ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಅತಿದೊಡ್ಡ ಕುಸಿತ ದಾಖಲಾಗಿದೆ. ಬೆಳ್ಳಿ ಕೆಜಿಗೆ 3 ಲಕ್ಷಕ್ಕಿಂತ ಕೆಳಕ್ಕೆ ಇಳಿದಿದ್ದರೆ, ಚಿನ್ನದ ದರದಲ್ಲೂ ಭಾರಿ ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಅಮೆರಿಕನ್ ಡಾಲರ್ ಚೇತರಿಕೆಯಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಬೆಳ್ಳಿ ಬೆಲೆಯು ಶೇಕಡಾ 30 ರಷ್ಟು ಇಳಿಕೆಯಾಗಿ ಕೆಜಿಗೆ 3,00,000 ರೂಪಾಯಿಗಳಿಗಿಂತ ಕೆಳಕ್ಕೆ ತಲುಪಿದೆ. ಚಿನ್ನದ ಬೆಲೆಯೂ ಸಹ 1,50,000 ರೂಪಾಯಿಗಳ ಸಮೀಪಕ್ಕೆ ಇಳಿದಿದೆ. ಭಾರತದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,50,849 ರೂಪಾಯಿಗಳಿಗೆ ಕುಸಿದರೆ, 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 1,91,922 ರೂಪಾಯಿಗಳಷ್ಟಿದೆ. ಈ ದರಗಳಲ್ಲಿ ಜಿಎಸ್‌ಟಿ (GST) ಮತ್ತು ತಯಾರಿಕಾ ವೆಚ್ಚಗಳು ಸೇರಿಲ್ಲ ಎಂಬುದು ಗಮನಾರ್ಹ. ಇದೇ ವೇಳೆ ಬೆಳ್ಳಿಯ ಬೆಲೆಯೂ ಸಹ ಕೆಜಿಗೆ ಸುಮಾರು 2,91,922 ರೂಪಾಯಿಗಳಿಗೆ ಇಳಿಕೆಯಾಗಿದೆ.
ಇಂದಿನ ಚಿನ್ನದ ದರ
ಭಾರತದ ಪ್ರಮುಖ ನಗರಗಳಲ್ಲಿ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಹೊರತುಪಡಿಸಿ ಇಂದಿನ ದರಗಳು ಈ ಕೆಳಗಿನಂತಿವೆ:
ನಗರ | 22K ಚಿನ್ನ (ಪ್ರತಿ 10 ಗ್ರಾಂ) | 24K ಚಿನ್ನ (ಪ್ರತಿ 10 ಗ್ರಾಂ) |
ದೆಹಲಿ | 1,38,360 ರೂ. | 1,51,050ರೂ. |
ಜೈಪುರ | 1,38,360 ರೂ. | 1,51,050ರೂ. |
ಅಹಮದಾಬಾದ್ | 1,38,360 ರೂ. | 1,51,050ರೂ. |
ಮುಂಬೈ | 1,38,300 ರೂ. | 1,50,900ರೂ. |
ಪುಣೆ | 1,38,300 ರೂ. | 1,50,900ರೂ. |
ಹೈದರಾಬಾದ್ | 1,38,300 ರೂ. | 1,50,900ರೂ. |
ಬೆಂಗಳೂರು | 1,38,300 ರೂ. | 1,50,900ರೂ. |
ಚೆನ್ನೈ | 1,38,300 ರೂ. | 1,50,900ರೂ. |
ಕೋಲ್ಕತ್ತಾ | 1,38,300 ರೂ. | 1,50,900ರೂ. |
ಬೆಳ್ಳಿ ದರದಲ್ಲಿ ಭಾರಿ ಇಳಿಕೆ:
ಗುರುವಾರ ಕೆಜಿಗೆ ರೂ. 4 ಲಕ್ಷದ ದಾಖಲೆ ಮಟ್ಟ ತಲುಪಿದ್ದ ಬೆಳ್ಳಿ ಬೆಲೆಯು, ಶುಕ್ರವಾರದ ಹೊತ್ತಿಗೆ ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲಿ ಸುಮಾರು ರೂ. 2,91,000ಕ್ಕೆ ಕುಸಿದಿದೆ.
ಜಾಗತಿಕ ಮಾರುಕಟ್ಟೆಯ ಪ್ರಭಾವ
ಅಮೆರಿಕ ಸರ್ಕಾರ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಟ್ರಂಪ್ ಮತ್ತು ಸೆನೆಟ್ ಡೆಮೋಕ್ರಾಟ್‌ಗಳ ನಡುವೆ ತಾತ್ಕಾಲಿಕ ಒಪ್ಪಂದ ಏರ್ಪಟ್ಟಿದೆ. ಇದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದ್ದು, ಸುರಕ್ಷಿತ ಹೂಡಿಕೆಯಾಗಿರುವ ಚಿನ್ನದ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಇಳಿಕೆಯಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್‌ನ ವಿಶ್ಲೇಷಕ ಕಾಯ್ನಾತ್ ಚೈನ್ವಾಲಾ ತಿಳಿಸಿದ್ದಾರೆ.
ದರ ಇಳಿಕೆಗೆ ಕಾರಣಗಳೇನು?
ಭಾರತದಲ್ಲಿ ಚಿನ್ನದ ದರಗಳು ಪ್ರಮುಖವಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕ ಮತ್ತು ತೆರಿಗೆಗಳು, ರೂಪಾಯಿ ಮತ್ತು ಡಾಲರ್ ವಿನಿಮಯ ದರದ ಏರಿಳಿತದ ಮೇಲೆ ಅವಲಂಭಿತವಾಗಿದೆ.


