಮತ್ತೆ ಮೇಲಕ್ಕೆತ್ತಿದೆ ಎಂದು ಇಂಡಿಯಾ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಉಪಾಧ್ಯಕ್ಷೆ ಅಕ್ಷಾ ಕಾಂಬೋಜ್ ತಿಳಿಸಿದ್ದಾರೆ.

Read More
Next Story