ನಿಯಮ ಉಲ್ಲಂಘಿಸಿ ಹೊರಟ್ಟಿ ನೇಮಕ; ಲಕ್ಷಾಂತರ ರೂ ಅವ್ಯವಹಾರ, ಸಿದ್ದರಾಮಯ್ಯ ಸ್ನೇಹ ದುರುಪಯೋಗದ ಆರೋಪ
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಗಂಭೀರ ಆರೋಪ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸದ್ದುಮಾಡಿದ್ದಾರೆ. ಹಣಕಾಸು ಇಲಾಖೆ ಅನುಮತಿ ಇಲ್ಲದಿದ್ದರೂ, ತಮ್ಮ ಇಚ್ಛೆಯವರನ್ನು ನೇರ ನೇಮಕಾತಿ ಮಾಡಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ. ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟ ವಲಯದವರು ಎಂಬ ಸ್ನೇಹ ಸಂಬಂಧವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಾಗರಾಜ್ ಯಾದವ್ ಸಂದರ್ಶನದಲ್ಲಿ ಹೇಳಿದ್ದಾರೆ.
By : The Federal
Update: 2025-12-08 15:25 GMT