National Herald Case: ನ್ಯಾಷನಲ್‌ ಹೆರಾಲ್ಡ್‌ ಹಗರಣ, ಇಡಿ ಮನವಿ ತಿರಸ್ಕರಿಸಿದ ಕೋರ್ಟ್

National Herald Case : ಇಡಿ ಮನವಿಯ ಮೇರೆಗೆ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ವಿಚಾರಣೆ ನಡೆಸಿದ್ದು ಕಾನೂನಿನ ಹೊಸ ನಿಬಂಧನೆಗಳ ಪ್ರಕಾರ ವಿಚಾರಣೆ ನಡೆಸದೆ ದೂರಿನ ಪರಿಗಣನೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.‌;

Update: 2025-04-25 12:30 GMT
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ‌ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ 

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ನೋಟಿಸ್‌ ನೀಡಬೇಕೆಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ದೆಹಲಿ ಕೋರ್ಟ್‌ ಶುಕ್ರವಾರ (ಏಪ್ರಿಲ್‌ 25 ) ರಂದು ತಿರಸ್ಕರಿಸಿದೆ.

ಜಾರಿ ನಿರ್ದೇಶನಾಲಯದ (ಇಡಿ) ಮನವಿಯ ಮೇರೆಗೆ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ವಿಚಾರಣೆ ನಡೆಸಿದ್ದು, ಕಾನೂನಿನ ಹೊಸ ನಿಬಂಧನೆಗಳ ಪ್ರಕಾರ ಆರೋಪಿಗಳನ್ನು ವಿಚಾರಣೆ ನಡೆಸದೇ ದೂರನ್ನು ಪರಿಗಣನೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್‌ ತಿಳಿಸಿದೆ.‌

ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಪೂರ್ಣ ಮನವರಿಕೆ ಮಾಡದ ಹೊರತು ನೋಟಿಸ್ ಜಾರಿ ಮಾಡಲು, ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಆದೇಶವನ್ನು ದೀರ್ಘಗೊಳಿಸದಂತೆ ಹಾಗೂ ಸೋನಿಯಾ ಮತ್ತು ರಾಹುಲ್‌ ಗಾಂಧಿಗೆ ನೋಟಿಸ್ ಜಾರಿ ಮಾಡುವಂತೆ ಇಡಿ ನ್ಯಾಯಾಲಯಕ್ಕೆ ಮನವಿ ಮಾಡಿತು. ನ್ಯಾಯಾಲಯವು ಆದೇಶ ನೀಡಬೇಕಾದರೆ ಯಾವುದಾದರೂ  ತಪ್ಪುಗಳಿವೆಯೇ ಎಂದು ನೋಡಬೇಕು. ಚಾರ್ಜ್‌ಶೀಟ್‌ನಲ್ಲಿ ಹಲವಾರು ಮಾಹಿತಿ ಕಾಣೆಯಾಗಿದ್ದು, ಆ ಎಲ್ಲಾ ದಾಖಲೆಗಳನ್ನು ನೀಡಿದ ನಂತರವೇ ನೋಟಿಸ್‌ ಜಾರಿ ಮಾಡಬೇಕೇ ಎಂದು ನ್ಯಾಯಾಲಯ ತೀರ್ಮಾನಿಸುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಜಾರಿ ನಿರ್ದೇಶನಾಲಯ ಯಾವುದೇ ಮಾಹಿತಿಯನ್ನು ಮುಚ್ಚಿಡುತ್ತಿಲ್ಲ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡಿದ್ದೇವೆ ಎಂದು ಇಡಿ, ನ್ಯಾಯಾಲಯಕ್ಕೆ ತಿಳಿಸಿತು. ಬಳಿಕ ಕೋರ್ಟ್​​, ಪ್ರಕರಣವನ್ನು ಮೇ 2ಕ್ಕೆ ಮುಂದೂಡಿತು.   

Tags:    

Similar News