Ranveer Allahbadia: ಅಶ್ಲೀಲ ಪದ ಬಳಕೆ ಪ್ರಕರಣ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಯೂಟ್ಯೂಬರ್‌ ರಣವೀರ್

Ranveer Allahbadia: ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಅಲಾಹಾಬಾದಿಯಾ ಪರ ವಕೀಲ ಅಭಿನವ್ ಚಂದ್ರಚೂಡ್ ಅವರ ಅರ್ಜಿಯನ್ನು ಪರಿಶೀಲಿಸಿದೆ.;

Update: 2025-02-14 08:11 GMT
ರಣವೀರ್ ಅಲಹಾಬಾದಿಯಾ

ಮುಂಬೈ: ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪೋಷಕರ ಲೈಂಗಿಕತೆಯ ಬಗ್ಗೆ ಮಾತನಾಡಿದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಒಂದೇ ಕೋರ್ಟ್​​ನಲ್ಲಿ ವಿಚಾರಣೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸದ್ದಾರೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಅಲಾಹಾಬಾದಿಯಾ ಪರ ವಕೀಲ ಅಭಿನವ್ ಚಂದ್ರಚೂಡ್ ಅವರ ಅರ್ಜಿಯನ್ನು ಪರಿಶೀಲಿಸಿದೆ.‌ ರಣವೀರ್ ಅಲಹಬಾದಿಯಾ ಮತ್ತು ಸ್ಟಾಂಡ್‌ಅಪ್‌ ಕಾಮಿಡಿಯನ್ ಸಮಯ್ ರೈನಾ, ಹಾಗೂ ಇತರ ಯೂಟ್ಯೂಬರ್‌ಗಳ ವಿರುದ್ಧ ದೇಶದ ಮೂಲೆಮೂಲೆಗಳಲ್ಲಿ ಪ್ರಕರಣ ದಾಖಲಾಗಿದೆ.

'ಇಂಡಿಯಾಸ್ ಗಾಟ್ ಲ್ಯಾಟೆಂಟ್' ತನ್ನ ಇತ್ತೀಚೆಗಿನ ಸಂಚಿಕೆಯಲ್ಲಿ ಅಶ್ಲೀಲತೆಯನ್ನು ಪ್ರಸಾರ ಮಾಡಿದೆ. ಶೋ ನಡೆಸಿಕೊಡುವ ಯೂಟ್ಯೂಬರ್ಸ್​​ಗಳು ಅಸಭ್ಯ ಪ್ರಶ್ನೆ ಕೇಳಿದ್ದಾರೆ. ಅಷ್ಟೇ ಅಲ್ಲದೆ ಲೈಂಗಿಕ ಸಂಬಂಧಗಳ ಚರ್ಚೆಗಳಲ್ಲಿ ತೊಡಗಿದ್ದರು. ಅವರ ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಸ್ಸಾಂ ಪೊಲೀಸರು ವಿಚಾರಣೆಗಾಗಿ ರಣವೀರ್​​ಗೆ ಸಮನ್ಸ್ ನೀಡಿದ್ದು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಅವರ ಪರ ವಕೀಲರಾದ ಅಭಿನವ್ ನ್ಯಾಯಾಲಯಕ್ಕೆ ಕೋರಿದರು.

ಕಾರ್ಯಕ್ರಮದಲ್ಲಿ ಪೋಷಕರ ಲೈಂಗಿಕತೆಯ ಕುರಿತು‌ ಖ್ಯಾತ ಪಾಡ್‌ಕಾಸ್ಟರ್ ರಣವೀರ್ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ವಿಡಿಯೊ ಕ್ಲಿಪ್ ವೈರಲ್ ಆಗುತ್ತಲೇ ವಿವಾದದ ಸೃಷ್ಟಿಯಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ಅವರ ಮತ್ತು ಇತರರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 

Tags:    

Similar News