ʼತ್ರಿಶೂರ್ ಪೂರಂʼ ದಿನ ಆಂಬ್ಯುಲೆನ್ಸ್ ದುರ್ಬಳಕೆ ; ನಟ, ಸಂಸದ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲು

ಸುರೇಶ್‌ ಗೋಪಿ ಅವರು ಪೊಲೀಸರು ಹಾಕಿರುವ ನಿರ್ಬಂಧಗಳನ್ನು ಉಲ್ಲಂಘಿಸಿ, ಪೂರಂ ಸ್ಥಳ ತಲುಪಲು ಆಂಬ್ಯುಲೆನ್ಸ್ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ.

Update: 2024-11-03 08:52 GMT
ನಟ, ಸಂಸದ ಸುರೇಶ್‌ ಗೋಪಿ

ʼತ್ರಿಶೂರ್ ಪೂರಂʼ ದಿನ ಆಂಬ್ಯುಲೆನ್ಸ್ ದುರ್ಬಳಕೆ ಮಾಡಿದ ಆರೋಪದ ಮೇಲೆ ನಟ, ಸಂಸದ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲುವರ್ಷದ ಎಪ್ರಿಲ್‌ನಲ್ಲಿ ನಡೆದಿದ್ದ ʼತ್ರಿಶೂರ್ ಪೂರಂʼ ಉತ್ಸವದ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರು ಭಾನುವಾರ (ನವೆಂಬರ್‌3ರಂದು) ತಿಳಿಸಿದ್ದಾರೆ.

ಈ ಸಂಬಂಧ ತ್ರಿಶೂರ್ ಪೂರ್ವ ಪೊಲೀಸರು ಭಾನುವಾರ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಅಭಿಜಿತ್ ನಾಯರ್ ಮತ್ತು ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 279 (ವೇಗದ ಚಾಲನೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸವಾರಿ) ಮತ್ತು 34 (ಸಾಮಾನ್ಯ ಉದ್ದೇಶ ಸಾಧಿಸಲು ಹಲವರು ಸೇರಿ ಮಾಡಿದ ಕೃತ್ಯಗಳು) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 179, 184, 188 ಮತ್ತು 192 ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುರೇಶ್‌ ಗೋಪಿ ಅವರು ಪೊಲೀಸರು ಹಾಕಿರುವ ನಿರ್ಬಂಧಗಳನ್ನು ಉಲ್ಲಂಘಿಸಿ, ಪೂರಂ ಸ್ಥಳ ತಲುಪಲು ಆಂಬ್ಯುಲೆನ್ಸ್ ಬಳಸಿಕೊಂಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಸ್ಥಳೀಯ ಸಿಪಿಐ ಮುಖಂಡ ಕೆ.ಪಿ.ಸುಮೇಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಎಫ್ಐಆರ್ ಪ್ರಕಾರ, ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಆಗಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಗೋಪಿ ಮತ್ತು ಇತರ ಆರೋಪಿಗಳು ಚುನಾವಣಾ ಪ್ರಚಾರ ಕಾರ್ಯತಂತ್ರದ ಭಾಗವಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸೇವಾ ಭಾರತಿ ಮಾಲೀಕತ್ವದ ಆಂಬ್ಯುಲೆನ್ಸ್‌ನಲ್ಲಿ ಪ್ರಯಾಣಿಸಿದ್ದರು. , ಪೊಲೀಸ್ ನಿರ್ಬಂಧಗಳನ್ನು ಉಲ್ಲಂಘಿಸಿ ಪ್ರಯಾಣಿಸಿ ತಿರುವಂಬಾಡಿ ದೇವಸ್ವಂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು.

"ಪೂರಂ ದಿನದಂದು (ಏಪ್ರಿಲ್ 20) ಜನಸಂದಣಿಯ ನಡುವೆ ಅವರು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ತ್ರಿಶೂರ್ ರೌಂಡ್ ಮೂಲಕ ಆಂಬ್ಯುಲೆನ್ಸ್ ಓಡಿಸಿದ್ದರು " ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಿರಾಕರಿಸಿದ ಸುರೇಶ್‌ ಗೋಪಿ

ತಾನು ಆಂಬ್ಯುಲೆನ್ಸ್‌ನಲ್ಲಿ ಉತ್ಸವದ ಸ್ಥಳಕ್ಕೆ ತಲುಪಿದ್ದೇನೆ ಎಂಬ ಆರೋಪಗಳನ್ನು ಸುರೇಶ್ ಗೋಪಿ ನಿರಾಕರಿಸಿದ್ದಾರೆ. ತಮ್ಮ ಕಾರಿನಲ್ಲಿ ಉತ್ಸವದ ಸ್ಥಳದ ಸಮೀಪಕ್ಕೆ ತಲುಪಿದ್ದೆ. ಈ ವೇಳೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಕೆಲವು ಗೂಂಡಾಗಳು ಕಾರಿನ ಮೇಲೆ ದಾಳಿ ನಡೆಸಿದ್ದರು ಆರೋಪಿಸಿದ್ದಾರೆ.

ಕೆಲವು ಯುವಕರು ನನ್ನನ್ನು ಅಲ್ಲಿಂದ ರಕ್ಷಿಸಿದ್ದರು. ಉತ್ಸವದ ಸ್ಥಳದಲ್ಲಿದ್ದ ಆಂಬ್ಯುಲೆನ್ಸ್‌ ಮೂಲಕ ಕರೆದುಕೊಂಡು ಹೋದರು ಎಂದು ಸುರೇಶ್‌ ಗೋಪಿ ಹೇಳಿದ್ದಾರೆ.

ಹಿಂದೂ ಭಾವನೆಗಳನ್ನು ಪ್ರಚೋದಿಸುವ ಮೂಲಕ ತ್ರಿಶೂರ್ ಲೋಕಸಭಾ ಸ್ಥಾನ ಗೆಲ್ಲಲು ಬಿಜೆಪಿ ಪ್ರಯತ್ನಿಸಿದೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷ ಸಿಪಿಐ ಆರೋಪಿಸಿವೆ. ಪೂರಂಗೆ ಅಡ್ಡಿಪಡಿಸಿದಕ್ಕಾಗಿ ತ್ರಿಶೂರ್ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಲವು ವಿವಾದ

ತ್ರಿಶೂರ್ ಪೂರಂ ಆಚರಣೆಗಳಲ್ಲಿ ಪೊಲೀಸರ ಹಸ್ತಕ್ಷೇಪವಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.ಹೀಗಾಗಿ ಉತ್ಸವಕ್ಕೆ ಹಿನ್ನಡೆಯಾಗಿತ್ತು. ಉತ್ಸವದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸುಡುಮದ್ದುಗಳ ಪ್ರದರ್ಶನವನ್ನು ಹಾಡಹಗಲೇ ನಡೆಸಲಾಗಿತ್ತು. ಇದು ಉತ್ಸವದ ಪ್ರೇಮಿಗಳಿಗೆ ಬೇಸರ ಮೂಡಿಸಿತ್ತು.  

Tags:    

Similar News