ಚುನಾವಣಾ ಪೂರ್ವ ಗ್ಯಾರಂಟಿ ಘೋಷಣೆಗಳ ಬಗ್ಗೆ ಸುಪ್ರೀಂ ಅಸಮಾಧಾನ

ಎಲ್ಲಾ ವರ್ಗದ ಜನರನ್ನು ಸಮಾಜದ ಅಭಿವೃದ್ಧಿಯ ಭಾಗವಾಗುವುದು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರಿಗೆ ಅವಕಾಶ ನೀಡುವುದು ಉತ್ತಮ ಎಂದು ಕೋರ್ಟ್​ ಹೇಳಿತು.;

Update: 2025-02-12 08:42 GMT
supreme Court

ಸುಪ್ರೀಂ ಕೋರ್ಟ್ ಬುಧವಾರ (ಫೆಬ್ರವರಿ 12) ಚುನಾವಣಾ ಪೂರ್ಣ ಉಚಿತ ಸೌಲಭ್ಯಗಳ ಘೋಷಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಉಚಿತ ಗ್ಯಾರಂಟಿಗಳನ್ನು ಮತ್ತೆ ಮತ್ತೆ ಘೋಷಿಸುವುದರಿಂದ ಜನರು ಕೆಲಸಕ್ಕೆ ಹೋಗುವುದಕ್ಕೆ ಸೋಮಾರಿತನ ತೋರುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳು ಬಿ.ಆರ್. ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ನ್ಯಾಯಪೀಠವು, ನಗರ ಪ್ರದೇಶಗಳ ನಿರಾಶ್ರಿತ ಜನರ ವಾಸಸ್ಥಳದ ಹಕ್ಕಿಗೆ ಸಂಬಂಧಿಸಿದ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಗವಾಯಿ, ಉಚಿತ ಸೌಲಭ್ಯಗಳೂ ಸಿಗುತ್ತವೆ ಎಂದು ಜನರು ಕೆಲಸ ಮಾಡಲು ಹಿಂಜರಿಯುತ್ತಾರೆ. ಅವರು ಉಚಿತ ರೇಷನ್ ಪಡೆಯೇ ಯಾವುದೇ ಕೆಲಸ ಮಾಡದೆ ಹಣ ಪಡೆಯುತ್ತಿದ್ದಾರೆ" ಎಂದು ಅವರು ಅಭಿಪ್ರಾಯಪಟ್ಟರು.

ಎಲ್ಲ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದರೊಂದಿಗೆ, ರಾಷ್ಟ್ರದ ಅಭಿವೃದ್ಧಿಗೆ ಅವರು ಸಹಕಾರ ನೀಡಲು ಅವಕಾಶ ಕಲ್ಪಿಸುವುದು ಉತ್ತಮವಾಗುವುದಿಲ್ಲವೇ?" ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಅಟಾರ್ನಿ ಜನರಲ್ ಆರ್. ವೆಂಕಟರಾಮಣಿ ಅವರು ನ್ಯಾಯಪೀಠದ ಮುಂದೆ, ಕೇಂದ್ರ ಸರ್ಕಾರ ನಗರ ಪ್ರದೇಶದ ನಿರಾಶ್ರಿತ ಜನರ ಪೂರಕ ಯೋಜನೆ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ಇದರಲ್ಲಿ ವಾಸಸ್ಥಳದ ವ್ಯವಸ್ಥೆಯಂತಹ ಅನೇಕ ಅಂಶಗಳು ಇರಲಿವೆ ಎಂದು ವಿವರಿಸಿದರು.

ನ್ಯಾಯಪೀಠ ಅಟಾರ್ನಿ ಜನರಲ್‌ಗೆ. ಈ ಯೋಜನೆ ಕಾರ್ಯಗತಗೊಳ್ಳಲು ಸರ್ಕಾರಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿತು. ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆರು ವಾರಗಳ ನಂತರಕ್ಕೆ ಮುಂದೂಡಿದೆ.

Tags:    

Similar News