JDS ಬೆಳ್ಳಿ ಹಬ್ಬ: 25 ವರ್ಷದ ಹಾದಿ ಹೇಗಿತ್ತು? ಜೆಡಿಎಸ್ ಕಚೇರಿಯಲ್ಲಿ ಇಂದು ಏನೇನಾಯ್ತು? | JDS Silver Jubilee
ಕರ್ನಾಟಕದ ಮಣ್ಣಿನ ಮಕ್ಕಳ ಪಕ್ಷ ಎಂದೇ ಖ್ಯಾತಿ ಪಡೆದಿರುವ ಜೆಡಿಎಸ್ (JDS) ಪಕ್ಷಕ್ಕೆ ಇಂದು 25ನೇ ವರ್ಷದ ಸಂಭ್ರಮ! ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿರುವ ಜೆಡಿಎಸ್, ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ. ಬೆಂಗಳೂರಿನ ಜೆಪಿ ಭವನದಲ್ಲಿ (JP Bhavan) ನಡೆದ ಈ ವಿಶೇಷ ಕಾರ್ಯಕ್ರಮದ ನೇರ ದೃಶ್ಯಾವಳಿಗಳು ಇಲ್ಲಿವೆ. ಪಕ್ಷದ ಕಚೇರಿಯು ಹೇಗೆ ಶೃಂಗಾರಗೊಂಡಿದೆ? ರಾಜ್ಯದ ಮೂಲೆ ಮೂಲೆಗಳಿಂದ ಬಂದ ಕಾರ್ಯಕರ್ತರು ಹೇಳುತ್ತಿರುವುದೇನು? ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಮತ್ತು ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಬಗ್ಗೆ ಅಭಿಮಾನಿಗಳ ಅಭಿಪ್ರಾಯವೇನು ಎಂಬುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತೋರಿಸಿದ್ದೇವೆ.
By : The Federal
Update: 2025-11-22 09:30 GMT