Gold price today| ಆಭರಣ ಪ್ರಿಯರಿಗೆ ಸತತ ಸಿಹಿಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ
x
ಸಂಗ್ರಹ ಚಿತ್ರ.

Gold price today| ಆಭರಣ ಪ್ರಿಯರಿಗೆ ಸತತ ಸಿಹಿಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ವಿವಿಧ ಆರ್ಥಿಕ ಬದಲಾವಣೆಗಳ ನೇರ ಪರಿಣಾಮ ಭಾರತದ ಮಾರುಕಟ್ಟೆಯ ಮೇಲೂ ಬೀರಿದ್ದು, ಬಂಗಾರದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.


Click the Play button to hear this message in audio format

ಕಳೆದ ಒಂದು ವಾರದಿಂದ ಚಿನ್ನಾಭರಣ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಮಾರುಕಟ್ಟೆಯಿಂದ ಸತತವಾಗಿ ಸಿಹಿಸುದ್ದಿ ಲಭ್ಯವಾಗುತ್ತಿದೆ. ಇಂದು (ಮಾರ್ಚ್ 24) ಚಿನ್ನದ ಬೆಲೆಯಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಯಾಗಿದ್ದು, ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ವಿವಿಧ ಆರ್ಥಿಕ ಬದಲಾವಣೆಗಳ ನೇರ ಪರಿಣಾಮ ಭಾರತದ ಮಾರುಕಟ್ಟೆಯ ಮೇಲೂ ಬೀರಿದ್ದು, ದೇಶೀಯ ಮಟ್ಟದಲ್ಲಿ ಚಿನ್ನದ ದರ ಗಣನೀಯವಾಗಿ ತಗ್ಗಿದೆ. ವಿಶೇಷವೆಂದರೆ, ಇದು ಪ್ರಸ್ತುತ ತಿಂಗಳಿನಲ್ಲಿ ದಾಖಲಾದ ಅತಿ ಕಡಿಮೆ ಬೆಲೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ

ಮಾರ್ಚ್ 24ರ ಮಧ್ಯಾಹ್ನ 1 ಗಂಟೆಯವರೆಗಿನ ಮಾರುಕಟ್ಟೆ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 270 ರೂಪಾಯಿಗಳಷ್ಟು ಕಡಿಮೆಯಾಗಿದೆ. ಈ ಮೂಲಕ ಒಂದು ಗ್ರಾಂ ಚಿನ್ನದ ದರ 12,865 ರೂಪಾಯಿಗಳಿಗೆ ತಲುಪಿದ್ದು, 10 ಗ್ರಾಂ ಚಿನ್ನದ ಬೆಲೆ 1,28,650 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಶುದ್ಧ ಚಿನ್ನವೆಂದು ಕರೆಯಲ್ಪಡುವ 24 ಕ್ಯಾರಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 291 ರೂಪಾಯಿ ಇಳಿಕೆಯಾಗಿದ್ದು, ಒಂದು ಗ್ರಾಂಗೆ 14,035 ರೂಪಾಯಿ ಹಾಗೂ 10 ಗ್ರಾಂಗೆ 1,40,350 ರೂಪಾಯಿಗಳ ದರ ನಿಗದಿಯಾಗಿದೆ.

ಬೆಲೆ ಇಳಿಕೆಗೆ ಜಾಗತಿಕ ಕಾರಣಗಳು

ಚಿನ್ನದ ಬೆಲೆಯಲ್ಲಿನ ಈ ಕುಸಿತಕ್ಕೆ ಪ್ರಮುಖವಾಗಿ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಹಾಗೂ ಭೌಗೋಳಿಕ ವಿದ್ಯಮಾನಗಳು ಕಾರಣವಾಗಿವೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಜಾಗತಿಕ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯಿಂದ ಹಿಂದೆ ಸರಿದು ಪರ್ಯಾಯ ವಲಯಗಳತ್ತ ತಮ್ಮ ಗಮನ ಹರಿಸಿರುವುದು ಚಿನ್ನದ ದರ ಇಳಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

Read More
Next Story