ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಭದ್ರತಾ ಪಡೆಗಳು ಶನಿವಾರ ಪ್ರತ್ಯುತ್ತರ ನೀಡಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಈ ಮಧ್ಯೆ ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮುರಾನ್ ಪ್ರದೇಶದಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ಧ್ವಂಸ ಮಾಡಿವೆ. ಶಂಕಿತ ಉಗ್ರ ಅಹ್ಸಾನ್ ಉಲ್ ಹಕ್ ಶೇಖ್ಗೆ ಸೇರಿದ ಮನೆಯನ್ನು ಕೆಡವಲಾಗಿದೆ. 2018 ರಲ್ಲಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಈತ ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ನುಸುಳಿದ್ದ ಎಂದು ಭದ್ರತಾ ಪಡೆಗಳು ತಿಳಿಸಿವೆ.ಮಂಗಳವಾರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಉದ್ವಿಗ್ನತೆ ಮಧ್ಯೆ ಸತತ ಎರಡನೇ ರಾತ್ರಿಯೂ ಗುಂಡಿನ ಚಕಮಕಿ ನಡೆದಿದೆ.ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಭಾರತೀಯ ಸ್ಥಾನಗಳ ಮೇಲೆ ಗುಂಡು ಹಾರಿಸಿದವು ಮತ್ತು ಭಾರತವು ಸೂಕ್ತವಾಗಿ ಪ್ರತಿಕ್ರಿಯಿಸಿತು. "ಏಪ್ರಿಲ್ 25 ಮತ್ತು 26 ರ ರಾತ್ರಿ, ಕಾಶ್ಮೀರದ ಎಲ್ಒಸಿಯಾದ್ಯಂತ ವಿವಿಧ ಪಾಕಿಸ್ತಾನಿ ಸೇನಾ ಠಾಣೆಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ," ಎಂದು ಮೂಲಗಳು ತಿಳಿಸಿವೆ. "ಭಾರತೀಯ ಪಡೆಗಳು ಸೂಕ್ತವಾಗಿ ಪ್ರತಿಕ್ರಿಯಿಸಿದವು" ಎಂದೂ ಹೇಳಲಾಗಿದೆ. ಆದರೆ, ಗುಂಡಿನ ದಾಳಿಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಬೇಟೆಯಾಡುವುದಾಗಿ ಭಾರತ ಹೇಳಿಕೆ ನೀಡಿದ ನಂತರ ಪಾಕಿಸ್ತಾನ ಸೇನೆಯನ್ನು ಹೈ ಅಲರ್ಟ್ನಲ್ಲಿ ಇರಿಸಲಾಗಿದೆ.ಭಾರತದ ಉಪಕ್ರಮಗಳುಪಹಲ್ಗಾಮ್ ದಾಳಿಗೆ ಕಾರಣವಾದ ಗಡಿಯಾಚೆಗಿನ ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಬುಧವಾರ 65 ವರ್ಷಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿ ಭೂ-ಗಡಿ ದಾಟುವಿಕೆಯನ್ನು ಮುಚ್ಚುವುದು ಸೇರಿದಂತೆ ದಂಡನಾತ್ಮಕ ಕ್ರಮಗಳನ್ನು ಘೋಷಿಸಿದೆ. ಅಟ್ಟಾರಿ ಭೂ ಗಡಿಯ ಮೂಲಕ ದೇಶವನ್ನು ಪ್ರವೇಶಿಸಿದ ಎಲ್ಲಾ ಪಾಕಿಸ್ತಾನಿಗಳನ್ನು ಮೇ 1 ರೊಳಗೆ ಹೊರಹೋಗುವಂತೆ ನವದೆಹಲಿ ಕೇಳಿದೆ.ಪಾಕಿಸ್ತಾನ ಪ್ರತಿಕ್ರಿಯೆತನ್ನ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಗುರುವಾರ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಘೋಷಿಸಿತು ಮತ್ತು ನವದೆಹಲಿಯೊಂದಿಗೆ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವುದನ್ನು ಪಾಕಿಸ್ತಾನ ತಿರಸ್ಕರಿಸಿದ್ದು, ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ನೀರಿನ ಹರಿವನ್ನು ನಿಲ್ಲಿಸುವ ಯಾವುದೇ ಕ್ರಮಗಳನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.