ಜಾಗತಿಕ ಸಮಾನತೆ ಸೂಚ್ಯಂಕ: ಭಾರತಕ್ಕೆ ನಾಲ್ಕನೇ ಸ್ಥಾನ, ಅಮೆರಿಕ-ಬ್ರಿಟನ್‌ ಹಿಂದಿಕ್ಕಿದ ಸಾಧನೆ!

ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದ್ದರೂ, ದೇಶದ ಬಡತನದ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿಲ್ಲ. ಸುಮಾರು 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿದ್ದಾರೆ.;

Update: 2025-07-06 13:05 GMT

ವಿಶ್ವಸಂಸ್ಥೆಯು (World Bank) ಇತ್ತೀಚೆಗೆ ಪ್ರಕಟಿಸಿದ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ (Global Equality Index) ಭಾರತವು ಮಹತ್ವದ ಸಾಧನೆ ಮಾಡಿದೆ. 25.5 ಅಂಕಗಳನ್ನು ಗಳಿಸುವ ಮೂಲಕ ಭಾರತವು ವಿಶ್ವದ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಚೀನಾವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಸ್ಲೊವಾಕಿಯಾ, ಸ್ಲೊವೇನಿಯಾ ಮತ್ತು ಬೆಲಾರಸ್ ಕ್ರಮವಾಗಿ 24.1, 24.3 ಮತ್ತು 24.4 ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

ವಿಶ್ವಸಂಸ್ಥೆಯು ದೇಶದ ಕುಟುಂಬಗಳು, ವ್ಯಕ್ತಿಗಳ ಆದಾಯ, ಸಂಪತ್ತು ಮತ್ತು ಬಳಕೆಯನ್ನು ಆಧರಿಸಿ ಈ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ. ಈ ಸಾಧನೆಯು ಭಾರತದಂತಹ ದೊಡ್ಡ ಮತ್ತು ವೈವಿಧ್ಯಮಯ ದೇಶಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. 2011 ರಲ್ಲಿ 28.8 ಅಂಕಗಳನ್ನು ಪಡೆದಿದ್ದ ಭಾರತ, ಈ ಬಾರಿ 25.5 ಅಂಕಗಳಿಗೆ ಸುಧಾರಣೆ ಕಂಡಿದೆ. ಕಳೆದೊಂದು ದಶಕದಲ್ಲಿ ಬಡತನ ನಿರ್ಮೂಲನೆಗೆ ಕೈಗೊಂಡ ಕ್ರಮಗಳೇ ಈ ಸುಧಾರಣೆಗೆ ಮುಖ್ಯ ಕಾರಣ ಎಂದು ಭಾರತ ಸರ್ಕಾರ ತಿಳಿಸಿದೆ.

ಭಾರತದಲ್ಲಿ ಬಡತನದ ಪರಿಸ್ಥಿತಿ

ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದ್ದರೂ, ದೇಶದ ಬಡತನದ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿಲ್ಲ. ಸುಮಾರು 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿದ್ದಾರೆ. ಕಡುಬಡತನದ ಪ್ರಮಾಣ ಇಳಿಕೆಯಾಗಿದ್ದರೂ, ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಗುಣಮಟ್ಟದ ಜೀವನದಿಂದ ವಂಚಿತರಾಗಿದ್ದಾರೆ. ಇಲ್ಲಿ 'ಗುಣಮಟ್ಟದ ಜೀವನ' ಎಂದರೆ ಪೌಷ್ಟಿಕ ಆಹಾರ, ಸುರಕ್ಷಿತ ಮನೆ, ಉತ್ತಮ ಆರೋಗ್ಯ ಸೇವೆ ಮತ್ತು ಶಿಕ್ಷಣವನ್ನು ಒಳಗೊಂಡಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ ಬಡತನದ ಪರಿಸ್ಥಿತಿ 2011ರಿಂದ ಸುಧಾರಿಸಿದ್ದು, ಪ್ರಸ್ತುತ ಕೇವಲ ಶೇ. 5ರಷ್ಟು ಜನರು ಮಾತ್ರ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ.

ವಿಶ್ವಬ್ಯಾಂಕ್ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 40ರಷ್ಟನ್ನು ಹೊಂದಿದ್ದಾರೆ.

ಗುಣಮಟ್ಟದ ಜೀವನದ ಕೊರತೆಗೆ ಕಾರಣಗಳು ಮತ್ತು ವಿಶ್ವಬ್ಯಾಂಕ್ ಸಲಹೆ

ಭಾರತದಲ್ಲಿ ಎಲ್ಲರಿಗೂ ಗುಣಮಟ್ಟದ ಜೀವನ ಸಿಗದಿರಲು ಮುಖ್ಯ ಕಾರಣಗಳು ನಗರಗಳಲ್ಲಿ ಹೆಚ್ಚಿನ ಬಾಡಿಗೆ ವೆಚ್ಚ ಮತ್ತು ಅಸ್ಥಿರ ಉದ್ಯೋಗಗಳಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಅಸ್ಥಿರತೆಯು ಪ್ರಮುಖ ಸಮಸ್ಯೆಯಾಗಿದೆ.

ಜಾಗತಿಕವಾಗಿ ಗುಣಮಟ್ಟದ ಜೀವನಕ್ಕೆ ದಿನಕ್ಕೆ 250 ರೂ. ಅಗತ್ಯವೆಂದು ಗುರುತಿಸಲಾಗಿದೆಯಾದರೂ, ಭಾರತದಲ್ಲಿ ಕೇವಲ ಶೇ. 5ರಷ್ಟು ಜನರಿಗೆ ಮಾತ್ರ ಇದು ಲಭ್ಯವಿದೆ. ಆದ್ದರಿಂದ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಗುಣಮಟ್ಟದ ಜೀವನಕ್ಕೆ ದಿನಕ್ಕೆ ಕನಿಷ್ಠ 350 ರೂ. ಅಗತ್ಯವಿದೆ ಎಂದು ವಿಶ್ವಬ್ಯಾಂಕ್ ಸಲಹೆ ನೀಡಿದೆ. 

Tags:    

Similar News