ದಾರಿ ತಪ್ಪಿಸುವ ಜಾಹೀರಾತು: ಪತಂಜಲಿಯಿಂದ ಬೇಷರತ್ ಕ್ಷಮೆಯಾಚನೆ

Update: 2024-03-21 13:08 GMT

ಪತಂಜಲಿ ಆಯುರ್ವೇದ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. 

ಸುಪ್ರೀಂ ಕೋರ್ಟ್‌ಗೆ ಬುಧವಾರ ಸಲ್ಲಿಸಿರುವ  ಪ್ರಮಾಣಪತ್ರದಲ್ಲಿ ಉತ್ಪನ್ನಗಳ ಸಾಮರ್ಥ್ಯದ ಬಗ್ಗೆ ಕಂಪನಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಕ್ಷಮೆ ಕೋರಿದರು. 

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಬಾಲಕೃಷ್ಣ ಮತ್ತು ರಾಮ್‌ದೇವ್ ಏಪ್ರಿಲ್ 2 ರಂದು ಖುದ್ದಾಗಿ ಹಾಜರಾಗುವಂತೆ ಆದೇಶಿಸಿದ್ದರು. ʻಆಕ್ಷೇಪಾರ್ಹ ವಾಕ್ಯʼಗಳಿರುವ ಕಂಪನಿಯ ಜಾಹೀರಾತುಗಳಿಗಾಗಿ ಕ್ಷಮೆಯಾಚಿಸಿದರು ಮತ್ತು ತಮಗೆ ಕಾನೂನಿನ ಬಗ್ಗೆ ಗೌರವವಿದೆ. ಭವಿಷ್ಯದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವುದಿಲ್ಲ. ದೇಶದ ನಾಗರಿಕರು ಆರೋಗ್ಯಕ್ಕೆ ಪೂರಕವಾದ ವಸ್ತುಗಳ ಬಳಕೆ ಮೂಲಕ ಆರೋಗ್ಯಕರ ಜೀವನವನ್ನು ನಡೆಸಲು ಉತ್ತೇಜಿಸುವುದು ತಮ್ಮ ಉದ್ದೇಶʼ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಪತಂಜಲಿ ಜಾಹೀರಾತು 1954 ರ ಕಾಯಿದೆಯ ಉಲ್ಲಂಘನೆ:  ಮಧುಮೇಹ, ಅಸ್ತಮಾ, ರಕ್ತದೊತ್ತಡ ಮತ್ತು ಇತರ ಜೀವನಶೈಲಿಯ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳುವುದು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ 1954 ರ ಉಲ್ಲಂಘನೆ. ಸುಪ್ರೀಂ ಕೋರ್ಟ್‌ ನವೆಂಬರ್‌ 21, 2023 ರಂದು ಇಂಥ ಜಾಹೀರಾತುಗಳನ್ನು ನೀಡದಂತೆ ಕಂಪನಿಯನ್ನು ನಿರ್ಬಂಧಿಸಿದೆ ಮತ್ತು ಈಸಂಬಂಧ ಪತಂಜಲಿಯಿಂದ ಒಪ್ಪಿಗೆ ಪತ್ರ ಪಡೆದುಕೊಂಡಿ ದೆ.ಹೀಗಿದ್ದರೂ, ಜಾಹೀರಾತು ನೀಡಿರುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಕೋರ್ಟ್‌ ಹೇಳಿದೆ. 

ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಕೂಡ ಹೆಸರಿಸಲಾಗಿತ್ತು. ಕಾಯ್ದೆಯ ಉಲ್ಲಂಘನೆಗೆ ಪತಂಜಲಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರವನ್ನು ಕೇಳಿತ್ತು. ಉತ್ತರಾಖಂಡ ರಾಜ್ಯ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹೇಳಿತ್ತು.

Tags:    

Similar News