LIVE: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪದಗ್ರಹಣ; ಭಾರತಕ್ಕೆ ಎಷ್ಟು ಲಾಭ?

ಅಮೆರಿಕದಲ್ಲಿ ಇಂದಿನಿಂದ ಟ್ರಂಪ್ ಯುಗಾರಂಭವಾಗಲಿದೆ. ಗಡಗಡ ನಡುಗುವ ಚಳಿಯ ನಡುವೆಯೂ ಟ್ರಂಪ್ ಬೆಂಬಲಿಗರು ಅಮೆರಿಕದೆಲ್ಲೆಡೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ.;

Update: 2025-01-20 10:53 GMT

ಅಮೆರಿಕದಲ್ಲಿ ಇಂದಿನಿಂದ ಟ್ರಂಪ್ ಯುಗಾರಂಭವಾಗಲಿದೆ. ಗಡಗಡ ನಡುಗುವ ಚಳಿಯ ನಡುವೆಯೂ ಟ್ರಂಪ್ ಬೆಂಬಲಿಗರು ಅಮೆರಿಕದೆಲ್ಲೆಡೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಟ್ರಪ್‌ ಅವರು ಎರಡನೇ ಬಾರಿ ಅಧ್ಯಕ್ಷರಾಗುವುದು ಅವರೆಲ್ಲರ ಸಂಭ್ರಮಕ್ಕೆ ಕಾರಣ. 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ರಾತ್ರಿ 10.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದು, ಪದಗ್ರಹಣದ ಬಳಿಕ ಅವರು ತೆಗೆದುಕೊಳ್ಳಲಿರುವ ನಿರ್ಣಯಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ.

ಆಕ್ರಮಣಕಾರಿ ಸ್ವಭಾವದ ಡೊನಾಲ್ಡ್‌ ಟ್ರಂಪ್ ಅಧ್ಯಕ್ಷರಾದ ಮೇಲೆ ತೆಗೆದುಕೊಳ್ಳುವ ನಿರ್ಣಯಗಳು ಹಲವು ದೇಶಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವೇಳೆಯಲ್ಲೇ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೂ ಪ್ರಭಾವ ಉಂಟಾಗಲಿದೆ. ಹೀಗಾಗಿ ಭಾರತದ ಮುಂದೆ ಅವಕಾಶಗಳು ಮತ್ತು ಸವಾಲುಗಳೂ ಇದೆ. ಇದರ ನಿರ್ವಹಣೆಯ ಆಧಾರದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ವೃದ್ಧಿಯಾಗಲಿದೆ ಎಂಬುದು ವಿಶ್ಲೇಷಕರ ಅಂಬೋಣ.

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಉತ್ತಮ ಸಂಬಂಧ ಬೆಳೆಸುವ ಗುರಿ ಹೊಂದಿರುವ ಟ್ರಂಪ್‌ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಚೀನಾ ಭೇಟಿಗೆ ಉತ್ಸುಕತೆ ತೋರಿದ್ದಾರೆ. ಅಲ್ಲದೆ, ಭಾರತ ಆಯೋಜಿಸಿರುವ ಕ್ವಾಡ್ ಶೃಂಗದಲ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿದೆ, ಟ್ರಂಪ್ ಅವರ ಈಎಲ್ಲ ನಡೆ ಕುತೂಹಲ ಮೂಡಿಸಿದೆ. ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಭಾರತ ಮತ್ತು ಅಮೆರಿಕ ನಡುವೆ ಉತ್ತಮ ಬಾಂಧವ್ಯವಿತ್ತು. ಟ್ರಂಪ್ ಮತ್ತು ಮೋದಿ ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದೇ ವಿಧದಲ್ಲಿ ಮುಂದಿನ 4 ವರ್ಷದಲ್ಲಿ ಭಾರತ ಮತ್ತು ಮೋದಿ ಜತೆ ಟ್ರಂಪ್ ಸಂಬಂಧ ಮುಂದುವರಿಯುವ ನಿರೀಕ್ಷೆ ಇದೆ.

Tags:    

Similar News