ಖರ್ಗೆ ಹೇಳಿಕೆ ಅಸಹ್ಯಕರ-ಶಾ

Update: 2024-09-30 06:46 GMT

ʻನರೇಂದ್ರ ಮೋದಿ ಅಧಿಕಾರದಲ್ಲಿ ಇರುವವರೆಗೂ ನಾನು ಸಾಯುವುದಿಲ್ಲʼ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ʻಅಸಹ್ಯ ಮತ್ತು ಅವಮಾನಕರʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.

ಖರ್ಗೆ ಅವರು ಅನಗತ್ಯವಾಗಿ ಪ್ರಧಾನಿಯನ್ನು ತಮ್ಮ ವೈಯಕ್ತಿಕ ಆರೋಗ್ಯ ವಿಷಯಕ್ಕೆ ಎಳೆದು ತಂದಿದ್ದಾರೆ ಎಂದು ಶಾ ಹೇಳಿದರು. 

ಖರ್ಗೆ ಹೇಳಿಕೆ: ಜಮ್ಮುವಿನ ಜಸ್ರೋಟಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಖರ್ಗೆ ಅವರು ಕೆಲ ಕಾಲ ಅಸ್ವಸ್ಥರಾಗಿದ್ದು , ಸ್ವಲ್ಪ ವಿರಾಮದ ನಂತರ ಮಾತು ಪುನರಾರಂಭಿಸಿದರು. ʻನನಗೆ 83 ವರ್ಷ. ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ. ತಲೆ ಸುತ್ತು ಬಂದಿದ್ದರಿಂದ ಕುಳಿತು ಮಾತಾಡುತ್ತಿದ್ದೇನೆ. ಕ್ಷಮಿಸಿ,ʼಎಂದು ಹೇಳಿದ್ದರು. 

ಪ್ರಧಾನಿ ಬಗ್ಗೆ ಕಾಂಗ್ರೆಸ್‌ಗೆ ಎಷ್ಟು ದ್ವೇಷ ಮತ್ತು ಭಯವಿದೆ ಎಂಬುದನ್ನು ಖರ್ಗೆಯವರ ಹೇಳಿಕೆಗಳು ತೋರಿಸುತ್ತವೆ. ಅವರು ಪ್ರಧಾನಿ ಬಗ್ಗೆ ನಿರಂತರವಾಗಿ ಯೋಚಿಸುತ್ತಿರುತ್ತಾರೆ ಎಂದು ಶಾ ಹೇಳಿದರು. 

ʻಖರ್ಗೆ ಅವರ ಆರೋಗ್ಯವನ್ನು ಪ್ರಧಾನಿ ವಿಚಾರಿಸಿದ್ದಾರೆ. ಖರ್ಗೆ ಅವರ ಆರೋಗ್ಯಕ್ಕಾಗಿ ಪ್ರಧಾನಿ ಪ್ರಾರ್ಥಿಸುತ್ತಾರೆ. ನಾವೆಲ್ಲರೂ ಅವರು ದೀರ್ಘಕಾಲ ಆರೋಗ್ಯಕರ ಜೀವನ ನಡೆಸಬೇಕೆಂದು ಪ್ರಾರ್ಥಿಸುತ್ತೇವೆ. 2047 ರ ವೇಳೆಗೆ ವಿಕಸಿತ ಭಾರತವನ್ನು ರಚಿಸುವುದನ್ನು ನೋಡಲು ಅವರು ಇರಲಿ, ʼಎಂದು ಸಚಿವರು ಹೇಳಿದರು.

Tags:    

Similar News