ಏರೋಪ್ಲೇನ್‌ ಗಾತ್ರದ 5 ಕ್ಷುದ್ರಗ್ರಹಗಳು ಭೂಮಿ ಕಡೆಗೆ ಧಾವಿಸುತ್ತಿವೆ. ನಾವು ಆತಂಕ ಪಡಬೇಕೇ?

ಮುಂದಿನ ಒಂದೆರಡು ದಿನಗಳಲ್ಲಿ ಐದು ಏರೋಪ್ಲೇನ್‌ ಗಾತ್ರದ ಕ್ಷುದ್ರಗ್ರಹಗಳು ಬೆರಗುಗೊಳಿಸುವ ವೇಗದಲ್ಲಿ ಭೂಮಿಯ ಕಡೆಗೆ ಬರಲಿವೆ. ಇದರಲ್ಲಿ ಒಂದು 250 ಅಡಿಗಳ ಗಗನಚುಂಬಿ ಕಟ್ಟಡದಷ್ಟು ದೊಡ್ಡ ಕ್ಷುದ್ರಗ್ರಹ. ಉಳಿದ ನಾಲ್ಕು ವಿಮಾನದ ಗಾತ್ರದವು. ಇವುಗಳಲ್ಲಿ ಒಂದು ನಿಜವಾಗಿಯೂ ಭೂಮಿಗೆ ಹತ್ತಿರ ಬರುವ ನಿರೀಕ್ಷೆಯಿದೆ.;

Update: 2024-07-08 16:25 GMT
1.5 ದಶಲಕ್ಷ ಕಿಮೀ ದೂರದಲ್ಲಿ ಭೂಮಿಯನ್ನು ಸಮೀಪಿಸುವ ಕ್ಷುದ್ರಗ್ರಹ 2024 ಎಂಟಿ1.ಗಂಟೆಗೆ 65,215 ಕಿಮೀ ವೇಗದಲ್ಲಿ ಚಲಿಸುತ್ತದೆ,

ಕ್ಷುದ್ರಗ್ರಹಗಳು ಇತ್ತೀಚೆಗೆ ಜನರ ಕಲ್ಪನೆಯನ್ನು ಸೆಳೆಯಲಾರಂಭಿಸಿವೆ. ಆದರೆ, ಭೂಮಿಯ ಕಡೆಗೆ ನುಗ್ಗುವ ಮತ್ತು ಪ್ರಪಂಚವನ್ನು ಅಂತ್ಯಗೊಳಿಸುವ ಕ್ಷುದ್ರಗ್ರಹಗಳು ಇನ್ನೂ ಕಾಲ್ಪನಿಕ ಕ್ಷೇತ್ರದಲ್ಲಿ ಮಾತ್ರ ಇರುತ್ತವೆ. ಭೂಮಿಯ ಅಂತ್ಯ ಕುರಿತ ಆತಂಕಗಳಿಗೆ ಲಿಯೊನಾರ್ಡೊ ಡಿ ಕ್ಯಾಪ್ರಿಯೊ-ಜೆನ್ನಿಫರ್ ಲಾರೆನ್ಸ್ ಅವರ ದುರಂತ ಚಲನಚಿತ್ರ 'ಡೋಂಟ್ ಲುಕ್ ಅಪ್' ಮೂಲಕ ಮತ್ತಷ್ಟು ಇಂಬು ಸಿಕ್ಕಿತು. 

ಇತ್ತೀಚಿನ ಬಾನಾಚೆಯ ಸುದ್ದಿಯು ಆತಂಕಕ್ಕೆ ಕಾರಣವಾಗಿದೆ. 

ಮುಂದಿನ ಒಂದೆರಡು ದಿನಗಳಲ್ಲಿ ಐದು ವಿಭಿನ್ನ ಕ್ಷುದ್ರಗ್ರಹಗಳು ಬೆರಗುಗೊಳಿಸುವ ವೇಗದಲ್ಲಿ ಭೂಮಿ ಕಡೆಗೆ ಆಗಮಿಸಲಿವೆ. ಇದರಲ್ಲಿ ಅತಿ ದೊಡ್ಡದು 250 ಅಡಿಗಳು ಗಗನಚುಂಬಿ ಕಟ್ಟಡದಷ್ಟು ದೊಡ್ಡ ಕ್ಷುದ್ರಗ್ರಹ. ಉಳಿದ ನಾಲ್ಕು ವಿಮಾನದ ಗಾತ್ರದವು. ಇವುಗಳಲ್ಲಿ ಒಂದು ನಿಜವಾಗಿಯೂ ಭೂಮಿಗೆ ಹತ್ತಿರ ಬರುವ ನಿರೀಕ್ಷೆಯಿದೆ. ನಾವು ಆತಂಕ ಪಡಬೇಕೇ? ನಮಗೆ ತಿಳಿದಿರುವುದು ಇಲ್ಲಿದೆ:

ಮೊದಲನೆಯದಾಗಿ, ಐದು ಕ್ಷುದ್ರಗ್ರಹಗಳಲ್ಲಿ ಯಾವುದು ದೊಡ್ಡದು ಮತ್ತು ಭೂಮಿಗೆ ಹತ್ತಿರದಲ್ಲಿದೆ? ಗಂಟೆಗೆ 65,215 ಕಿಮೀ ವೇಗದಲ್ಲಿ ಚಲಿಸುವ ಮತ್ತು ಸರಿಸುಮಾರು 250 ಅಡಿಗಳಷ್ಟು ಬೃಹತ್ ಗಾತ್ರ ಹೊಂದಿರುವ '2024 ಎಂಟಿ1'. ಇದು 1.5 ದಶಲಕ್ಷ ಕಿಮೀ ದೂರದಲ್ಲಿ ಭೂಮಿಗೆ ಹತ್ತಿರವಾಗುವ ನಿರೀಕ್ಷೆಯಿದೆ. ಇದು ಅಪೊಲೊ ಗುಂಪಿನ ಕ್ಷುದ್ರಗ್ರಹ ಮತ್ತು ಇದನ್ನು ನಾಸಾ ಭೂಮಿಯಂಥ ವಸ್ತು (ನಿಯೋ) ಎಂದು ಹೆಸರಿಸಿದೆ. ಇದು ಇಂದು ಹಾದುಹೋಗುವ ನಿರೀಕ್ಷೆಯಿದೆ (ಜುಲೈ 8).

ಇತರ ನಾಲ್ಕು ಕ್ಷುದ್ರಗ್ರಹಗಳು ಯಾವುವು?: 200 ಅಡಿ ವ್ಯಾಸದ '2024 ಎನ್‌ಬಿ1' ಹೆಸರಿನ ಮತ್ತೊಂದು ದೊಡ್ಡ ಕ್ಷುದ್ರಗ್ರಹ ನಾಳೆ (ಜುಲೈ 9) ಭೂಮಿಯನ್ನು ದಾಟುವ ನಿರೀಕ್ಷೆಯಿದೆ. ಇದು ಭೂಮಿಯಿಂದ 5.5 ದಶಲಕ್ಷ ಕಿಮೀ ದೂರದಲ್ಲಿರುತ್ತದೆ. ಇದು ಕ್ಷುದ್ರಗ್ರಹಗಳ ಅಟೆನ್ ಗುಂಪಿಗೆ ಸೇರಿದೆ ಮತ್ತು ವಿಮಾನದ ಗಾತ್ರ ಹೊಂದಿದೆ. ಇದನ್ನು ಎನ್‌ಇಕ್ಯು ಎಂದು ವರ್ಗೀಕರಿಸಲಾಗಿದೆ. ಗಂಟೆಗೆ 21,755 ಮೈಲು ವೇಗ ಹೊಂದಿದೆ.

ಜುಲೈ 9 ರಂದು ಸುಮಾರು 84 ಅಡಿ ವ್ಯಾಸದ ಮತ್ತೊಂದು ಬೃಹತ್ ಕ್ಷುದ್ರಗ್ರಹ ಕೂಡ ಹಾದುಹೋಗುತ್ತದೆ. '2024 ಎನ್‌ಆರ್‌ 1' ಎಂದು ಕರೆಯಲ್ಪಡುವ ಇದು 6.6 ದಶಲಕ್ಷ ಕಿಮೀ ದೂರದಲ್ಲಿ ಹಾದುಹೋಗುತ್ತದೆ. 

'2024 ಎಂಇ1', ಜುಲೈ 10 ರಂದು ಭೂಮಿಗೆ 4.3 ದಶ ಲಕ್ಷ ಕಿಮೀ ದೂರದಲ್ಲಿ ಹಾದುಹೋಗಲಿದ್ದು, ಅಮೋರ್ ಕ್ಷುದ್ರಗ್ರಹಗಳ ಗುಂಪಿಗೆ ಸೇರಿದೆ; '2022 ವೈಎಸ್‌5' ಜುಲೈ 11 ರಂದು 4.2 ದಶಲಕ್ಷ ಕಿಮೀ ದೂರದಲ್ಲಿ ಭೂಮಿಯನ್ನು ಹಾದು ಹೋಗುತ್ತದೆ. ಗಂಟೆಗೆ 13,045 ಮೈಲು ವೇಗದಲ್ಲಿ ಪ್ರಯಾಣಿಸುವ ಇದನ್ನು ನಿಯೋ ಎಂದು ವರ್ಗೀಕರಿಸಲಾಗಿದೆ. 

ಕ್ಷುದ್ರಗ್ರಹಗಳು ಅಪಾಯಕಾರಿಯೇ?: 200 ಅಥವಾ 250 ಅಡಿ ಅಳತೆಯ ಕ್ಷುದ್ರಗ್ರಹಗಳನ್ನು ಸಂಭಾವ್ಯ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಅವು ಭೂಮಿಗೆ ಡಿಕ್ಕಿ ಹೊಡೆದರೆ ಗಮನಾರ್ಹ ಹಾನಿ ಉಂಟುಮಾಡಬಹುದು. ಆದರೆ, ಈ ಕ್ಷುದ್ರಗ್ರಹಗಳು ಭೂಮಿಯನ್ನು ಹಾದು ಹೋಗುತ್ತವೆಯೇ ಹೊರತು ಯಾವುದೇ ಅಪಾಯ ಉಂಟುಮಾಡುವುದಿಲ್ಲ ಎಂದು ನಾಸಾ ಹೇಳಿದೆ. 

ಕ್ಷುದ್ರಗ್ರಹಗಳು ಏನು ಹಾನಿ ಆಗಲಿದೆ?: 2024 ಎಂಟಿ1 ಗಾತ್ರದ ಕ್ಷುದ್ರಗ್ರಹಗಳು ಭೂಮಿಗೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಅವು ಡಿಕ್ಕಿ ಹೊಡೆದರೆ ತೀವ್ರ ವಿನಾಶ ಉಂಟುಮಾಡುತ್ತವೆ. 

ಸುನಾಮಿ, ಬೆಂಕಿ, ಬೃಹತ್ ಸ್ಫೋಟ ಮತ್ತು ಹೆಚ್ಚಿನದನ್ನು ಪ್ರಚೋದಿಸಬಹುದು. ಧೂಳು ಮತ್ತು ಬೂದಿ ಆಕಾಶಕ್ಕೆ ಏರುತ್ತದೆ ಮತ್ತು ಹಲವಾರು ವರ್ಷಗಳವರೆಗೆ ಬೆಳಕನ್ನು ನಿರ್ಬಂಧಿಸುತ್ತವೆ. ಬೆಳೆ ವೈಫಲ್ಯ ಮತ್ತು ಕಾಡಿನ ಬೆಂಕಿ ಪ್ರಾರಂಭವಾಗುತ್ತದೆ. ಇದು ಸಾಮೂಹಿಕ ಕ್ಷಾಮಕ್ಕೆ ಕಾರಣವಾಗುತ್ತದೆ. ಆದರೆ, 100 ಮೀಟರ್‌ಗಿಂತ ದೊಡ್ಡ ಕ್ಷುದ್ರಗ್ರಹಗಳು ಪ್ರತಿ 10,000 ವರ್ಷಗಳಿಗೊಮ್ಮೆ ಭೂಮಿಗೆ ಸ್ಥಳೀಯವಾಗಿ ಹಾನಿ ಉಂಟುಮಾಡುತ್ತವೆ. ಜೀವಕ್ಕೆ ಅಪಾಯವನ್ನುಂಟುಮಾಡುವ 1 ಕಿಲೋಮೀಟರ್‌ಗಿಂತ ದೊಡ್ಡವು ಕೆಲವು ದಶಲಕ್ಷ ವರ್ಷಗಳಿಗೊಮ್ಮೆ ಮಾತ್ರ ಬರುತ್ತವೆ. 

ಕ್ಷುದ್ರಗ್ರಹಗಳ ಜಾಡು ಹಿಡಿಯುವುದು ಯಾರು?: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಭೂಮಿಯ ಸಮೀಪವಿರುವ ಅವಲೋಕನ ಕಾರ್ಯಕ್ರಮವು ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳನ್ನು ಪತ್ತೆಹಚ್ಚಿ, ವಿವರಿಸುತ್ತದೆ. ಇದಕ್ಕಾಗಿ ದೂರದರ್ಶಕಗಳು ಮತ್ತು ರೇಡಾರ್ ವ್ಯವಸ್ಥೆಗಳನ್ನು ಬಳಸುತ್ತದೆ. 

ಈ ಕ್ಷುದ್ರಗ್ರಹಗಳ ಪಥವನ್ನು ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಜಾಡು ಹಿಡಿಯುತ್ತಿದೆ.

ಕ್ಷುದ್ರಗ್ರಹಗಳ ಬಗ್ಗೆ ಏಕೆ ಈ ಆಸಕ್ತಿ ಬೆಳೆಯುತ್ತಿದೆ?: ಕ್ಷುದ್ರಗ್ರಹ 2024 ಎಂಟಿ1 ಖಗೋಳಶಾಸ್ತ್ರಜ್ಞರು ಮತ್ತು ಬಾಹ್ಯಾಕಾಶ ಉತ್ಸಾಹಿಗಳಲ್ಲಿ ಆಸಕ್ತಿ ಹುಟ್ಟುಹಾಕಿದೆ. ಅದರ ಸಂಯೋಜನೆ ಮತ್ತು ರಚನೆ ಬಗ್ಗೆ ದತ್ತಾಂಶ ಸಂಗ್ರಹಿಸಲು, ಆರಂಭಿಕ ಸೌರವ್ಯೂಹ ಮತ್ತು ಗ್ರಹ ರಚನೆ ಬಗ್ಗೆ ಹೆಚ್ಚಿನ ಒಳನೋಟಗಳನ್ನು ಪಡೆಯಲು ಒಂದು ಅವಕಾಶ. ನಾಸಾದ ಜೆಪಿಎಲ್‌ ನಲ್ಲಿರುವ ವಿಜ್ಞಾನಿಗಳಿಗೆ ಕ್ಷುದ್ರಗ್ರಹಗಳ ರೇಡಾರ್ ವೀಕ್ಷಣೆ ಅಮೂಲ್ಯ ಮಾಹಿತಿ ನೀಡುತ್ತದೆ.

ಕಳೆದ ವಾರ ಕ್ಷುದ್ರಗ್ರಹಗಳು ಹಾದುಹೋದಾಗ ಏನಾಯಿತು?: 2024 ಎಂಕೆ ಮತ್ತು 2011 ಯುಎಲ್‌21 ಕಳೆದ ವಾರ ಭೂಮಿ ಮೂಲಕ ಸುರಕ್ಷಿತವಾಗಿ ಹಾರಿದವು. ಅದನ್ನು ಅಧ್ಯಯನ ಮಾಡಿದ ನಾಸಾ ವಿಜ್ಞಾನಿಗಳು ಒಂದು ಚಿಕ್ಕ ಚಂದ್ರನನ್ನು ಸುತ್ತುತ್ತಿರುವುದನ್ನು ಕಂಡುಹಿಡಿದರು. ಇನ್ನೊಂದನ್ನು ಭೂಮಿಗೆ ಸಮೀಪಿಸುವ 13 ದಿನಗಳ ಮೊದಲು ಕಂಡುಹಿಡಿಯಲಾಯಿತು.

ಜೂನ್ 27 ರಂದು ಭೂಮಿಯನ್ನು 6.6 ದಶಲಕ್ಷ ಕಿಲೋಮೀಟರ್ ದೂರದಲ್ಲಿ ಅಥವಾ ಚಂದ್ರ ಮತ್ತು ಭೂಮಿಯ ನಡುವಿನ ಅಂತರದ ಸುಮಾರು 17 ಪಟ್ಟು ದೂರದಲ್ಲಿ ಹಾದುಹೋಗುವಾಗ, ಕ್ಷುದ್ರಗ್ರಹ 2011 ಯುಎಲ್‌21 ಗೋಳಾಕಾರದಲ್ಲಿ ಇದ್ದುದು ಕಂಡುಬಂದಿದೆ. ಇದು ಚಿಕ್ಕ ಕ್ಷುದ್ರಗ್ರಹ ಅಥವಾ ಚಂದ್ರನನ್ನು ಹೊಂದಿದ್ದು, ಸುಮಾರು 3 ಕಿಲೋಮೀಟರ್ ದೂರದಿಂದ ಸುತ್ತುತ್ತದೆ.

ಜೂನ್ 29 ರಂದು, ಕ್ಷುದ್ರಗ್ರಹ 2024 ಎಂಕೆ ಭೂಮಿಯನ್ನು 2,95,000 ಕಿಲೋಮೀಟರ್ ದೂರದಲ್ಲಿ ಹಾದುಹೋಯಿತು. ಸುಮಾರು 500 ಅಡಿ ಅಗಲವಿದ್ದ ಈ ಕ್ಷುದ್ರ ಗ್ರಹವು ಒಂದೆರಡು ದಶಕಗಳಲ್ಲಿ ಸಂಭವಿಸುತ್ತದೆ ಎಂದು ನಾಸಾ ಹೇಳಿದೆ. ಆದ್ದರಿಂದ, ವಿಜ್ಞಾನಿಗಳು ಸಾಧ್ಯವಾದಷ್ಟು ದತ್ತಾಂಶವನ್ನು ಸಂಗ್ರಹಿಸಲು ಪ್ರಯತ್ನಿಸಿದರು.

ಕ್ಷುದ್ರಗ್ರಹ ಬೆದರಿಕೆಗೆ ತಡೆ: ನಾಸಾದ ಗ್ರಹಗಳ ರಕ್ಷಣಾ ಸಮನ್ವಯ ಕಚೇರಿ (ಪಿಡಿಸಿಒ) ಕ್ಷುದ್ರಗ್ರಹದ ಪರಿಣಾಮಗಳನ್ನು ತಡೆಗಟ್ಟುವ ಪರಿಹಾರಗಳ ಕಡೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕ್ಷುದ್ರಗ್ರಹಗಳನ್ನು ತಿರುಗಿಸುವ ಮತ್ತು ಪರಿಣಾಮಗಳನ್ನು ತಡೆಯುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಪಿಡಿಸಿಒ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ. ನಾಸಾ ಪ್ಲಾನೆಟರಿ ಡಿಫೆನ್ಸ್ ಕೋಆರ್ಡಿನೇಷನ್ ಆಫೀ‌‌ಸ್‌(ಡಿಎಆರ್‌ಟಿ) ಮಿಷನ್ ಸ್ಥಾಪಿಸಿದೆ.

ಇಸ್ರೋ ಅಧ್ಯಕ್ಷರು ಏನು ಹೇಳಿದರು?: ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ನಿಜವಾದ ಸಾಧ್ಯತೆಯಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ಈ ಘರ್ಷಣೆ ಕೆಲವೊಮ್ಮೆ ಮಾನವ ಜೀವದ ಅಳಿವಿಗೆ ಕಾರಣವಾಗಬಹುದು ಮತ್ತು ತಡೆಯಲು ರಕ್ಷಣಾ ಕ್ರಮಗಳು ಇರಬೇಕು ಎಂದು ಎಚ್ಚರಿಸಿದ್ದಾರೆ.

ಏಪ್ರಿಲ್ 13, 2029 ರಂದು ಭೂಮಿಯನ್ನು ಹಾದು ಹೋಗುವ ನಿರೀಕ್ಷೆಯಿರುವ 99942 ಅಪೋಫಿಸ್ ಕ್ಷುದ್ರಗ್ರಹವನ್ನು ವೀಕ್ಷಿಸಲು ಸೋಮನಾಥ್ ಅವರು ಉತ್ಸುಕರಾಗಿದ್ದಾರೆ. 99942 ಅಪೋಫಿಸ್ ಅನ್ನು ಅಧ್ಯಯನ ಮಾಡಲು ಭಾರತವು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ನಾಸಾದೊಂದಿಗೆ ಸಹಕರಿಸಬಹುದು.

ಕ್ಷುದ್ರಗ್ರಹದಿಂದ ಹಾನಿ ಸಂಭವಿಸಿದೆಯೇ?: ಜೂನ್ 30, 1908 ರಂದು ಕ್ಷುದ್ರಗ್ರಹವೊಂದು ಭೂಮಿಯ ವಾತಾವರಣಕ್ಕೆ ನುಗ್ಗಿ, ಸೈಬೀರಿಯದ ಮೇಲೆ ಆಕಾಶದಲ್ಲಿ ಸ್ಫೋಟಿಸಿತು. ವಿರಳ ಜನಸಂಖ್ಯೆಯ ಪ್ರದೇಶದಲ್ಲಿ ಸ್ಥಳೀಯರು ಬೆಂಕಿಯ ಉಂಡೆಯನ್ನು ನೋಡಿದರು ಎಂದು ನಾಸಾ ವೆಬ್‌ಸೈಟ್ ತಿಳಿಸಿದೆ. ಬೃಹತ್ ಕಾಡ್ಗಿಚ್ಚು ಸಂಭವಿಸಿತು ಮತ್ತು ಮರಗಳು ಮೈಲುಗಳವರೆಗೆ ಹಾರಿದವು ಎಂದು ವರದಿಯಾಯಿತು. ಈ ಕುರಿತ ಸಂಶೋಧನೆಗೆ 1927ರವರೆಗೆ ಈ ಪ್ರದೇಶಕ್ಕೆ ತಲುಪಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ.

Tags:    

Similar News