EY Employee's death| ಪುಣೆ ಕಚೇರಿ ಪರವಾನಗಿ ಪಡೆದಿಲ್ಲ

Update: 2024-09-25 10:36 GMT

ಪುಣೆ: ಕೇರಳ ಮೂಲಕ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಅವರ ಸಾವಿನ ನಂತರ ಸುದ್ದಿಯಲ್ಲಿರುವ ಅರ್ನ್ಸ್ಟ್ ಅಂಡ್ ಯಂಗ್ (ಇವೈ) ನ ಪುಣೆ ಕಚೇರಿಯು 2007 ರಿಂದ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದರು.

ಇದು ನಿಯಮಗಳ ಉಲ್ಲಂಘನೆ. ಸಂಸ್ಥೆಗೆ ನೋಟಿಸ್ ನೀಡಲಾಗುವುದು ಮತ್ತು ಅದರ ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ ಕ್ರಮ ಪ್ರಾರಂಭಿಸಲಾಗುವುದು ಎಂದು ಮಹಾರಾಷ್ಟ್ರ ಕಾರ್ಮಿಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಅಂಗಡಿಗಳು ಮತ್ತು ಸಂಸ್ಥೆಗಳ ಕಾಯಿದೆಯು ಉದ್ಯೋಗಿಗಳ ಯೋಗಕ್ಷೇಮವನ್ನು ಒಳಗೊಂಡಂತೆ ಎಲ್ಲ ರೀತಿಯ ವ್ಯಾಪಾರ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತದೆ, ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಅವರ ಆರೋಗ್ಯ- ಆರ್ಥಿಕ ಭದ್ರತೆಯನ್ನು ಖಾತರಿಪಡಿಸುತ್ತದೆ.

ʻಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ, ಕನಿಷ್ಠ ವೇತನ, ಹೆರಿಗೆ ಸೌಲಭ್ಯ, ವೇತನ ಪಾವತಿ ಮತ್ತು ಅಧಿಕಾವಧಿ ವೇತನಕ್ಕೆ ಸಂಬಂಧಿಸಿದಂತೆ ಇವೈ ಕಚೇರಿಯಲ್ಲಿ ತಪಾಸಣೆ ನಡೆಸಲಾಗಿದೆʼ ಎಂದು ಹೆಚ್ಚುವರಿ ಕಾರ್ಮಿಕ ಆಯುಕ್ತ ಶೈಲೇಂದ್ರ ಪೋಲ್ ಬುಧವಾರ ತಿಳಿಸಿದ್ದಾರೆ. ʻಇವೈ ಪುಣೆ ಕಚೇರಿ 2007 ರಲ್ಲಿ ಪ್ರಾರಂಭವಾದಾಗಿನಿಂದ, ಅಂಗಡಿಗಳು ಮತ್ತು ಸಂಸ್ಥೆಗಳ ಕಾಯಿದೆಯಡಿ ಪರವಾನಗಿ ಪಡೆಯದೆ ಇರುವುದು ಪತ್ತೆಯಾಗಿದೆ,ʼ ಎಂದು ಹೇಳಿದರು.

ʻಪರವಾನಗಿ ಪಡೆಯದೆ ಇರುವುದು ಕಾನೂನಿನ ಉಲ್ಲಂಘನೆ. ಅವರಿಗೆ ಶೋಕಾಸ್ ನೋಟಿಸ್ ನೀಡಿ, ಉತ್ತರಕ್ಕಾಗಿ ಕಾಯುತ್ತೇವೆ. ಅದರ ಪ್ರಕಾರ ಮುಂದಿನ ಕ್ರಮ ನಿರ್ಧರಿಸಲಾಗುತ್ತದೆ,ʼ ಎಂದು ಅಧಿಕಾರಿ ಹೇಳಿದರು.

ಅನ್ನಾ(26) ಪುಣೆಯಲ್ಲಿ ಸಂಸ್ಥೆಗೆ ಸೇರಿದ ನಾಲ್ಕು ತಿಂಗಳಲ್ಲಿ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾಳೆ. ಅನ್ನಾ ಅವರ ತಾಯಿ ಇವೈ ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಪತ್ರ ಬರೆದು, ಕೆಲಸದ ಹೊರೆ ಮತ್ತು ಅನಿಯಮಿತ ಕೆಲಸ ಮಗಳ ಸಾವಿಗೆ ಕಾಣ ಎಂದು ಆರೋಪಿಸಿದರು. ಆದರೆ, ಸಂಸ್ಥೆ ಈ ಆರೋಪಗಳನ್ನು ತಳ್ಳಿಹಾಕಿದೆ.

ಅವರ ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಇತ್ತೀಚೆಗೆ ಹೇಳಿದ್ದಾರೆ.

Tags:    

Similar News