Gold price | Big shock for gold lovers, gold price rises by Rs. 37,600 in a single day
x

ಸಾಂದರ್ಭಿಕ ಚಿತ್ರ

Gold Rate Today| ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ: ಇಂದಿನ ರೇಟ್‌ ಎಷ್ಟಿದೆ?

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯು ಇಂದು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ಬರೋಬ್ಬರಿ 20,000 ರೂ. ಇಳಿಕೆಯಾಗಿದೆ.


Click the Play button to hear this message in audio format

ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಸ್ಥಳೀಯ ಬೇಡಿಕೆಯ ಬದಲಾವಣೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ ಗೆ 17,002 ರೂ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ ಗೆ 15,585 ರೂ. ಹಾಗೂ 18 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 12,752 ರೂ. ಗೆ ಬೆಲೆಯ ಇಳಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನಕ್ಕೆ 59 ರೂ. 22 ಕ್ಯಾರೆಟ್‌ ಚಿನ್ನಕ್ಕೆ 45 ರೂ. ಹಾಗೂ 18 ಕ್ಯಾರೆಟ್‌ ಚಿನ್ನಕ್ಕೆ 36 ರೂ. ಕಡಿಮೆಯಾಗಿದೆ.

24 ಕ್ಯಾರೆಟ್‌ನ ಪ್ರತಿ ಹತ್ತು ಗ್ರಾಂ ಚಿನ್ನ 1,70,020 ರೂ, 22 ಕ್ಯಾರೆಟ್‌ ಹತ್ತು ಗ್ರಾಂ ಚಿನ್ನಕ್ಕೆ 1,55, 850 ರೂ. ಹಾಗೂ 18 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನಕ್ಕೆ 1,27, 250 ರೂ. ಗೆ ಇಳಿಕೆಯಾಗಿದೆ.

ಬೆಳ್ಳಿ ದರದಲ್ಲಿ ಭಾರಿ ಕುಸಿತ

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಬೆಲೆಯು ಇಂದು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ಕೆ.ಜಿ. ಬೆಳ್ಳಿಯ ಮೇಲೆ ಬರೋಬ್ಬರಿ 20,000 ರೂ. ಇಳಿಕೆಯಾಗಿದೆ. ಸೋಮವಾರ (ಮಾ.2) ಪ್ರತಿ ಗ್ರಾಂ ಬೆಳ್ಳಿಗೆ 315 ರೂ. ಇದ್ದು, ಮಂಗಳವಾರ (ಮಾ.3) 295 ರೂ. ಆಗಿದೆ. ಪ್ರತಿ ಕೆ.ಜಿ. ಬೆಳ್ಳಿಗೆ 2,95,000 ರೂ. ಗೆ ಕುಸಿದಿದೆ.

ಬೆಲೆ ಇಳಿಕೆಗೆ ಕಾರಣವೇನು?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ವಿಶೇಷವಾಗಿ ಅಮೆರಿಕ, ಇಸ್ರೇಲ್‌ ಹಾಗೂ ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆಯೂ ಮಾರುಕಟ್ಟೆಯ ವಹಿವಾಟು ಮತ್ತು ಸ್ಥಳೀಯವಾಗಿ ಆಮದು ಸುಂಕದ ಪರಿಣಾಮಗಳು ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ, ದರದಲ್ಲಿನ ಈ ಸಣ್ಣ ಇಳಿಕೆಯು ವಹಿವಾಟು ಹೆಚ್ಚಾಗಲು ಪೂರಕವಾಗಲಿದೆ.

Read More
Next Story