Darshan Arrested | ಕೊಲೆ ಆರೋಪ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ! | Darshan Arrest In Murder Case
ಪ್ರಮುಖ ಬೆಳವಣಿಗೆಯೊಂದರಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಲಾಗಿದೆ. ಪವಿತ್ರಾ ಗೌಡ ಎನ್ನುವವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ನಡೆದಿದೆ ಎನ್ನಲಾದ ಕೊಲೆಯೊಂದರಲ್ಲಿ ದರ್ಶನ್ ಅವರ ಹೆಸರು ತಳಕು ಹಾಕಿಕೊಂಡಿದೆ. ಈಚೆಗೆ ರೇಣುಕಾಸ್ವಾಮಿ ಎಂಬುವವರು ಕೊಲೆ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ರೇಣುಕಾಸ್ವಾಮಿ ಕೊಲೆಗೆ ನಟ ದರ್ಶನ್ ಅವರು ಸೂಚಿಸಿದ್ದರು ಎನ್ನುವ ದೂರು ಕೇಳಿಬಂದಿದೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.;
By : Keerthik
Update: 2024-06-11 10:38 GMT