Shock for jewelry lovers: Silver price rises to Rs 3 lakh, 24 carat gold price also increases drastically!
x

ಚಿನ್ನ ಹಾಗೂ ಬೆಳ್ಳಿ (ಸಾಂದರ್ಭಿಕ ಚಿತ್ರ)

ಆಭರಣ ಪ್ರಿಯರಿಗೆ ಶಾಕ್: ಬೆಳ್ಳಿ ಬೆಲೆ 3 ಲಕ್ಷ ರೂ.ಗೆ ಏರಿಕೆ, 24 ಕ್ಯಾರೆಟ್ ಚಿನ್ನದ ದರದಲ್ಲೂ ಭಾರೀ ಹೆಚ್ಚಳ!

ಚಿನ್ನದಂತೆಯೇ ಬೆಳ್ಳಿಯ ಬೆಲೆಯೂ ಹೆಚ್ಚಳವಾಗಿದ್ದು, 10 ಗ್ರಾಂ ಗೆ 300 ರೂ. ಏರಿಕೆಯಾಗಿದ್ದು, ಒಂದು ಕೆ.ಜಿ. ಗೆ 15 ಸಾವಿರ ರೂ. ಹೆಚ್ಚಳಗೊಂಡಿದೆ. ಪ್ರಸ್ತುತ ದರದ ಪ್ರಕಾರ ಬೆಳ್ಳಿ ಒಂದು ಕೆ.ಜಿ. ಗೆ 3 ಲಕ್ಷ ರೂಪಾಯಿ ತಲುಪಿದೆ.


Click the Play button to hear this message in audio format

ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಮತ್ತಷ್ಟು ಹೆಚ್ಚಳವಾಗಿದ್ದು, ಆಭರಣ ಪ್ರಿಯರಿಗೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ. 24 ಕ್ಯಾರೆಟ್‌ ಚಿನ್ನದ ಬೆಲೆಯು 224 ರೂ. ಏರಿಕೆಯಾಗಿದ್ದು, ಬೆಳ್ಳಿಯು ಒಂದು ಕೆ.ಜಿ. ಗೆ 3ಲಕ್ಷ ರೂ. ಗೆ ತಲುಪಿದೆ.

ಸೋಮವಾರದಂದು (ಫೆ.9) 24 ಕ್ಯಾರೆಟ್‌ ಚಿನ್ನ 10 ಗ್ರಾಂ. ಗೆ 2,240 ರೂ. ಏರಿಕೆಯಾಗಿದ್ದು, ಒಂದು ಗ್ರಾಂ ಬೆಲೆ 15,584 ರೂ. ಆಗಿದ್ದು, 10 ಗ್ರಾಂ ಬೆಲೆ 1,58,840 ರೂ. ಗೆ ತಲುಪಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂ ಗೆ 205 ರೂ. ಹಾಗೂ 10 ಗ್ರಾಂ ಗೆ 2050 ರೂ. ಗೆ ಏರಿಕೆಯಾಗಿದೆ. ಆ ಮೂಲಕ ಒಟ್ಟು 1,45,600 ರೂ. ಗೆ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ ಹೆಚ್ಚಳ

ಚಿನ್ನದಂತೆಯೇ ಬೆಳ್ಳಿಯ ಬೆಲೆಯೂ ಹೆಚ್ಚಳವಾಗಿದ್ದು, 10 ಗ್ರಾಂ ಗೆ 300 ರೂ. ಏರಿಕೆಯಾಗಿದ್ದು, ಒಂದು ಕೆ.ಜಿ. ಗೆ 15 ಸಾವಿರ ರೂ. ಹೆಚ್ಚಳಗೊಂಡಿದೆ. ಪ್ರಸ್ತುತ ದರದ ಪ್ರಕಾರ ಬೆಳ್ಳಿ ಒಂದು ಕೆ.ಜಿ. ಗೆ 3 ಲಕ್ಷ ರೂಪಾಯಿ ತಲುಪಿದೆ.

ಒಂಬತ್ತು ದಿನದಲ್ಲಿ ಏರಿಳಿತ

ಕೇವಲ ಹತ್ತು ದಿನಗಳಲ್ಲಿ ಹಲವಾರು ಬಾರಿ ಏರಿಳಿತವಾಗಿರುವ ಚಿನ್ನ ಫೆ. 1ರಂದು 16,058 ದರ ಹೊಂದಿದ್ದರೆ, ಫೆ.2ರಂದು 15,317 ರೂ. ಗೆ ಇಳಿದಿತ್ತು. ಫೆ,9 ಕ್ಕೆ 1,58, 840 ರೂ. ತಲುಪುವ ಮೂಲಕ ಮತ್ತೊಮ್ಮೆ ಹೆಚ್ಚಳವಾಗಿದೆ.

ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚಾಗಲು ಪ್ರಮುಖ ಕಾರಣಗಳು

ಜಾಗತಿಕ ರಾಜಕೀಯ ಅಸ್ಥಿರತೆ: ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳ ಜೊತೆಗೆ, 2026ರಲ್ಲಿ ಅಮೆರಿಕ - ಯುರೋಪ್ ನಡುವಿನ ಸುಂಕದ ಸಮರ ಮತ್ತು ಗ್ರೀನ್‌ಲ್ಯಾಂಡ್ ವಿಚಾರವಾಗಿ ಉಂಟಾಗಿರುವ ಉದ್ವಿಗ್ನತೆ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುತ್ತಿದ್ದು ಏರಿಕೆಯಾಗುವಂತೆ ಮಾಡಿದೆ.

ಕೇಂದ್ರ ಬ್ಯಾಂಕುಗಳಿಂದ ಚಿನ್ನದ ಖರೀದಿ: ಜಾಗತಿಕವಾಗಿ ಅನೇಕ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಟನ್‌ಗಟ್ಟಲೆ ಚಿನ್ನವನ್ನು ಖರೀದಿಸಿ ಮೀಸಲಿಡುತ್ತಿರುವುದು ಪ್ರಮುಖ ಕಾರಣವಾಗಿದೆ.

ಬೆಳ್ಳಿಯ ಕೈಗಾರಿಕಾ ಬೇಡಿಕೆ: ಸೌರಶಕ್ತಿ ಫಲಕಗಳು, ಎಲೆಕ್ಟ್ರಿಕ್ ವಾಹನಗಳು (EV) ಮತ್ತು 5G ತಂತ್ರಜ್ಞಾನದಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗುತ್ತಿದೆ. ಸರಬರಾಜಿನ ಕೊರತೆ ಮತ್ತು ಚೀನಾದ ರಫ್ತು ನಿರ್ಬಂಧಗಳಿಂದಾಗಿ ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ.

ರೂಪಾಯಿ ಮೌಲ್ಯದ ಕುಸಿತ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇಳಿಕೆಯಾಗುತ್ತಿರುವುದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಲು ನೇರ ಕಾರಣವಾಗಿದೆ.

ಬಡ್ಡಿದರ ಕಡಿತದ ನಿರೀಕ್ಷೆ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿರುವುದು ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದೆ.

ದೇಶೀಯ ಬೇಡಿಕೆ: ಭಾರತದಲ್ಲಿ ಮದುವೆಯ ಸೀಸನ್ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಬೇಡಿಕೆಯು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

Read More
Next Story