ಇಂದಿನಿಂದಲೇ H-1B ಮತ್ತು ಅದರ ಅವಲಂಬಿತ H-4 ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಗಳ ಸ್ಕ್ರೀನಿಂಗ್ ಮತ್ತು ಪರಿಶೀಲನೆಯನ್ನು ಪ್ರಾರಂಭವಾಗಲಿದೆ.

Click the Play button to hear this message in audio format

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಪರಿಚಯಿಸಿರುವ H-1B ವೀಸಾಗಳ ಹೊಸ ನಿಯಮಗಳು ಇಂದಿನಿಂದಲೇ ಜಾರಿಗೊಳ್ಳಲಿದೆ. ಇಂದಿನಿಂದಲೇ H-1B ಮತ್ತು ಅದರ ಅವಲಂಬಿತ H-4 ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಗಳ ಸ್ಕ್ರೀನಿಂಗ್ ಮತ್ತು ಪರಿಶೀಲನೆಯನ್ನು ಪ್ರಾರಂಭವಾಗಲಿದೆ.

ಹೊಸ ನಿಯಮದ ಪ್ರಕಾರ ಇನ್ನು ಮುಂದೆ H-1B ವೀಸಾಕ್ಕೆ ಅರ್ಜಿ ಹಾಕುವವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕಡ್ಡಾಯವಾಗಿ ಸಾರ್ವಜನಿಕ ಅಕೌಂಟ್‌(ಪಬ್ಲಿಕ್‌ ಅಕೌಂಟ್‌) ಬದಲಿಸಬೇಕು ಮಾಡಬೇಕು. ಇದು ವೀಸಾ ಅಧಿಕಾರಿಗಳು ಅರ್ಜಿದಾರರ ಆನ್‌ಲೈನ್ ಚಟುವಟಿಕೆಗಳನ್ನು ಪರಿಶೀಲಿಸಲು ದಾರಿ ಮಾಡಿಕೊಡುತ್ತದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್‌ ನ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿಯು H-1B ವೀಸಾ ಅರ್ಜಿದಾರರಿಗೆ ಸಂಕಷ್ಟ ಎದುರಿಸುವಂತೆ ಮಾಡಿದೆ.

ಲೈಕ್‌, ಕಮೆಂಟ್‌ಗಳ ಪರಿಶೀಲನೆಯೂ ನಡೆಯುತ್ತದೆ

ಹೊಸ ಹೊಸ ನಿಯಮದ ಅಡಿಯಲ್ಲಿ, H-1B ಅರ್ಜಿದಾರರ ಫೇಸ್ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು, ಲೈಕ್‌ಗಳು, ಕಮೆಂಟ್‌ಗಳು ಎಲ್ಲವೂ ಪರಿಶೀಲನೆಯ ಅಡಿಗೆ ಬರುತ್ತವೆ. ಯಾವುದೇ ಆನ್‌ಲೈನ್ ಚಟುವಟಿಕೆ ಅಮೆರಿಕ ಹಿತಾಸಕ್ತಿಗೆ ವಿರುದ್ಧವೆಂದು ಕಂಡುಬಂದರೆ, ವೀಸಾವನ್ನು ತಕ್ಷಣವೇ ನಿರಾಕರಿಸಲಾಗುತ್ತದೆ.

ಇದೇ ನಿಯಮವನ್ನು ಆಗಸ್ಟ್‌ನಿಂದ ವಿದ್ಯಾರ್ಥಿ (F-1), ಸಂಶೋಧನಾ (J-1), ಪ್ರವಾಸಿ (B-1, B-2) ವೀಸಾಗಳಿಗೂ ಅನ್ವಯಿಸಲಾಗುತ್ತಿದೆ. ವಿದೇಶಿಗರ ಮೇಲೆ ಹಿಡಿತ ಸಾಧಿಸಲು ಟ್ರಂಪ್ ಆಡಳಿತವು ಈ ‘ಮಾಸ್ಟರ್ ಪ್ಲ್ಯಾನ್’ ಅನ್ನು ಜಾರಿಗೆ ತಂದಿದೆ.

ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಪರಿಶೀಲಿಸಲು ಈ ಹೊಸ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಹಲವಾರು H-1B ವೀಸಾ ಹೊಂದಿರುವವರು ಭಾರತದಲ್ಲಿ ತಮ್ಮ ಸಂದರ್ಶನಗಳನ್ನು ಮರು ನಿಗದಿಪಡಿಸಿದ್ದಾರೆ. ಅಮೆರಿಕದ ವೀಸಾ ಒಂದು ಸವಲತ್ತು, ಹಕ್ಕಲ್ಲ ಎಂದು ಒತ್ತಿ ಹೇಳಿರುವ ವಿದೇಶಾಂಗ ಇಲಾಖೆ, ದೇಶದ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವವರನ್ನು ಗುರುತಿಸಲು ವೀಸಾ ಸ್ಕ್ರೀನಿಂಗ್ ಮತ್ತು ಪರಿಶೀಲನೆಯಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಬಳಸುತ್ತದೆ ಎಂದು ಹೇಳಿದೆ.

ಬ್ಲೂಮ್‌ಬರ್ಗ್‌ನಲ್ಲಿನ ವರದಿಯ ಪ್ರಕಾರ, ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಸಂದರ್ಶನಗಳನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಲಾಗುತ್ತಿದೆ. ಆದಾಗ್ಯೂ, ಅಂತಹ ಸಂದರ್ಶನಗಳ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಇನ್ನು ಮಂಗಳವಾರ ರಾತ್ರಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಪೋಸ್ಟ್‌ವೊಂದನ್ನು ಮಾಡಿದ್ದು, ಅನೇಕ ನೇಮಕಾತಿಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ನಿಮ್ಮ ವೀಸಾ ಅಪಾಯಿಂಟ್ಮೆಂಟ್ ಅನ್ನು ಮರು ನಿಗದಿಪಡಿಸಲಾಗಿದೆ ಎಂದು ಸೂಚಿಸುವ ಇಮೇಲ್ ನಿಮಗೆ ಬಂದಿದ್ದರೆ, ನಿಮ್ಮ ಹೊಸ ಅಪಾಯಿಂಟ್ಮೆಂಟ್ ದಿನಾಂಕದಂದು ನಿಮಗೆ ಸಹಾಯ ಮಾಡಲು ಮಿಷನ್ ಇಂಡಿಯಾ ಎದುರು ನೋಡುತ್ತಿದೆ. ಯಾವುದೇ ವೀಸಾ ಅರ್ಜಿದಾರರು ಸಂದರ್ಶನ ದಿನಾಂಕವನ್ನು ಮರು ನಿಗದಿಪಡಿಸಿದ ನಂತರವೂ ರಾಯಭಾರ ಕಚೇರಿಗೆ ಆಗಮಿಸಿದರೆ, ಅವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ರಾಯಭಾರ ಕಚೇರಿ ಎಚ್ಚರಿಸಿದೆ.

ಭಾರತೀಯರ ಮೇಲೆ ಯಾವ ರೀತಿಯಲ್ಲಿ ಪರಿಣಾಮ?

ಇನ್ನು ಟ್ರಂಪ್‌ ಸರ್ಕಾರದ ಈ ಹೊಸ ನೀತಿಯಿಂದ ಭಾರತೀಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವುದಾದರೆ…ಹೊಸ ನಿಯಮದಿಂದಾಗಿ ಅಮೆರಿಕ ರಾಯಭಾರ ಕಚೇರಿಗಳು ಹಲವು ಸಂದರ್ಶನಗಳನ್ನು ಮುಂದೂಡಿವೆ. ಬಹಳಷ್ಟು ಭಾರತೀಯರಾದ ಐಟಿ, ತಾಂತ್ರಿಕ ಕ್ಷೇತ್ರದ ನುರಿತ ಉದ್ಯೋಗಿಗಳು H-1B ಮೂಲಕ ಅಮೆರಿಕ ತೆರಳುತ್ತಾರೆ. ಈಗಿನ ಹೊಸ ಪರಿಶೀಲನಾ ಕ್ರಮಗಳಿಂದ ಈ ಪ್ರಕ್ರಿಯೆ ಬಹಳ ತಡವಾಗುವ ಸಾಧ್ಯತೆ ಹೆಚ್ಚಾಗಿದೆ.

Next Story