ಎಲ್‌ಜಿಬಿಟಿ ಸಮುದಾಯದ ಬೇಗುದಿ ಅನಾವರಣಗೊಳಿಸುವ ʻಕಾತಲ್‌ʼ

ಮಮ್ಮುಟ್ಟಿ, ಜ್ಯೋತಿಕಾ ತಾರಾಗಣದ ಜಿಯೋ ಬೇಬಿ ನಿರ್ಮಿಸಿದ ಚಲನಚಿತ್ರ ಕೇರಳದಲ್ಲಿ ಸಲಿಂಗಕಾಮದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ, ಸಲಿಂಗಕಾಮಿ ಮ್ಯಾಥ್ಯೂ ಅವರಿಂದ ಪತ್ನಿ ವಿಚ್ಛೇದನವನ್ನು ಕೇಳುವುದರ ಸುತ್ತ ಕತೆ ಸುತ್ತುತ್ತದೆ.

Update: 2024-02-05 06:30 GMT


ಎಲ್‌ಜಿಬಿಟಿ ಸಮುದಾಯದ ಬೇಗುದಿ ಅನಾವರಣಗೊಳಿಸುವ ʻಕಾತಲ್‌ʼ

-ರಾಜೀವ್‌ ರಾಮಚಂದ್ರನ್

… 

ಅರುಣಾ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿ ಮತ್ತು ಅವರ ಪತಿ ವಿನೋದ್ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 40ರ ಆಸುಪಾಸಿನಲ್ಲಿದ್ದು, ವಿನೋದ್ ಒಬ್ಬ‌ ಟ್ರಾನ್ಸ್‌ ಜೆಂಡರ್‌ ಎಂದು ಅರುಣಾಗೆ ತಿಳಿದಾಗ, ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಲೈಂಗಿಕ ಸಮಸ್ಯೆಯನ್ನು ವೈಯಕ್ತಿಕ ದೋಷ ಎಂದುಕೊಂಡಿದ್ದ ಅವರಿಬ್ಬರು, ಲೈಂಗಿಕ ಸಮಾಲೋಚನೆ ಪಡೆದುಕೊಂಡರು. ಅದರಿಂದ ಹೆಚ್ಚೇನೂ ಪ್ರಯೋಜನ ಆಗಲಿಲ್ಲ.

ಆದರೆ, ಅಪಘಾತಕ್ಕೆ ಸಿಲುಕಿದ ವಿನೋದ್, ಅನಿರೀಕ್ಷಿತವಾಗಿ ವಿಷಯವನ್ನು ಪತ್ನಿಗೆ ತಿಳಿಸಿದರು. ಅರುಣಾ ಮದುವೆಯನ್ನು ಮುರಿಯಲಿಲ್ಲ. ದಂಪತಿಯ ಮಗು ಈಗ ಕರ್ನಾಟಕದಲ್ಲಿ ವೈದ್ಯಕೀಯ ಪದವಿಗೆ ವ್ಯಾಸಂಗ ಮಾಡುತ್ತಿದ್ದು, ಆತನಿಗೆ ಈಗ 19 ವರ್ಷ.

ಇತ್ತೀಚೆಗೆ ಬಿಡುಗಡೆಯಾದ ʼಕಾತಲ್‌ʼ ಚಿತ್ರದಲ್ಲಿನ ಜ್ಯೋತಿಕಾ ಪಾತ್ರ ನನ್ನನ್ನು ಆಳವಾಗಿ ಕಲಕಿತು. ಆಕೆಯ ಭಾವನೆಗಳು ಮತ್ತು ಅನುಭವಗಳು ನನ್ನ ಸ್ವಂತ ಆಲೋಚನೆಗಳನ್ನು ಪ್ರತಿಬಿಂಬಿಸುತ್ತವೆ. ಆದರೆ, ನನ್ನ ಪತಿ ಮತ್ತು ನಾನು ಪ್ರತ್ಯೇಕಗೊಳ್ಳಲಿಲ್ಲಎಂದು ಅರುಣಾ ʻದ ಫೆಡರಲ್‌ʼ ಗೆ ತಿಳಿಸಿದರು.

ಇತ್ತೀಚೆಗೆ ತೆರೆಕಂಡ ʻಕಾತಲ್‌ʼ, ಸಲಿಂಗಕಾಮದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮುಖ್ಯ ಕಥಾಹಂದರ ಸಹಕಾರಿ ಬ್ಯಾಂಕ್ ನಿವೃತ್ತ ಉದ್ಯೋಗಿ ಮ್ಯಾಥ್ಯೂ ಅವರ ವಿಚ್ಛೇದನದ ಸುತ್ತ ಸುತ್ತುತ್ತದೆ. ಎಲ್‌ಜಿಬಿಟಿ ಸಮುದಾಯದಲ್ಲಿರುವ ಲೆಸ್ಬಿಯನ್ನರು, ಸಲಿಂಗಕಾಮಿಗಳು, ದ್ವಿಲಿಂಗಿಗಳು, ಟ್ರಾನ್ಸ್ಜೆಂಡರ್ ಮತ್ತು ಕ್ವೀರ್ ಜನರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ.

ಕೇರಳ ತೃತೀಯ ಲಿಂಗ ನೀತಿಯನ್ನು ಜಾರಿಗೆ ತಂದ ದೇಶದ ಏಕೈಕ ರಾಜ್ಯವಾಗಿದ್ದರೂ, ತೃತೀಯ ಲಿಂಗಿಗಳ ಕುರಿತ ತಾರತಮ್ಯ ಇನ್ನೂ ಇದೆ. ಟ್ರಾನ್ಸ್ಜೆಂಡರ್‌ಗಳು ತಮ್ಮ ಲಿಂಗ ಮತ್ತು ಅಭಿವ್ಯಕ್ತಿಯಿಂದಾಗಿ ಮುಖ್ಯವಾಹಿನಿಯಿಂದ ನಕಾರಾತ್ಮಕ ಸ್ಟೀರಿಯೊಟೈಪ್‌ಗಳನ್ನು ಮತ್ತು ತಾರತಮ್ಯವನ್ನು ಎದುರಿಸುತ್ತಾರೆ. ಕೇರಳ ತೃತೀಯಲಿಂಗಿ ಸಮುದಾಯವನ್ನು ಒಗ್ಗೂಡಿಸಲು ಮತ್ತು ಮೇಲಕ್ಕೆತ್ತಲು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದರೂ, ಗಮನಾರ್ಹ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಾಗಿಲ್ಲ.

ʻ2015ರ ಸರ್ಕಾರದ ನೀತಿಯು ಯಾವುದೇ ರಾಜಕೀಯ ಕಾರ್ಯಸೂಚಿಯ ಭಾಗವಾಗಿರಲಿಲ್ಲ. ಎನ್‌ಎಎಲ್‌ಎಸ್‌ಎ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನಿರ್ಧಾರವು ಜೈವಿಕ ಮತ್ತು ಮಾನಸಿಕ ಲೈಂಗಿಕತೆ ನಡುವಿನ ಸ್ಪಷ್ಟ ವಿಭಾಗವನ್ನು ಮಾಡಿತುʼ ಎಂದು ಕ್ವೀರ್ ಹಕ್ಕುಗಳ ಕಾರ್ಯಕರ್ತ ಮತ್ತು ಸಂಶೋಧಕ ಪ್ರಿಜಿತ್‌ ಪಿ.ಕೆ. ಹೇಳುತ್ತಾರೆ.

ʻಕೇರಳ ಸರ್ಕಾರ ಕೈಗೊಂಡ ಕ್ರಮಗಳು ಶ್ಲಾಘನೀಯ. ನ್ಯಾಯಾಲಯ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ಬಳಿಕವೂ ಸರ್ಕಾರಗಳು ಸೂಕ್ತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಲ್ಲ. ಇದು ನಮ್ಮ ಸಮಾಜದಲ್ಲಿರುವ ಲೈಂಗಿಕ ಫೋಬಿಯಾಗಳನ್ನು ತೋರಿಸುತ್ತದೆ. ಲಿಂಗ ಅಲ್ಪಸಂಖ್ಯಾತರನ್ನು ಅವರು ಗುರುತಿಸುತ್ತಾರೆಯೇ ಹೊರತು ಲೈಂಗಿಕ ಅಲ್ಪಸಂಖ್ಯಾತರನ್ನಲ್ಲʼ ಎಂದು ಪ್ರಿಜಿತ್‌ ಹೇಳುತ್ತಾರೆ.

ಎಲ್‌ಜಿಬಿಟಿ ಸಮುದಾಯದವರಿಗೆ ಸೂಕ್ತ ಪರಿಭಾಷೆಯನ್ನು ಬಳಸಬೇಕು. ʻಸಲಿಂಗಕಾಮಿʼ ಅಥವಾ ʻವಿಭಿನ್ನಲಿಂಗಿʼ ಬದಲು ʻಆಂಡ್ರೋಸೆಕ್ಷುಯಲ್‌ʼ ಅಥವಾ ʼಗೈನೋಸೆಕ್ಷುಯಲ್‌ʼ ಎಂದು ಬಳಸುವುದು ಸೂಕ್ತ. ʻಪರ್ಯಾಯ ಲೈಂಗಿಕತೆʼ ಎಂಬ ಪದ ಬಳಸಬಾರದು ಎಂದು ನಿರ್ದಿಷ್ಟವಾಗಿ ಸಲಹೆ ನೀಡುತ್ತಾರೆ.

ತನ್ನನ್ನು ಗೇ ಎಂದು ಘೋಷಿಸಿಕೊಂಡ ಕಿಶೋರ್‌ ಕುಮಾರ್‌, ʻವೆನ್‌ ಟು ಮೆನ್‌ ಕಿಸ್‌ʼ ನಲ್ಲಿ ತಮ್ಮ ಪ್ರಯಾಣವನ್ನು ದಾಖಲಿಸಿದ್ದಾರೆ. ಲೈಂಗಿಕ ಅಭಿವ್ಯಕ್ತಿಗಳು ಸ್ಪಷ್ಟವಾಗಿ ಕಂಡುಬರುವುದರಿಂದ, ಟ್ರಾನ್ಸ್‌ಜೆಂಡರ್‌ಗಳು ತಮ್ಮ ಗುರುತನ್ನು ಮರೆಮಾಚಲು ಆಗುವುದಿಲ್ಲ ಎಂದು ಕಿಶೋರ್ ಹೇಳುತ್ತಾರೆ.

ʻಟ್ರಾನ್ಸ್‌ಜೆಂಡರ್‌ ಎಂಬ ಲೇಬಲ್ ಗೇ-ಲೆಸ್ಬಿಯನ್‌ ಅಸ್ಮಿತೆಯು ನೇರವಾಗಿ ಲಿಂಗ ಮತ್ತು ಲೈಂಗಿಕತೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಆದ್ದರಿಂದ, ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ಸಾಮಾಜಿಕ ಕಳಂಕವು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ,ʼ ಎಂದು ಕಿಶೋರ್ ಹೇಳುತ್ತಾರೆ. ಅವರ ಪುಸ್ತಕ ಅವರ ಪ್ರಯಾಣವನ್ನು, ಸಾಮಾಜಿಕ ಮತ್ತು ಕೌಟುಂಬಿಕ ಅನುಭವಗಳನ್ನು ವಿವರಿಸುತ್ತದೆ. ಓದುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ʻನಾನು ಅಮೆರಿಕದಲ್ಲಿರುವುದರಿಂದ, ನನ್ನನ್ನು ನಿಭಾಯಿಸಿಕೊಳ್ಳಬಲ್ಲೆ. ಐಟಿ ಕೆಲಸವನ್ನು ಬಿಟ್ಟು ಭಾರತಕ್ಕೆ ವಾಪಸಾದೆ. ಅದು ತುಂಬಾ ಒತ್ತಡದ ಅವಧಿಯಾಗಿತ್ತು. 2018 ರ ನಂತರ ಲೈಂಗಿಕ ಕಾರ್ಯಕರ್ತರು ಮೇಲಿನ ಒತ್ತಡ ಗಮನಾರ್ಹವಾಗಿ ಕಡಿಮೆಯಾಗಿದೆ. ನನ್ನ ಆತ್ಮಚರಿತ್ರೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆʼ ಎಂದು ಹೇಳುತ್ತಾರೆ.

ʻಸಾಮಾಜಿಕ ನಿರಾಕರಣೆ ಮತ್ತು ಭಯದಿಂದಾಗಿ ಅನೇಕರು ತಮ್ಮ ಲೈಂಗಿಕತೆಯನ್ನು ಬಹಿರಂಗಗೊಳಿಸಲು ಹಿಂಜರಿಯುತ್ತಾರೆ. ಇದು ಅದೃಶ್ಯತೆಗೆ ಕಾರಣವಾಗುತ್ತದೆ. ಎಲ್‌ಜಿಬಿಟಿ ಸಮುದಾಯವನ್ನು ಟ್ರಾನ್ಸ್ಜೆಂಡರ್ ಸಮುದಾಯದೊಂದಿಗೆ ಸಮೀಕರಿಸಲಾಗುತ್ತದೆ, ಇದು ತಪ್ಪು ಕಲ್ಪನೆʼ ಎಂದು ಈ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದ ಡಾ. ಎಂ.ಎಸ್. ಅನೀಶ್‌ ಹೇಳುತ್ತಾರೆ.

ʻಆದರೆ, ನಿಧಾನವಾಗಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳನ್ನು ಸಮಾಜ ಸ್ವೀಕರಿಸುತ್ತಿದೆ. ಸರ್ಕಾರಿ ಮತ್ತು ಖಾಸಗಿ ಬೆಂಬಲ ಗುಂಪುಗಳು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಕಾರ್ಯಕ್ರಮಗಳನ್ನು ಆಯೋಜಿಸಿವೆʼ ಎಂದು ಅನೀಶ್ ಹೇಳುತ್ತಾರೆ.

'ಲೈಂಗಿಕ ಅಲ್ಪಸಂಖ್ಯಾತರು- ಲಿಂಗ ಅಲ್ಪಸಂಖ್ಯಾತರ' ವಿಷಯ ಕೇರಳದಲ್ಲಿ ಚರ್ಚೆಯಾಗುತ್ತಿದೆ. 2015 ರಲ್ಲಿಸಾಮಾಜಿಕ ನ್ಯಾಯ ಇಲಾಖೆ ಸಚಿವ ಡಾ. ಎಂ.ಕೆ. ಮುನೀರ್‌ ಬಹಿರಂಗವಾಗಿ ಹಾಲಿ ಮುಖ್ಯಮಂತ್ರಿ ವಿಜಯನ್ ಅವರನ್ನು ಟೀಕಿಸಿದಾಗ ಇದು ಎಲ್ಲರ ಗಮನ ಸೆಳೆಯಿತು.

ವೃತ್ತಿಯಲ್ಲಿ ವೈದ್ಯರಾದ ಡಾ.ಮುನೀರ್‌, ಇಂಥ ಬೆಂಬಲದಿಂದ ಲೈಂಗಿಕ ಕಾಯಿಲೆಗಳು ಹರಡುತ್ತವೆ ಎಂದು ಲಿಂಗ ಅಲ್ಪಸಂಖ್ಯಾತರನ್ನು ಬೆಂಬಲಿಸುವ ಶಿಕ್ಷಣ ಸಚಿವೆ ಡಾ.ಕೆ.ಆರ್.‌ ಬಿಂದು ಅವರನ್ನು ಟೀಕಿಸಿದ್ದರು.

ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ 2018 ರಲ್ಲಿ ಸ್ಕಿಜೋಫ್ರೇನಿಯಾವನ್ನು ಮಾನಸಿಕ ಕಾಯಿಲೆಗಳ ಪಟ್ಟಿಯಿಂದ ತೆಗೆದುಹಾಕಿದೆ. ಆದರೆ, ಮುನೀರ್ ಅವರಂತಹ ಹಿರಿಯ ವೈದ್ಯರು ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಂದು ಕಿಶೋರ್ ಕುಮಾರ್ ಹೇಳುತ್ತಾರೆ.

ಡಾ.ಎಂ.ಎಸ್. ಅನೀಶ್ ತಮ್ಮ ಪಿಎಚ್‌ಡಿ ಪ್ರಬಂಧದಲ್ಲಿ ಲಿಂಗ ಅಲ್ಪಸಂಖ್ಯಾತ ಪುರುಷರು ವೈದ್ಯಕೀಯ ಸೇವೆಗಳನ್ನು ಪಡೆದುಕೊಳ್ಳಲು ಕಷ್ಟ ಪಡುತ್ತಾರೆ ಎಂಬುದನ್ನು ಉತ್ತರ ಕೇರಳದ 27 ವರ್ಷದ ವ್ಯಕ್ತಿಯ ಉದಾಹರಣೆ ನೀಡಿ ವಿವರಿಸಿದ್ದಾರೆ. ʻಕಳೆದ ವರ್ಷ ದೇಹದ ಖಾಸಗಿ ಪ್ರದೇಶದಲ್ಲಿನ ಸೋಂಕಿಗೆ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞರನ್ನು ಸಂಪರ್ಕಿಸಿದೆ. ನರ್ಸ್ ನನ್ನ ಖಾಸಗಿ ಭಾಗಕ್ಕೆ ಲೋಷನ್ ಹಚ್ಚುತ್ತಿರುವಾಗ, ಇನ್ನಷ್ಟು ಲೋಷನ್‌ ಹಾಕು. ಆತನಿಗೆ ಅದರ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದರುʼ ಎಂದು ವ್ಯಕ್ತಿ ಹೇಳಿದರು.

ಟ್ರಾನ್ಸ್‌ ಜೆಂಡರ್‌ ಅಲ್ಲದವರಲ್ಲಿ ಎಚ್‌ಐವಿ/ಏಡ್ಸ್‌ ಹೆಚ್ಚು ಇದೆ ಎಂದು ಅಂಕಿಅಂಶಗಳು ಹೇಳುತ್ತಿದ್ದರೂ, ಟ್ರಾನ್ಸ್‌ ಜೆಂಡರ್‌ ಗಳ ಬಗೆಗಿನ ತಪ್ಪು ಅಭಿಪ್ರಾಯ ಮುಂದುವರಿದಿದೆ. ಡಾ. ಅನೀಶ್ ಪ್ರಕಾರ, ವ್ಯಕ್ತಿಯ ಜೀವನವನ್ನು ಅರ್ಥೈಸುವಲ್ಲಿ ಕುಟುಂಬ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 2020ರ ಪಿಎಚ್‌ಡಿ ಪ್ರಬಂಧದಲ್ಲಿ ಟ್ರಾನ್ಸ್‌ ಜೆಂಡರ್‌ಗಳು ಕುಟುಂಬದಿಂದ ದೈಹಿಕ ಮತ್ತು ಭಾವನಾತ್ಮಕ ದಮನವನ್ನು ಅನುಭವಿಸುತ್ತಾರೆ ಎಂಬುದನ್ನು ಡಾ.ಅನೀಶ್ ಗಮನಿಸಿದರು.

ದೈಹಿಕ ಕಿರುಕುಳ ಮತ್ತು ಕ್ರೂರ ವಿಧಾನಗಳ ಮೂಲಕ ನಿಯಂತ್ರಿಸಲು ಪ್ರಯತ್ನಿಸಬಹುದು. ಮದುವೆ ವ್ಯಕ್ತಿಯೊಬ್ಬನ ಜೀವನದಲ್ಲಿ ಮಹತ್ವದ ಪ್ರಕ್ರಿಯೆಯಾಗಿರುವುದರಿಂದ, ಟ್ರಾನ್ಸ್‌ ಜೆಂಡರ್‌ಗಳು ಸಲಿಂಗ ವಿವಾಹ ಕ್ಕೆ ಮುಂದಾಗುವುದಿಲ್ಲ. ಅವರು ಪ್ರೌಢಾವಸ್ಥೆ ನಂತರ ಗಂಭೀರ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಪೋಷಕರು ಅವರನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ತಮ್ಮ ಲೈಂಗಿಕತೆಯನ್ನು ಬಹಿರಂಗಗೊಳಿಸಿದ ಬಳಿಕ ಕುಟುಂಬದಿಂದ ಹೊರಹಾಕಲ್ಪಡುತ್ತಾರೆ ಎಂದು ಅನೀಶ್ ಹೇಳುತ್ತಾರೆ.

ನಿರಂತರ ಹೋರಾಟ ಮತ್ತು ಹಲವು ತ್ಯಾಗಗಳ ಬಳಿಕ ಕ್ವಿಯರ್ ಚಳವಳಿ ಹಾದಿ ಸುಗಮಗೊಳಿಸಲಾಗಿದೆ. ಆದರೆ, ಇತ್ತೀಚೆಗೆ ಪ್ರಗತಿಯನ್ನು ಕಡಿಮೆ ಮಾಡುವ ಪ್ರವೃತ್ತಿ ಕಂಡುಬಂದಿದೆ. ಸಮುದಾಯದ ಪ್ರಾತಿನಿಧ್ಯ ಮತ್ತು ಗೋಚರತೆಯನ್ನು ದುರ್ಬಲಗೊಳಿಸಲು ಕೆಲವು ಗುಂಪುಗಳು ಮತ್ತು ರಾಜಕೀಯ ಪಕ್ಷಗಳು ಸೈಬರ್‌ಬುಲ್ಲಿಯಿಂಗ್‌ ಮತ್ತು ದ್ವೇಷದ ಭಾಷಣದಲ್ಲಿ ತೊಡಗಿಕೊಂಡಿವೆ.

ಡಾ.ಅನೀಶ್ ಅವರ ಅಧ್ಯಯನದ ಪ್ರಕಾರ, ಅಂತಾರಾಷ್ಟ್ರೀಯ ಕಂಪನಿಗಳು ಕೆಲಸದ ಸ್ಥಳಗಳಲ್ಲಿ ಎಲ್‌ಜಿಬಿಟಿ ಸಮುದಾಯಕ್ಕೆ ಹೆಚ್ಚಿನ ಬೆಂಬಲ ಒದಗಿಸುವ ನೀತಿಗಳನ್ನು ಹೊಂದಿವೆ. ಅಲ್ಲಿ ಅವರಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಕೇರಳದಲ್ಲಿ ಕೆಲವು ಕೆಲಸದ ಸ್ಥಳಗಳು ಈ ಸಮುದಾಯಕ್ಕೆ ಸಮಾನ ಬೆಂಬಲ ನೀಡುತ್ತವೆ ಮತ್ತು ತಾರತಮ್ಯವನ್ನು ಕಡಿಮೆಗೊಳಿಸುವ ನೀತಿಗಳನ್ನು ಹೊಂದಿವೆ. ದಾದಿಯರು ಮತ್ತು ಗೃಹ ಕಾರ್ಮಿಕರು ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ. ಪುರುಷರು ಮೇಲಧಿಕಾರಿಗಳಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಾರೆ.

ಸಿನಿಮಾಗಳಲ್ಲಿ ಎಲ್ಲಾ ಪಾತ್ರಗಳನ್ನು ನಿಖರವಾಗಿ ಚಿತ್ರಿಸಬೇಕು. ಆದರೆ, ಅದು ಜೀವನದ ನೈಜತೆಯನ್ನು ಪ್ರತಿಬಿಂಬಿಸುವುದಿಲ್ಲ.ಸೃಜನಶೀಲ ಕೃತಿಗಳು ಸಾಮಾಜಿಕ ಸ್ವಾತಂತ್ರ್ಯ ಅಥವಾ ಅದರ ಅನುಪಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಿಜಿತ್ ಹೇಳುತ್ತಾರೆ. ʻಕಾತ‌ಲ್‌ʼ ನಿರಾಕರಣೆಯಲ್ಲಿ ಬದುಕುತ್ತಿರುವ ಸಮಾಜಕ್ಕೆ ವಾಸ್ತವ ಸಂದೇಶವನ್ನು ಸೂಕ್ಷ್ಮವಾಗಿ ತಿಳಿಸಲು ಅವಕಾಶವನ್ನು ಒದಗಿಸಿದೆ. 

(ಗೋಪ್ಯತೆ ಕಾಪಾಡಲು ಕೆಲವು ಹೆಸರುಗಳನ್ನು ಬದಲಿಸಲಾಗಿದೆ)

 

Similar News