ಅವಕಾಶ ಸಿಕ್ಕರೆ ಇಂಡಿಯಾ ಬಣ ಮುನ್ನಡೆಸಲು ಸಿದ್ಧ: ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷ ಬಿಜೆಪಿ ಬಣದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವಕಾಶ ನೀಡಿದರೆ ಇಂಡಿಯಾ ಮೈತ್ರಿಕೂಟದ ಉಸ್ತುವಾರಿ ವಹಿಸಿಕೊಂಡು ಬಿಜೆಪಿಗೆ ಪ್ರತಿರೋಧ ಒಡ್ಡುವೆ ಎಂದು ಹೇಳಿದ್ದಾರೆ.;

Update: 2024-12-07 06:54 GMT
ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಉಪಾಚುನಾವಣೆಯಲ್ಲಿ ಐದಕ್ಕೂ ಐದು ಕ್ಷೇತ್ರಗಳನ್ನು ಗೆದ್ದ ಬಳಿಕ ರಾಜಕೀಯವಾಗಿ ಇನ್ನಷ್ಟು ಬಲ ಪಡೆದಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಇಂಡಿಯಾ ಬಣ ನೇತೃತ್ವ ವಹಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.




ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷ ಬಿಜೆಪಿ ಬಣದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವಕಾಶ ನೀಡಿದರೆ ಇಂಡಿಯಾ ಮೈತ್ರಿಕೂಟದ ಉಸ್ತುವಾರಿ ವಹಿಸಿಕೊಂಡು ಬಿಜೆಪಿಗೆ ಪ್ರತಿರೋಧ ಒಡ್ಡುವೆ ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ತಮ್ಮ ಪಾತ್ರ ಮುಂದುವರಿಸುವ ನಡುವೆ ಪ್ರತಿಪಕ್ಷವನ್ನು ಮುನ್ನಡೆಸು ಜವಾಬ್ದಾರಿಯನ್ನು ನಿರ್ವಹಿಸುವೆ ಎಂದು ಹೇಳಿಕೊಂಡಿದ್ದಾರೆ.

"ನಾನು ಇಂಡಿಯಾ ಬಣವನ್ನು ರಚಿಸಿದ್ದೆ, ಈಗ ಅದನ್ನು ನಿರ್ವಹಿಸುವುದು ಮುನ್ನಡೆಸುವವರಿಗೆ ಬಿಟ್ಟದ್ದು. ಅವರು ಪ್ರತಿಪಕ್ಷಗಳಿಗೆ ಸೆಡ್ಡು ಹೊಡೆಯಲು ಅಸಮರ್ಥರಾದರೆ ನಾನು ಏನು ಮಾಡಬಹುದು? ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬೇಕು ಎಂದು ನಾನು ಹೇಳುತ್ತೇನೆ" ಎಂದು ಅವರು ಶುಕ್ರವಾರ (ಡಿಸೆಂಬರ್ 6) ಬಂಗಾಳಿ ಸುದ್ದಿ ಚಾನೆಲ್ ನ್ಯೂಸ್ 18 ಬಾಂಗ್ಲಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಬಲ ಬಿಜೆಪಿ ವಿರೋಧಿ ಶಕ್ತಿಯಾಗಿ ಗುರುತಿಸಿಕೊಂಡಿರುವ ಹೊರತಾಗಿಯೂ ಇಂಡಿಯಾ ಬಣದ ಉಸ್ತುವಾರಿಯನ್ನು ಏಕೆ ವಹಿಸಿಕೊಳ್ಳುತ್ತಿಲ್ಲ ಎಂದು ಕೇಳಿದಾಗ, ಬ್ಯಾನರ್ಜಿ, "ಅವಕಾಶ ನೀಡಿದರೆ ನಾನು ನೇತೃತ್ವ ವಹಿಸುತ್ತೇಣೆ. ನಾನು ಪಶ್ಚಿಮ ಬಂಗಾಳದ ಹೊರಗೆ ಹೋಗಲು ಬಯಸುವುದಿಲ್ಲ, ಆದರೆ ನಾನು ಅದನ್ನು ಇಲ್ಲಿಂದಲೇ ನಿರ್ವಹಿಸುತ್ತೇನೆ " ಎಂದು ಅವರು ಹೇಳಿದ್ದಾರೆ.

ಸಮನ್ವಯದ ಕೊರತೆ

ಬಿಜೆಪಿಯನ್ನು ಎದುರಿಸಲು ರಚಿಸಲಾದ ಇಂಡಿಯಾ ಬ್ಲಾಕ್ ಎರಡು ಡಜನ್​​ಗೂ ಹೆಚ್ಚು ವಿರೋಧ ಪಕ್ಷಗಳನ್ನು ಒಳಗೊಂಡಿದೆ. ಆದಾಗ್ಯೂ, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಮನ್ವಯದ ಕೊರತೆ ದೊಡ್ಡ ಸಮಸ್ಯೆಯಾಗಿದೆ .

ಕಾಂಗ್ರೆಸ್ ಮತ್ತು ಇತರ ಮಿತ್ರಪಕ್ಷಗಳು ತಮ್ಮ ಅಹಂಕಾರ ಬದಿಗಿಟ್ಟು ಮಮತಾ ಬ್ಯಾನರ್ಜಿ ಅವರನ್ನು ಇಂಡಿಯಾ ಮೈತ್ರಿಕೂಟದ ನಾಯಕಿಯಾಗಿ ಮಾಡಬೇಕು ಎಂದು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಇತ್ತೀಚೆಗೆ ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಮಮತಾ ಕೂಡ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ಗೆ ಸೋಲಿನ ನಿರಾಸೆ

ಕಾಂಗ್ರೆಸ್ ತನ್ನ ಸೋಲಿನ ಓಟವನ್ನು ಮುಂದುವರಿಸಿದೆ. ಮಹಾರಾಷ್ಟ್ರದಲ್ಲಿ ತನ್ನ ಕೆಟ್ಟ ಪ್ರದರ್ಶನ ತೋರಿದೆ. ಜಾರ್ಖಂಡ್​ನಲ್ಲಿ ಆಡಳಿತಾರೂಢ ಜೆಎಂಎಂ ಜತೆ ಪಾಲುದಾರಿಕೆ ಪಡೆದುಕೊಂಡು ನೆಮ್ಮದಿ ಕಂಡುಕೊಂಡಿದೆ.

ಆರ್​ಜಿ ಕರ್​ ವೈದ್ಯಕೀಯ ಕಾಲೇಜು ಪ್ರತಿಭಟನೆಗಳಂತಹ ವಿವಾದಗಳ ನಡುವೆಯೂ ಟಿಎಂಸಿ ಬಂಗಾಳದಲ್ಲಿ ಭರ್ಜರಿಗೆ ಗೆಲುವು ದಾಖಲಿಸಿ ಪಕ್ಷದ ಪ್ರಾಬಲ್ಯವನ್ನು ಬಲಪಡಿಸಿವೆ.

ಸಿಪಿಐ (ಎಂ) ನೇತೃತ್ವದ ಎಡರಂಗ, ಅದರ ಮಿತ್ರ ಪಕ್ಷ ಸಿಪಿಐ (ಎಂಎಲ್) ಲಿಬರೇಷನ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಟಿಎಂಸಿಯ ಮಿತ್ರಪಕ್ಷಗಳಾದ ಕಾಂಗ್ರೆಸ್ ಎಲ್ಲಾ ಪಕ್ಷಗಳು ದೊಡ್ಡ ಹಿನ್ನಡೆ ಅನುಭವಿಸಿದ್ದವು. ಇಂಡಿಯಾ ಬಣದ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ನಾಯಕನ ಪಟ್ಟ ಹೊಂದಿದ್ದರೂ ಮಮತಾ ಚುಕ್ಕಾಣಿ ಹಿಡಿಯಲು ಕಾತರರಾಗಿದ್ದಾರೆ. 

Tags:    

Similar News